ರಾಜ್ಯದ ನೂತನ ಸಚಿವ ಸಂಪುಟ ರಚನೆ; ಪ್ರಮಾಣವಚನ ಸ್ವೀಕರಿಸಿದ 29 ಸಚಿವರು

ಬೆಂಗಳೂರು. ಆ. 04: ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಒಟ್ಟು 29 ನೂತನ ಸಚಿವರು ಸೇರ್ಪಡೆಯಾಗಿದ್ದಾರೆ. ಇಂದು 29 ಸಚಿವರು ರಾಜಭವನದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಮೊದಲಿಗೆ ಗೋವಿಂದ ಕಾರಜೋಳ ಅವರು ದೇವರ ಹೆಸರಿನಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಹೂ ಗುಚ್ಛ ನೀಡಿ ಸ್ವಾಗತಿಸಿದರು.   ಬಳಿಕ ಎರಡನೆಯವರಾಗಿ ಕೆ.ಎಸ್​.ಈಶ್ವರಪ್ಪ ದೇವರ ಹೆಸರಿನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಆರ್. ಅಶೋಕ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಬಿ.ಶ್ರೀರಾಮುಲು ಅವರು ದೇವರ ಹೆಸರಿನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಬಳಿಕ ವಿ.ಸೋಮಣ್ಣ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಉಮೇಶ್​ ಕತ್ತಿ, ಎಸ್​.ಅಂಗಾರ, ಜೆ.ಸಿ.ಮಾಧುಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಬಳಿಕ ಅರಗ ಜ್ಞಾನೇಂದ್ರ,  ಅಶ್ವತ್ಥ ನಾರಾಯಣ, ಸಿ.ಸಿ. ಪಾಟೀಲ್ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು

1.ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ

2.ಆರ್.ಅಶೋಕ್- ಪದ್ಮನಾಭ ನಗರ

3.ಅರವಿಂದ ಲಿಂಬಾವಳಿ- ಮಹದೇವಪುರ

4.ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ

5.ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು

6.ಉಮೇಶ್ ಕತ್ತಿ- ಹುಕ್ಕೇರಿ

7.ಎಸ್.ಟಿ.ಸೋಮಶೇಖರ್- ಯಶವಂತಪುರ

8.ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ

9.ಬೈರತಿ‌ ಬಸವರಾಜ – ಕೆ ಆರ್ ಪುರಂ

10.ಮುರುಗೇಶ್ ನಿರಾಣಿ – ಬಿಳಿಗಿ

11.ಶಿವರಾಂ ಹೆಬ್ಬಾರ್- ಯಲ್ಲಾಪುರ

12.ಶಶಿಕಲಾ ಜೊಲ್ಲೆ- ನಿಪ್ಪಾಣಿ

13.ಕೆಸಿ ನಾರಾಯಣ್ ಗೌಡ – ಕೆ‌ಆರ್ ಪೇಟೆ

14.ಸುನೀಲ್ ಕುಮಾರ್ – ಕಾರ್ಕಳ

15.ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ

16.ಗೋವಿಂದ ಕಾರಜೋಳ-ಮುಧೋಳ

17.ಮುನಿರತ್ನ- ಆರ್ ಆರ್ ನಗರ

18.ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ

19.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

20.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

21.ಹಾಲಪ್ಪ ಆಚಾರ್ – ಯಲ್ಬುರ್ಗ

22.ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ

23.ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ

24.ಪ್ರಭು ಚೌವ್ಹಾಣ್ – ಔರಾದ್

25.ವಿ ಸೋಮಣ್ಣ – ಗೋವಿಂದ್ ರಾಜನಗರ

26. ಎಸ್ ಅಂಗಾರ-ಸುಳ್ಯ

27. ಆನಂದ್ ಸಿಂಗ್ – ಹೊಸಪೇಟೆ

28.ಸಿ ಸಿ‌ ಪಾಟೀಲ್ – ನರಗುಂದ

29.ಬಿ.ಸಿ. ನಾಗೇಶ್ – ತಿಪಟೂರು

ಕಾರ್ಯಕ್ರಮಕ್ಕೆ ನೂತನ ಸಚಿವರು ತಮ್ಮ ಕುಟುಂಬಸ್ಥರೊಂದಿಗೆ ಆಗಮಿಸಿದ್ದರು. ಜಗದೀಶ್​ ಶೆಟ್ಟರ್​ ಸಂಪುಟದಲ್ಲಿ ಇರದೆ ಇದ್ರೂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

Exit mobile version