Visit Channel

ಬಾರ್ಜ್‌ ದುರಂತ; ಮುಂಬೈ ದುರಂತದಲ್ಲಿ ಸಾವಿನ ಸಂಖ್ಯೆ 70ಕ್ಕೆ ಏರಿಕೆ; 16 ಮಂದಿ ಕಣ್ಮರೆ

mumbai-rain

ಮುಂಬೈ, ಮೇ. 24: ಈಗಾಗಲೇ ದಕ್ಷಿಣ ಭಾರತದಲ್ಲಿ ತೌಕ್ತೆ ಚಂಡಮಾರುತದ (Cyclone Tauktae) ಅಬ್ಬರಕ್ಕೆ ಮಹಾರಾಷ್ಟ್ರ, ಗುಜರಾತ್​ನಲ್ಲಿ ಅಪಾರ ಆಸ್ತಿ-ಪಾಸ್ತಿ ನಾಶವಾಗಿದೆ. ಚಂಡಮಾರುತದಿಂದ ಕಳೆದ ಸೋಮವಾರ ಮುಂಬೈನಲ್ಲಿ ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ ಪಿ-305 ಬಾರ್ಜ್​ನಲ್ಲಿದ್ದ  (Barge P-305) 261 ಜನರ ಪೈಕಿ ಒಟ್ಟು 70 ಜನರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಇನ್ನೂ 16 ಜನರು ನಾಪತ್ತೆಯಾಗಿದ್ದು, ಒಂದು ವಾರವೇ ಕಳೆದರೂ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಭಾರತೀಯ ನೌಕಾಪಡೆ ಸಮುದ್ರದಲ್ಲಿ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಿದ್ದು, ನಾಪತ್ತೆಯಾಗಿರುವ 16 ಮಂದಿ ಬದುಕುಳಿದಿರುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದ್ದು, ಅವರ ಮೃತದೇಹವೂ ಸಿಕ್ಕಿಲ್ಲ.

ಮುಂಬೈ ಕರಾವಳಿ ಪ್ರದೇಶದಲ್ಲಿ ಸುಮಾರು 35 ನಾಟಿಕಲ್ ಮೈಲು ದೂರದಲ್ಲಿ ಪಿ-305 ಬಾರ್ಜ್ ಮುಳುಗಿತ್ತು. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನೂ 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 261 ಮಂದಿಯಿದ್ದ ಈ ಬಾರ್ಜ್ ತೌಕ್ತೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಸೋಮವಾರ ಸಮುದ್ರದಲ್ಲಿ ಮುಳುಗಿತ್ತು. ಐಎನ್​ಎಸ್​ ಕೊಚ್ಚಿ (INS Cochin) ಮತ್ತು ಐಎನ್​ಎಸ್​ ಕೊಲ್ಕತ್ತಾದ (INS Kolkata) ಹಾಗೂ ಐಎನ್​ಎಸ್​ ಮಕರ್ ಹಡಗುಗಳಲ್ಲಿ ಭಾನುವಾರದವರೆಗೂ ಕಾರ್ಯಾಚರಣೆ ನಡೆಸಿ ಒಟ್ಟು 70 ಜನರ ಶವಗಳನ್ನು ಹೊರಗೆ ತೆಗೆಯಲಾಗಿದೆ. 188 ಜನರನ್ನು ಇದುವರೆಗೂ ರಕ್ಷಿಸಲಾಗಿದೆ. ನಿನ್ನೆಯವರೆಗೂ ಐಎನ್​ಎಸ್​ ಮಕರ್​ ಹಡಗಿನಲ್ಲಿ ನೌಕಾಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮತ್ತೆ 7 ಶವಗಳನ್ನು ಹೊರತೆಗೆದಿದ್ದರು. ಈ ಮೂಲಕ ಇದುವರೆಗೂ ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 70ಕ್ಕೇರಿಕೆಯಾಗಿದೆ.

ಹಡಗುಗಳು, ಹೆಲಿಕಾಪ್ಟರ್, ಎನ್​ಡಿಆರ್​​ಎಫ್​ ಯೋಧರು ಈ ದುರಂತ ನಡೆದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಇದರ ನಡುವೆ ಮತ್ತೊಂದು ಚಂಡಮಾರುತ ಅಪ್ಪಳಿಸಲು ಸಜ್ಜಾಗಿದೆ. ಯಾಸ್ ಚಂಡಮಾರುತ (Cyclone Yaas) ಮೇ 26ರಂದು ಅಪ್ಪಳಿಸಲಿದ್ದು, ಇಂದಿನಿಂದ ಮೇ 26ರವರೆಗೆ ಕರಾವಳಿ ತೀರದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಪಶ್ಚಿಮ ಬಂಗಾಳ, ಒರಿಸ್ಸಾ, ತಮಿಳುನಾಡು, ಗೋವಾ ಸೇರಿದಂತೆ ಕರಾವಳಿ ತೀರದ ರಾಜ್ಯಗಳಲ್ಲಿ ಯಾಸ್ ಚಂಡಮಾರುತದ ಆರ್ಭಟವಿರಲಿದೆ.

ಜೂನ್ 1ರಂದು ಕೇರಳಕ್ಕೆ ಮುಂಗಾರು (Kerala Monsoon) ಪ್ರವೇಶವಾಗಲಿದೆ. ಅಷ್ಟರೊಳಗೆ ಯಾಸ್ ಎಂಬ ಮತ್ತೊಂದು ಚಂಡಮಾರುತ ಅಪ್ಪಳಿಸಲಿದ್ದು, ಇನ್ನೊಂದು ವಾರ ದಕ್ಷಿಣ ಕನ್ನಡ, ಉಡುಪಿ, ಕಾರವಾರ ಭಾಗಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಯಾಸ್ ಚಂಡಮಾರುತ ಇಂದು ಸಂಜೆ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ಕಡೆಗೆ ಚಲಿಸುವ ಸಾಧ್ಯತೆಯಿದೆ. ಹೀಗಾಗಿ, ಕರಾವಳಿ ತೀರದಲ್ಲಿರುವ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಚಂಡಮಾರುತವಾಗಿ ಬದಲಾಗಲಿದ್ದು, ಗುಜರಾತ್, ಮಹಾರಾಷ್ಟ್ರದ, ಪಶ್ಚಿಮ ಬಂಗಾಳ, ಒರಿಸ್ಸಾ ಸೇರಿ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಪಶ್ಚಿಮ ಬಂಗಾಳ, ಒರಿಸ್ಸಾ, ತಮಿಳುನಾಡು, ಗೋವಾ ಸೇರಿದಂತೆ ಕರಾವಳಿ ತೀರದ ರಾಜ್ಯಗಳಲ್ಲಿ ಯಾಸ್ ಚಂಡಮಾರುತದ ಆರ್ಭಟವಿರಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮೇ 26ರಂದು ಯಾಸ್ ಚಂಡಮಾರುತ ಪಶ್ಚಿಮ ಕರಾವಳಿಯ ರಾಜ್ಯಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಹೀಗಾಗಿ, ಕಡಲ ತೀರದ ಪ್ರದೇಶಗಳಲ್ಲಿ ಮೇ 26ರವರೆಗೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಯಾಸ್​ ಚಂಡಮಾರುತದ ಅಬ್ಬರ ತೀವ್ರವಾಗಿರಲಿದೆ ಎಂಬ ಕಾರಣಕ್ಕೆ ಈಗಾಗಲೇ ಎನ್​ಡಿಆರ್​ಎಫ್, ಕೋಸ್ಟಲ್ ಗಾರ್ಡ್, ಐಎನ್​ಎಸ್​ ಚಿಲಿಕಾಗೆ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಸನ್ನದ್ಧರಾಗಿರಲು ಸೂಚಿಸಿದೆ. ಮೇ 26ರಂದು ಯಾಸ್ ಚಂಡಮಾರುತ ಅಪ್ಪಳಿಸುವುದರಿಂದ ಈಗಾಗಲೇ ಭಾರೀ ಮಳೆ ಶುರುವಾಗಿದ್ದು, ಪಶ್ಚಿಮ ಬಂಗಾಳ, ಗುಜರಾತ್, ಒರಿಸ್ಸಾ, ಗೋವಾದ ಎಲ್ಲ ಕರಾವಳಿ ತೀರದ ಜಿಲ್ಲೆಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.