Tejasvi Surya: ಆಟ ಆಡುವ ಮಕ್ಕಳಿಗೆ ಅಧಿಕಾರ ನೀಡಿದ್ರೆ ಏನಾಗುತ್ತದೆ ಎಂಬುದಕ್ಕೆ ತೇಜಸ್ವಿ ಸೂರ್ಯ ಉದಾಹರಣೆ

Bengaluru: ಕಳೆದ ತಿಂಗಳು ಚೆನ್ನೈ(Chennai) ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವನ್ನು(Tejaswi opened emergency exit) ಹತ್ತಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ವಿಮಾನದಲ್ಲಿರುವ ತುರ್ತು ನಿರ್ಗಮನವನ್ನು ತೆರೆದಿದ್ದರು ಎಂಬ ಸುದ್ದಿಯ ಬೆನ್ನಲ್ಲೇ ಪ್ರತಿಪಕ್ಷ ಕಾಂಗ್ರೆಸ್ ಸಂಸದ ತೇಜಸ್ವಿ ಸೂರ್ಯ ಅವರನ್ನು ಲೇವಡಿ ಮಾಡಿದೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ(tejasvi surya) ಅವರನ್ನು ಗುರಿಯಾಗಿಸಿಕೊಂಡ ರಾಜ್ಯ ಕಾಂಗ್ರೆಸ್, ಸರ್ಕಾರ ಇಷ್ಟು ದಿನ ಈ ಘಟನೆಯನ್ನು ಮರೆಮಾಚಿದ್ದು ಏಕೆ ? ಎಂದು ಪ್ರಶ್ನಿಸಿದೆ.

ಈ ಆರೋಪದ ಬಗ್ಗೆ ತೇಜಸ್ವಿ ಸೂರ್ಯ ಅಥವಾ ಅವರ ಕಚೇರಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ! ಆಟ ಆಡುವ ಮಕ್ಕಳಿಗೆ ಅಧಿಕಾರ ನೀಡಿದರೆ ಏನಾಗುತ್ತದೆ ಎಂಬುದಕ್ಕೆ ತೇಜಸ್ವಿ ಸೂರ್ಯ ಸೂಕ್ತ ಉದಾಹರಣೆ.

ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆಯಲು ಯತ್ನಿಸಿದ ಮಕ್ಕಳ ಕಿಡಿಗೇಡಿತನದ ಕೃತ್ಯ ಇದೀಗ ಬೆಳಕಿಗೆ ಬಂದಿದೆ.

ಪ್ರಯಾಣಿಕರ ಪ್ರಾಣದೊಂದಿಗೆ ಇಂಥ ಚೇಷ್ಟೆ ಏಕೆ? ಎಂದು ರಾಜ್ಯ ಕಾಂಗ್ರೆಸ್(congress) ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದೆ.

ಸರಣಿ ಟ್ವೀಟ್ಗಳಲ್ಲಿ, ಮಾಧ್ಯಮ ವರದಿಗಳನ್ನು ಹಂಚಿಕೊಳ್ಳುವ ಮೂಲಕ, ವಿಮಾನ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ತುರ್ತು ನಿರ್ಗಮನ ಬಾಗಿಲು ತೆರೆಯುವ ಸೂರ್ಯ ಅವರ ಕೃತ್ಯವನ್ನು ಸರ್ಕಾರ ಏಕೆ ಮರೆಮಾಡಿದೆ ಎಂದು ಕೇಳಿದೆ.

ಅಷ್ಟಕ್ಕೂ ಸಂಸದರ ಉದ್ದೇಶವೇನು? ಅನಾಹುತ ಸೃಷ್ಟಿಸುವ ಯೋಜನೆಗಳೇನು? ಕ್ಷಮೆಯಾಚಿಸಿದ ನಂತರ ಅವರನ್ನು ಹಿಂಬದಿಯ (Tejaswi opened emergency exit) ಸೀಟಿಗೆ ಏಕೆ ವರ್ಗಾಯಿಸಲಾಯಿತು?

ಈ ಚೇಷ್ಟೆ ವಿಮಾನ ಟೇಕ್-ಆಫ್ ಆದ ನಂತರ ನಡೆಸಲಾಗಿದೆ? ಇದನ್ನು ಏಕೆ ತನಿಖೆ ಮಾಡುತ್ತಿಲ್ಲ? ಎಂದು ಕಾಂಗ್ರೆಸ್ ಸರಣಿ ಪ್ರಶ್ನೆಗಳನ್ನು ಕೇಳಿದೆ.

https://vijayatimes.com/protesters-wrote-letters-in-blood/

ಇನ್ನುತೇಜಸ್ವಿ ಸೂರ್ಯ ಅವರ ಹೇಳಿಕೆಯನ್ನು ವ್ಯಂಗ್ಯವಾಡಿದ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್(DK Shiva kumar) ಈ ಸುದ್ದಿಯ ವರದಿಯನ್ನು ಟ್ವೀಟ್(tweet) ಮೂಲಕ ಹಂಚಿಕೊಂಡಿದ್ದು, “ ಸುರಕ್ಷಿತ ಟೇಕ್ ಆಫ್ ಮತ್ತು ಲ್ಯಾಂಡಿಂಗ್ಗಾಗಿ, ಯಾವಾಗಲೂ ಕಾಂಗ್ರೆಸ್ನೊಂದಿಗೆ ಪ್ರಯಾಣಿಸಿ” ಎಂಬ ಶೀರ್ಷಿಕೆ ಕೊಟ್ಟು ಪೋಸ್ಟ್ ಮಾಡಿದ್ದಾರೆ.


ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಂದ ವಿಮಾನ 2 ಗಂಟೆ ವಿಳಂಬವಾಯಿತು ಮತ್ತು ಈ ಬಗ್ಗೆ ಯಾಕೆ ಪ್ರಶ್ನೆಯಾಗಿಲ್ಲ? ಬಿಜೆಪಿ ವಿಐಪಿ ಬ್ರ್ಯಾಟ್ಗಳು ಎಂದು ಎಐಸಿಸಿ(AICC) ಕರ್ನಾಟಕದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ನಲ್ಲಿ ಆರೋಪಿಸಿದ್ದಾರೆ.

Exit mobile version