ಟ್ಯಾಂಕರ್‌ ಟೆನ್ಷನ್‌: ಅಂಡರ್ ಪಾಸ್ನಲ್ಲಿ ಸಿಲುಕಿದ ಗ್ಯಾಸ್‌ ಟ್ಯಾಂಕರ್, ಪುಣೆ- ಬೆಂಗಳೂರು ಹೈವೇ ಬಂದ್‌

Dharwad: ಧಾರವಾಡ (Dharwad) ಹೈಕೋರ್ಟ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡುಗೆ ಅನಿಲ ಸಾಗಿಸುತ್ತಿದ್ದ ಒಂದು ಟ್ಯಾಂಕರ್ (tanker stuck in nh4) ಅಂಡರ್ ಪಾಸ್ ನಲ್ಲಿ

ಸಿಲುಕಿಕೊಂಡಿದ್ದು, ಅದರಿಂದ ಗ್ಯಾಸ್ (Gas) ಸೋರಿಕೆಯಾಗುತ್ತಿರುವ ಆತಂಕಕಾರಿ ಘಟನೆ ಸಂಭವಿಸಿದೆ. ಈ ಕಾರಣದಿಂದ ಪುಣೆ (Pune) -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ

ಸಂಪೂರ್ಣ ಬಂದ್ (Bandh) ಮಾಡಲಾಗಿದೆ. ಮತ್ತು ಪೊಲೀಸರು ವಿಷಯ ತಿಳಿದೊಡನೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮುನ್ನೆಚ್ಚರಿಕಾ ಕ್ರಮ ತೆಗದುಕೊಂಡಿದ್ದಾರೆ. ಅದೇ ರೀತಿ ಅಗ್ನಿಶಾಮಕ

ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ಅನಿಲ ಸೋರಿಕೆ ತಡೆಯಲು ಸಮರೋಪಾದಿಯಲ್ಲಿ (tanker stuck in nh4) ಕಾರ್ಯಾಚರಣೆ ಮಾಡುತ್ತಿದ್ದಾರೆ.

ಪುಣೆ-ಬೆಂಗಳೂರು (Bengaluru) ರಾಷ್ಟೀಯ ಹೆದ್ದಾರಿಯಲ್ಲಿ ಟ್ಯಾಂಕರ್‌ನಿಂದ ಭಾರಿ ಪ್ರಮಾಣದಲ್ಲಿ ಅನಿಲ ಸೋರಿಕೆ ಆಗಿರುವುದರಿಂದ ರಾಷ್ಟೀಯ ಹೆದ್ದಾರಿಯನ್ನು ಬಂದ್‌ ಮಾಡಿ ಟ್ಯಾಂಕರ್‌

ಹೊರತೆಗೆಯುವ ಹಾಗೂ ಸೋರಿಕೆ ತಡೆಯಲು ಪ್ರಯತ್ನಿಸಲಾಗುತ್ತಿದೆ. ಬುಧವಾರ ಬೇಲೂರು (Beluru) ಇಂಡಸ್ಟ್ರಿಯಲ್‌ ಪ್ರದೇಶದಿಂದ ಗ್ಯಾಸ್‌ ತುಂಬಿದ ಲಾರಿಯೊಂದು ಬರುವ ಸಮಯದಲ್ಲಿ

ಹೈಕೋರ್ಟ್‌ (Highcourt) ಬಳಿಯ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ ಪಾಸ್‌ ನಲ್ಲಿ ತೆರಳಲು ಯತ್ನಿಸಿದಾಗ ಲಾರಿ ಸಿಕ್ಕಿ ಹಾಕಿಕೊಂಡಿದ್ದು, ಇದರಿಂದ ಅನಿಲ ಸೋರಿಕೆಯಾಗಿದೆ.

ಧಾರವಾಡ ನಗರ ಪೊಲೀಸರು (Police) ಸೇರಿದಂತೆ ಜಿಲ್ಲಾ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳದ ವಾಹನಗಳು ಬಂದಿದ್ದು,

ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಂಡರ್ ಪಾಸ್‌ (Under pass) ಚಿಕ್ಕದಾಗಿ ಇದ್ದ ಕಾರಣ ದೊಡ್ಡ ಲಾರಿ ಸಿಲುಕಿಕೊಂಡಿದ್ದು, ಮಧ್ಯೆ ಸಿಲುಕಿದ್ದ ಲಾರಿ ಹೊರ ತೆಗೆಯಲು ಚಾಲಕ ಪ್ರಯತ್ನಿಸಿದ್ದಾನೆ.

ಆದರೆ ಈ ವೇಳೆ ಟ್ಯಾಂಕರ್‌ಗೆ ಧಕ್ಕೆಯಾಗಿ ಅನಿಲ ಸೋರಿಕೆ ಶುರುವಾಗಿದೆ.

ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿ ಜಿ.ಟಿ. ದೇವೇಗೌಡ ನೇಮಕ ; ಲೋಕಸಭಾ ಚುನಾವಣೆ ಹೊಣೆಗಾರಿಕೆ..!

ಇದರಿಂದ ಗಾಬರಿಯಾದ ಚಾಲಕ ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಈ ಘಟನೆ ವೇಳೆ 500 ಮೀಟರ್‌ ಅಧಿಕ ಪ್ರದೇಶದಲ್ಲಿಅನಿಲ

ಸೋರಿಕೆಯಾಗಿದ್ದು, ಸಂಜೆಯಿಂದ ರಾತ್ರಿವರೆಗೂ ಸೋರಿಕೆಯಾಗುತ್ತಲೇ ಇತ್ತು. ಇಡೀ ವಾತಾವರಣದಲ್ಲಿ ಅನಿಲ ಸೋರಿಕೆಯ ವಿಷಯ ಜನರಿಗೆ ತಿಳಿಯುತ್ತಿದ್ದಂತೆಯೇ ಆತಂಕ ಶುರುವಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರವನ್ನೇ ಬಂದ್‌ (Bandh) ಮಾಡಲಾಗಿದೆ.

ಬೇಲೂರು, ಕೋಟೂರು (Kotoor), ಹೆಗ್ಗೇರಿ, ಮುಮ್ಮಿಗಟ್ಟಿ (Mummigatti) ಸೇರಿದಂತೆ ಅನೇಕ ಗ್ರಾಮಗಳಲ್ಲಿಆತಂಕ ಸೃಷ್ಟಿಯಾಗಿದ್ದು, ಈ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಪರ್ಯಾಯ

ಮಾರ್ಗ ಮಾಡಲಾಗಿದೆ. 30 ಕಿ.ಮೀ. ರಸ್ತೆ ಬಂದ್‌, ವಿದ್ಯುತ್‌ ಸಂಪರ್ಕ ಕಡಿತ

ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್‌ ಟ್ಯಾಂಕರ್‌ (Gas Tanker) ಅನಾಹುತವಾಗದಂತೆ ಪೊಲೀಸರು ತೀವ್ರ ನಿಗಾ ವಹಿಸಿದ್ದು, ಸುಮಾರು 30 ಕಿ.ಮೀ. ರಸ್ತೆ ಬಂದ್‌ ಆಗಿದ್ದು, ಸಂಜೆ 5 ಗಂಟೆಯಿಂದ ಕಾರ್ಯಾಚರಣೆ

ಆರಂಭವಾಗಿದೆ. ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದ್ದು, ಬೆಳಗಾವಿ (Belgaum) ರಸ್ತೆಯಿಂದ ಬಾಗೇವಾಡಿ ವರೆಗೆ ಮತ್ತು ಹುಬ್ಬಳ್ಳಿಯ (Hubballi)

ಕಡೆಯಿಂದ ತಡಸ ಕ್ರಾಸ್‌ ವರೆಗೂ ವಾಹನಗಳು ನಿಂತಿವೆ.

ಘಟನೆ ನಡೆದ ಸುತ್ತಲಿನಲ್ಲಿರುವ ಪ್ರದೇಶಗಳಲ್ಲಿ ಅಂದರೆ ಬೇಲೂರು, ಕೋಟೂರು, ಹೆಗ್ಗೇರಿಗಳಲ್ಲಿ (Heggeri) ಟ್ಯಾಂಕರ್‌ ನಿಂದ ಅನಿಲ ಸೋರಿಕೆ ಆಗುತ್ತಿರುವುದರಿಂದ ಕೆಲ ಗ್ರಾಮಗಳ ವಿದ್ಯುತ್‌ ಸಂಪರ್ಕ

ಕಡಿತಗೊಳಿಸಲಾಗಿದ್ದು, ಯಾರು ಕೂಡ ಮನೆಯಲ್ಲಿ ಬೆಂಕಿ ಹತ್ತಿಸಬಾರದು ಎಂದು ಗ್ರಾಮಗಳಲ್ಲಿ ಪೊಲೀಸರು ಅನೌನ್ಸ್ ಮಾಡುತ್ತಿದ್ದಾರೆ. ಹಾಗಾಗಿ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿದ್ದು, ಟ್ಯಾಂಕರ್‌ನಲ್ಲಿನ

ಗ್ಯಾಸ್‌ ಲೀಕ್‌ (Gas Leek) ಆಗುವವರೆಗೂ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version