17ನೇ ಶತಮಾನದ ಜಾರ್ಜಿಯಾ ರಾಣಿಯ ಪಳೆಯುಳಿಕೆ ಹಸ್ತಾಂತರಿಸಿದ ಭಾರತ

ನವದೆಹಲಿ, ಜು. 10: ದೀರ್ಘಕಾಲದ ಕೋರಿಕೆಯ ಮೇರೆಗೆ 17ನೇ ಶತಮಾನದ ಜಾರ್ಜಿಯಾ ರಾಣಿ, ಸೈಂಟ್ ಕೆಟೆವನ್ ಅವರ ಪವಿತ್ರ ಪಳೆಯುಳಿಕೆಯನ್ನು ಭಾರತ ಜಾರ್ಜಿಯಾಕ್ಕೆ ಹಸ್ತಾಂತರಿಸಿದೆ.

16 ವರ್ಷಗಳ ಹಿಂದೆ ಗೋವಾದಲ್ಲಿ ಪತ್ತೆಯಾಗಿರುವ ಪಳೆಯುಳಿಕೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಸ್ತಾಂತರಿಸಿದರು. ಈ ಮೂಲಕ ದ್ವಿಪಕ್ಷೀಯ ಸ್ನೇಹ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಿದರು.

ಪೂರ್ವ ಯುರೋಪ್ ಹಾಗೂ ಪಶ್ಚಿಮ ಏಷ್ಯಾದ ಸಂಧಿಸ್ಥಾನದಲ್ಲಿರುವ ಜಾರ್ಜಿಯಾಕ್ಕೆ ಜೈಶಂಕರ್ ಎರಡು ದಿನಗಳ ಪ್ರವಾಸ ಹಮ್ಮಿಕೊಂಡಿದ್ದು, ಜಾರ್ಜಿಯಾದ ಪ್ರಧಾನಿ ಇರಾಕ್ಲಿ ಗರಿಬಾಶ್ವಿಲಿ ಹಾಗೂ ಕ್ಯಾಥೊಲಿಕ್ ಧರ್ಮಗುರು ಬೀಟಿಟ್ಯೂಡ್ ಇಲಿಯಾ II ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪೂಜಾರ್ಹವೆಂದು ರಕ್ಷಿಸಲ್ಪಟ್ಟ ಪವಿತ್ರ ಪಳೆಯುಳಿಕೆ ಹಸ್ತಾಂತರಿಸಿದರು.

1627ರಲ್ಲಿ ಗೋವಾದ ಸೈಂಟ್ ಆಗಸ್ಟೀನ್ ಕಾಂಪ್ಲೆಕ್ಸ್‌ನಲ್ಲಿ ಸಮಾಧಿ ಮಾಡಲಾಗಿತ್ತು ಎಂದು ಪೋರ್ಚುಗೀಸ್ ದಾಖಲೆಗಳು ಉಲ್ಲೇಖಿಸುತ್ತವೆ.

Exit mobile version