ದಲಿತ ಮಹಿಳೆಗೆ 6 ತಿಂಗಳ ಕಾಲ ಲೈಂಗಿಕ ದೌರ್ಜನ್ಯ ; ಡಿಎಂಕೆ ಯುವ ಘಟಕದ ಕಾರ್ಯಕರ್ತರು ಸೇರಿದಂತೆ 8 ಮಂದಿಯ ಬಂಧನ!

tamilnadu

ತಮಿಳುನಾಡಿನ ವಿರುದುನಗರದಲ್ಲಿ 22 ವರ್ಷದ ದಲಿತ ಮಹಿಳೆಗೆ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಎಂಟು ಜನರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಆಕೆ ಬಾಯಿಬಿಟ್ಟರೆ ವೀಡಿಯೊಗಳನ್ನು ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸುವ ಮುನ್ನ ಅವರು ಸುಮಾರು ಆರು ತಿಂಗಳ ಕಾಲ ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕವಾಗಿ ಹಿಂಸೆ ನೀಡಿದ್ದಾರೆ. ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಡಿಎಂಕೆ ಸಂಸದೆ ಕನಿಮೊಳಿ, ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಮತ್ತು ಅವರು ಯಾರೇ ಆಗಿರಲಿ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ.

ಈ ಘಟನೆ ಎಲ್ಲಿ ನಡೆದಿದೆ : ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಹರಿಹರನ್ ಎಂಬ ವ್ಯಕ್ತಿ ಸಂಪರ್ಕಿಸಿದ್ದು, ಆಕೆಯನ್ನು ತಾನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದಾನೆ. ಮಹಿಳೆ ಜೊತೆ ಸಂಬಂಧವನ್ನು ಪಡೆದ ಬಳಿಕ ಹರಿಹರನ್ ಆಕೆಯನ್ನು ಆಗಸ್ಟ್ 20, 2021 ರಂದು ವೈದ್ಯಕೀಯ ಗೋಡಾನ್ಗೆ ಕರೆಸಿಕೊಂಡಿದ್ದಾನೆ. ನಂತರ ಈ ವ್ಯಕ್ತಿ ತನ್ನ ಸ್ನೇಹಿತರೊಡನೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಅವರ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಹರಿಹರನ್ ತನ್ನ ಸ್ನೇಹಿತರಾದ ಪ್ರವೀಣ್, ಜುನೈದ್ ಅಹ್ಮದ್ ಮತ್ತು 15 ರಿಂದ 16 ವರ್ಷದೊಳಗಿನ ನಾಲ್ವರು ಶಾಲಾ ವಿದ್ಯಾರ್ಥಿಗಳೊಂದಿಗೆ ಈ ನೀಚ ಕೃತ್ಯ ಎಸಗಿದ್ದು, ಬಾಯಿಬಿಟ್ಟರೇ ವೀಡಿಯೋವನ್ನು ಹೊರಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಎಲ್ಲಾ ಏಳು ಆರೋಪಿಗಳು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಮಹಿಳೆ ಮೇಲೆ ಅನೇಕ ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಬ್ಲ್ಯಾಕ್‌ಮೇಲ್ ಬೆದರಿಕೆಯ ಅಡಿಯಲ್ಲಿ, ಆರು ತಿಂಗಳ ಅವಧಿಯಲ್ಲಿ ಆಕೆಯ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.

ಈ 7 ಜನರ ಹಿಂಸೆಗೆ ನರಳಾಡುತ್ತಿದ್ದ ಮಹಿಳೆ ತನ್ನ ಸ್ನೇಹಿತನ ಸಹಾಯ ಕೇಳುತ್ತಾಳೆ. ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮಾದಸಾಮಿಯನ್ನು ಸಂಪರ್ಕಿಸಿ, ಏಳು ಪುರುಷರ ವಿರುದ್ಧ ಸಹಾಯವನ್ನು ಕೋರಿದರು ಕೂಡ ಸ್ಪಂದಿಸದ ಮಾದಸಾಮಿ, ಮಹಿಳೆ ಫೋನ್‌ ಕಿತ್ತುಕೊಂಡು ವೀಡಿಯೊವನ್ನು ನೋಡಿ, ಸಹಾಯ ಮಾಡದೇ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾನೆ. ತನ್ನ ಆಸೆಯನ್ನು ಪೂರೈಸದೆ ಇದ್ದರೇ ಈ ವಿಡಿಯೋವನ್ನು ನಿಮ್ಮ ತಾಯಿಗೆ ತೋರಿಸುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ಚಿತ್ರಹಿಂಸೆಯನ್ನು ಸಹಿಸಲಾಗದೆ ಸಂತ್ರಸ್ತೆ ವಿರುದುನಗರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆಯ ನಂತರ ಎಲ್ಲಾ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಹರಿಹರನ್ ಮತ್ತು ಜುನೈದ್ ಡಿಎಂಕೆ ಯೂತ್ ವಿಂಗ್ ಕಾರ್ಯಕರ್ತರು. ಪ್ರವೀಣ್ ಮತ್ತು ಮಾದಸಾಮಿ ವಿರುದ್ಧ ಐಪಿಸಿ ಸೆಕ್ಷನ್ 376 (2) (ಎನ್), 354 (ಸಿ), 354 (ಡಿ), ಐಟಿ ಕಾಯ್ದೆಯ 66 (ಇ) ಮತ್ತು 3 (1) (ಡಬ್ಲ್ಯು) (ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 1), SC/ST POA ಕಾಯಿದೆಯ 3 (2) (v).

ಈ ಮಧ್ಯೆ, 15 ರಿಂದ 16 ವರ್ಷದೊಳಗಿನ ನಾಲ್ವರು ಶಾಲಾ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಅವರನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆಗಳು ಗಂಭೀರವಾಗಿ ನಡೆಯುತ್ತಿವೆ.

Exit mobile version