ವಕ್ರವಾದ ಮಾಂತ್ರಿಕ ಮರಗಳನ್ನು ಹೊಂದಿರುವ ವಿಶಿಷ್ಟವಾದ ಕಾಡಿನ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ಓದಿ

Polland

‘ದಿ ಕ್ರೂಕ್ಡ್ ಫಾರೆಸ್ಟ್’(The Crooked Forest) ಎಂಬುದು ಪೋಲೆಂಡ್‌ನ(Polland) ವಾಯುವ್ಯ ಭಾಗದಲ್ಲಿರುವ ವೆಸ್ಟ್ ಪೊಮೆರೇನಿಯಾದ ಗ್ರಿಫಿನೋ ಪಟ್ಟಣದ ಸಮೀಪವಿರುವ ನೌವ್ ಝಾರ್ನೊವೊ ಎಂಬ ಹಳ್ಳಿಯಲ್ಲಿರುವ ವಿಚಿತ್ರ ಆಕಾರದ ಪೈನ್ ಮರಗಳ(Pine Tree) ತೋಪು.

ಇದು ಪೋಲೆಂಡ್ನ ಸಂರಕ್ಷಿತ ನೈಸರ್ಗಿಕ ಸ್ಮಾರಕವಾಗಿದೆ. ಪೋಲೆಂಡ್‌’ನ ಈ ಕುತೂಹಲಕಾರಿ ಪುಟ್ಟ ಕಾಡಿನಲ್ಲಿ 400ಕ್ಕೂ ಹೆಚ್ಚು ಪೈನ್ ಮರಗಳು ತಳದಿಂದಲೇ 90 ಡಿಗ್ರಿ ಕೋನದ ರೀತಿ ಬೆಳೆಯುತ್ತವೆ.

ಹೌದು, ಇಡೀ ಕಾಡು ಸುಮಾರು 90 ಡಿಗ್ರಿಯಷ್ಟು ಕಾಂಡದಿಂದಲೇ ಬಾಗಿದಂತೆ ಕಂಡುಬರುತ್ತದೆ. ಇದು ಹಲವಾರು ವರ್ಷಗಳಿಂದ ಪ್ರವಾಸಿಗರ ಗಮನವನ್ನು ಸೆಳೆಯುತ್ತಿದೆ. ಇದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಜೊತೆಗೆ ಈ ಕಾಡಿನಲ್ಲಿ ನೇರವಾದ ವಕ್ರರಹಿತ ಮರಗಳೂ ಇವೆ.

ಈ ಮರಗಳು ಮಾತ್ರ ಸಾಮಾನ್ಯ ಮರಗಳ ಹಾಗೆ ನೇರವಾಗಿ ಬೆಳೆಯುತ್ತವೆ. ಈ ಕಾಡಿನಲ್ಲಿರುವ ಮರಗಳನ್ನು 1930ರ ದಶಕದಲ್ಲಿ ನೆಡಲಾಯಿತು.

.ಆದರೆ 7 ರಿಂದ 10 ವರ್ಷಗಳ ನಂತರ ಹೀಗೆ ಡೊಂಕಾಗಿ ಮರಗಳು ಬೆಳೆಯಲು ಆರಂಭಿಸಿದವು.

ಬಹುಶಃ ಗುರುತ್ವಕ್ಕೆ ಸಂಬಂಧಿಸಿದ ಅಥವಾ ಭೂಮ್ಯತೀತ ಪ್ರಭಾವಗಳಿಂದಾಗಿ ಮರಗಳು ಈ ರೀತಿ ಬೆಳೆದಿರಬಹುದು ಎಂದು ಹೇಳಲಾಗುತ್ತದೆ. ಮಾಂತ್ರಿಕ ಸಸ್ಯಗಳನ್ನು ಹೋಲುವ ಬಾಗಿದ ಮರಗಳನ್ನು ಹೊಂದಿರುವ ವಿಲಕ್ಷಣ ವಕ್ರ ಅರಣ್ಯವಾಗಿ ಇದು ಜನಪ್ರಿಯವಾಗಿದೆ.

ಈ ಅರಣ್ಯವಿರುವ ಸೈಟ್ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ ಮತ್ತು ಈ ಪ್ರದೇಶವು ಪೋಲ್ಯಾಂಡ್ ನ ಗಮನಾರ್ಹ ಪ್ರವಾಸಿ ಆಕರ್ಷಣೆಯಾಗಿ ಗಮನ ಸೆಳೆಯುತ್ತದೆ.
Exit mobile version