ಇತ್ತೀಚಿನ ದಿನಗಳಲ್ಲಿ ಬಿಪಿ (BP), ಶುಗರ್ (Sugar) ಜನರಲ್ಲಿ ಹೆಚ್ಚಾಗುತ್ತಿರುವಂತೆ ಅದೇ ರೀತಿಯಲ್ಲಿ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆಯೂ ಕೂಡ ಮಿತಿಮೀರುತ್ತಿದೆ. ಅದರಲ್ಲೂ ಆತಂಕದ ವಿಚಾರ ಏನೆಂದರೆ ಬಹಳ ಚಿಕ್ಕ ವಯಸ್ಸಿಗೆ ಹೃದಯದ ಕಾಯಿಲೆ ಸಮಸ್ಯೆ ಇರುವವರು ಕೂಡ ನಮ್ಮಲ್ಲಿಯೇ ಇದ್ದಾರೆ. ಹಾಗಾಗಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ದೂರವಿರಬೇಕೆಂದರೆ ಹೃದಯ ಸ್ನೇಹಿ ಆಗಿರುವ ಹಣ್ಣುಗಳನ್ನು ಸೇವನೆ ಮಾಡಬೇಕು.

ನಮ್ಮಲ್ಲಿ ಸ್ವಲ್ಪ ಜನರಿಗೆ ಹಣ್ಣುಗಳು ಎಂದರೆ ಅಷ್ಟಕ್ಕಷ್ಟೇ ಮಾರ್ಕೆಟ್‍ನಿಂದ ಹಣ ಕೊಟ್ಟು ತಂದಿಟ್ಟ ಹಣ್ಣುಗಳು, ಮನೆಯಲ್ಲಿ ಹಾಗೆಯೇ ಕೊಳೆತು ಹೋದರೂ ಕೂಡ ಅದನ್ನು ತಿಂದು ಮುಗಿಸುವ ಆಲೋಚನೆಯನ್ನು ಸಹ ಮಾಡದಿರುವುದು ವಿಪರ್ಯಾಸವೇ ಸರಿ ಆದರೆ ಈ ವಿಚಾರ ನಿಮಗೆ ಗೊತ್ತಿರಲಿ ಆಯಾ ಸೀಸನ್ ನಲ್ಲಿ ಸಿಗುವ ಹಣ್ಣುಗಳನ್ನು ಮಿತವಾಗಿ ಸೇವನೆ ಮಾಡುವುದರಿಂದ ದಿನಗಳು ಕಳೆದು ಹೋದ ಹಾಗೆ ಆರೋಗ್ಯ ವೃದ್ಧಿ ಆಗುವುದು ಮಾತ್ರವಲ್ಲದೆ ಅನೇಕ ಕಾಯಿಲೆಗಳಿಂದ ಈ ಹಣ್ಣುಗಳು ನಮ್ಮನ್ನುಕಾಯಿಲೆಗಳಿಂದ ದೂರವಿರಿಸುತ್ತದೆ. ಬನ್ನಿ ಹಾಗಾದ್ರೆ ಹೃದಯದ ಆರೋಗ್ಯ ವೃದ್ಧಿಸುವ ಹಣ್ಣುಗಳ ಬಗ್ಗೆ ತಿಳಿದುಕೊಳ್ಳೋಣ.
ಬೆರ್ರಿ ಹಣ್ಣುಗಳು:-
ಆರೋಗ್ಯಕರವಾದ ಹಣ್ಣುಗಳ ಸಾಲಿಗೆ ಬೆರ್ರಿ (Berry) ಹಣ್ಣುಕೂಡ ಒಂದು ಇದಕ್ಕೆ ಪ್ರಮುಖ ಕಾರಣ ಈ ಹಣ್ಣುಗಳಲ್ಲಿ ಕಂಡು ಬರುವ ಪ್ರಬಲ ಆಂಟಿ ಆಕ್ಸಿಡೆಂಟ್ ಹಾಗೂ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಅಗಾಧ ಪ್ರಮಾಣದಲ್ಲಿ ಇದ್ದುದರಿಂದ ಇಂತಹ ಹಣ್ಣುಗಳನ್ನು ಪ್ರತಿದಿನ ನಿಯಮಿತವಾಗಿ ಸೇವನೆ ಮಾಡುತ್ತಾ ಬರುವುದರಿಂದ ರಕ್ತದಲ್ಲಿ ಇರುವ ಒಳ್ಳೆಯ ಕೊಲೆಸ್ಟ್ರಾಲ್‍ಗಳನ್ನು (Cholesterol) ಪ್ರಚೋದಿಸಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ನಿಧಾನವಾಗಿ ಕರಗಿಸಲು ಮಾತ್ರವಲ್ಲದೆ ಹೃದಯದ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ.
ಮೂಸಂಬಿ ಹಣ್ಣು:-
ಸೇಬು ಹಣ್ಣಿನಂತೆ ಮೂಸಂಬಿ ಹಣ್ಣು ಕೂಡ ಈಗ ಮಾರುಕಟ್ಟೆಯಲ್ಲಿ ಹೇರಳವಾಗಿ ಸಿಗುತ್ತಿದೆ. ಸಿಟ್ರಸ್ (Citrus) ಜಾತಿಗೆ ಸೇರಿರುವ ಈ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಸಿಗುವುದರ ಜೊತೆಗೆ ಆರೋಗ್ಯಕ್ಕೆ ಬೇಕಾಗಿರುವ ಎಲ್ಲಾ ಬಗೆಯ ಪೌಷ್ಟಿಕಾಂಶ ಸತ್ವಗಳು, ಖನಿಜಾಂಶಗಳು, ಅಗಾಧ ಪ್ರಮಾಣದಲ್ಲಿ ಇರುವುದರಿಂದ ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ದೀರ್ಘಕಾಲದ ಕಾಯಿಲೆಗಳಾದ ಹೃದಯಕ್ಕೆ ಸಂಬಂದಿತ ಸಮಸ್ಯೆಗಳನ್ನು ಕೂಡ ದೂರ ಮಾಡುತ್ತದೆ. ಆದ್ದರಿಂದ ಈ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬಹುದು ಇಲ್ಲವಾದಲ್ಲಿ ಈ ಹಣ್ಣಿನ ರಸ ಕುಡಿದರು ಹಲವಾರು ಬಗೆಯ ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಇಷ್ಟೆ ಅಲ್ಲದೆ ಮೂಸಂಬಿ ಹಣ್ಣಿನ ಸಿಪ್ಪೆ ಕ್ಯಾನ್ಸರ್ (Cancer) ಬರದಂತೆ ತಡೆಗಟ್ಟಲು ಪ್ರಮುಖ ಪಾತ್ರವಹಿಸುತ್ತದೆ.

ಪಪ್ಪಾಯ:
ಪಪ್ಪಾಯ (Papaya) ಹಣ್ಣು ತನ್ನಲ್ಲಿ ಅತಿ ಹೆಚ್ಚು ನೈಸರ್ಗಿಕವಾದ ಸಿಹಿ ಅಂಶವನ್ನು ಒಳಗೊಂಡ ಹಣ್ಣಾಗಿದೆ. ಇದೇ ಕಾರಣಕ್ಕೆ ಈ ಹಣ್ಣನ್ನು ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಸಹ ಇಷ್ಟಪಡುತ್ತಾರೆ. ದಿನನಿತ್ಯವೂ ಸಣ್ಣ ಪೀಸ್ ಆದರೂ ಇದನ್ನು ಸೇವನೆ ಮಾಡುವುದರಿಂದ ದೇಹದ ರಕ್ತ ದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗಿ ಹೃದಯದ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿನ್ನುವುದರಿಂದ ಒಳ್ಳೆಯ ಲಾಭವಿದೆ.
ಸೀಬೆ ಹಣ್ಣುಗಳು:
ವಿಟಮಿನ್ ಸಿ (Vitamin C) ಹಾಗೂ ಪೊಟಾಶಿಯಂ ಅಂಶವು ಸಮೃದ್ಧವಾಗಿರುವಂತ ಸೀಬೆ ಹಣ್ಣುಗಳು ಆರೋಗ್ಯ ವೃದ್ಧಿಸುವುದರ ಜೊತೆಗೆ ಹೃದಯದ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ. ಪ್ರಮುಖವಾಗಿ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ, ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ವೃದ್ಧಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಸೀಬೆ ಹಣ್ಣು ಮಾತ್ರವಲ್ಲ ಇದರ ಎಲೆಗಳು ಕೂಡ ಅಷ್ಟೇ ಆರೋಗ್ಯಕಾರಿ. ಹಲ್ಲು ನೋವಿದ್ದರೆ ಇದರ ಎಲೆ ಮತ್ತು ಒಂದು ಲವಂಗ ಬಾಯಲ್ಲಿ ಸಣ್ಣಗೆ ಅಗೆದು ನೋವಿರುವ ಜಾಗದಲ್ಲಿ ಸ್ವಲ್ಪ ಹೊತ್ತು ಇರಿಸುವುದರಿದ ನೋವು ಮಾಯವಾಗುದಲ್ಲದೆ ಇನ್ನು ಅನೇಕ ಪ್ರಯೋಜನಗಳಿವೆ.
ದಾಳಿಂಬೆ ಹಣ್ಣುಗಳು:
ದಾಳಿಂಬೆ ಹಣ್ಣುಗಳಲ್ಲಿ ಕಂಡು ಬರುವ ಪಾಲಿಫಿನಾಲ್ (Polyphenol) ಎಂಬ ಪ್ರಬಲ ಆಂಟಿ ಆಕ್ಸಿಡೆಂಟ್ ಅಂಶಗಳು, ವಿವಿಧ ಬಗೆಯ ವಿಟಮಿನ್ಸ್ ಗಳು, ಖನಿಜಾಂಶಗಳು, ಹಲವಾರು ಕಾಯಿಲೆ ಗಳನ್ನು ನಮ್ಮಿಂದ ದೂರವಿರಿಸಲು ಸಹಾಯ ಮಾಡುತ್ತವೆ. ಹೃದಯದ ಆರೋಗ್ಯಕ್ಕೆ ಈ ಹಣ್ಣಿನಿಂದ ತುಂಬಾನೇ ಲಾಭವಿದೆ. ಹಾಗಾಗಿ ಪ್ರತಿದಿನ ಈ ಹಣ್ಣಿನ ಬೀಜಗಳನ್ನು ಸೇವನೆ ಮಾಡುವುದರಿಂದ, ಅಥವಾ ಇದರ ಜ್ಯೂಸ್ (Juice) ಅನ್ನು ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ ಹೃದಯದ ಆರೋಗ್ಯ ಕೂಡ ಚೆನ್ನಾಗಿರುತ್ತದೆ.
ಮೇಘಾ ಮನೋಹರ ಕಂಪು