- ಪುಲ್ವಾಮ ದಾಳಿಗೆ ಕಳೆಯಿತು ಮೂರು ವರುಷ
- ಚಾರ್ಚ್ ಶೀಟ್‌ಗಷ್ಟೇ ಸೀಮಿತಗೊಂಡಿತು ದಾಳಿಯ ತನಿಖೆ
- ಮುಂಬರುವ ಚುನಾವಣೆಯ ವೇಳೆ ಹೊರಬರುತ್ತಾ ತೀರ್ಪು?
- 40 ಯೋಧರ ಬಲಿದಾನಕ್ಕೆ ರಾಜಕಾರಣದ ಲೇಪ
ಭೀಕರ ಪುಲ್ವಾಮ ದಾಳಿ ಸಂಭವಿಸಿ ಇಂದಿಗೆ ಮೂರು ವರ್ಷಗಳೇ ಕಳೆದು ಹೋದವು. ಯಾರೋ ಕುಹಕಿಗಳು, ದುರ್ಜನರು, ಸಮಯ ಸಾಧಕರು ನಡೆಸಿದ ಷಡ್ಯಂತ್ರಕ್ಕೆ ನಮ್ಮ 40 ವೀರ ಯೋಧರು ಬಲಿಯಾದ್ರು. ನಮ್ಮ ದೇಶದ ಆಂತರಿಕ ಭದ್ರತೆ ಬಗ್ಗೆಯೇ ಈ ದಾಳಿ ಸಾಕಷ್ಟು ಪ್ರಶ್ನೆ ಮೂಡಿಸಿತು. ಜೊತೆಗೆ ಈ ಭಯಾನಕ ದಾಳಿ ಜನರಲ್ಲೂ ಸಾಕಷ್ಟು ಅನುಮಾನಗಳನ್ನು ಮೂಡಿಸಿದೆ. ಅದೇನಂದ್ರೆ ಈ ಭೀಕರ ದಾಳಿಯ ಕುರಿತು ಎನ್‌ಐಎ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದೆ. ಆದ್ರೆ ಈ ಘಟನೆಯ ವಿಚಾರಣೆ ಮುಗಿಯೋದು ಯಾವಾಗ? ಈ ಘಟನೆಯ ರಹಸ್ಯ ಬಯಲಾಗೋದು ಯಾವಾಗ? ಚುನಾವಣೆ ಹತ್ತಿರ ಬಂದಾಗ ಮಾತ್ರಾನ ಸರ್ಕಾರ ಸಮಸ್ಯೆಗಳ ಬೆನ್ನತ್ತಿ ಹೋಗುವುದು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಮುಂದೆ ಓದಿ.

ಫೆಬ್ರವರಿ 14 ರಂದು ವಿಶ್ವ ಪ್ರೇಮಿಗಳ ದಿನವನ್ನಾಗಿ ಆಚರಿಸಿದರೂ, ಕ್ರೂರ ಪುಲ್ವಾಮಾ ದಾಳಿಯ ಕಾರಣದಿಂದಾಗಿ ಇಂದು ಭಾರತಕ್ಕೆ ‘ಕಪ್ಪು ದಿನ’ ಹಾಗೂ ಶೋಕಾಚರಣೆಯ ದಿನವಾಗಿದೆ. ಹುತಾತ್ಮ ಯೋಧರನ್ನು ಸ್ಮರಿಸುವ ದಿನವಾಗಿದೆ. ಇದು ಇಲ್ಲಿಯವರೆಗೆ ಭಾರತೀಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿದೆ. ಮೂರು ವರ್ಷಗಳ ಹಿಂದೆ 14 ಫೆಬ್ರವರಿ 2019 ಇದೇ ದಿನದಂದು
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ನಗರದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ನಲವತ್ತು ಸಿಆರ್‌ಪಿಎಫ್ ಯೋಧರು ಹುತಾತ್ಮರಾದರು.

ಈ ಭೀಕರ ಘಟನೆ ನಡೆದು ಮೂರು ವರ್ಷ ಕಳೆದ್ರೂ ಇನ್ನೂ ಪ್ರಕರಣ ನ್ಯಾಯಾಲಯದಲ್ಲಿ ತನಿಖಾ ಹಂತದಲ್ಲೇ ಇದೆ. ಎನ್ಐಎ ಜಾರ್ಜ್ ಶೀಟ್ ಸಲ್ಲಿಸಿದೆ ಅಷ್ಟೇ. ಆದರೆ ಇದರ ವಿಚಾರಣೆ ಇಂದಿಗೂ ಮಂದಗತಿಯಲ್ಲಿ ಸಾಗುತ್ತಿರುವುದು ಭಾರತೀಯರಲ್ಲಿ ಅಚ್ಚರಿ ಮೂಡಿಸಿದೆ. ಆ ಕರಾಳ ದಿನ ನೆನಪಿಸಿಕೊಂಡಾಗ ಗ್ರಾ.ಔಟ್ ರಾಷ್ಟ್ರೀಯ ಹೆದ್ದಾರಿ 44 ರ ಮೂಲಕ ಜಮ್ಮುವಿನಿಂದ ಶ್ರೀನಗರಕ್ಕೆ 78 ವಾಹನಗಳ ಬೆಂಗಾವಲು ಪಡೆಯಲ್ಲಿ 2,500 ಕ್ಕೂ ಹೆಚ್ಚು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮಧ್ಯಾಹ್ನ 3:15ರ ಸುಮಾರಿಗೆ ಅನೇಕ ಸಿಆರ್‌ಪಿಎಫ್ ಏಜೆಂಟ್‌ಗಳನ್ನು ಹೊತ್ತೊಯ್ಯುತ್ತಿದ್ದ ವಾಹನಕ್ಕೆ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಭಯೋತ್ಪಾದಕ ಕಾರೊಂದು ಡಿಕ್ಕಿ ಹೊಡೆದು ಮಾರಣಾಂತಿಕ ಸ್ಫೋಟಕ್ಕೆ ಕಾರಣವಾಗುತ್ತದೆ.

ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪುತ್ತಾರೆ. ಪುಲ್ವಾಮಾ ದಾಳಿಗೆ ಭಾರತದ ಪ್ರತೀಕಾರವೇನು ? ಭಾರತದ ಭದ್ರತಾ ಪಡೆಗಳ ಮೇಲೆ ಮಾರಣಾಂತಿಕ ದಾಳಿ ನಡೆದ ಕೆಲವೇ ದಿನಗಳಲ್ಲಿ, ದೇಶದ ರಕ್ಷಣಾ ಪಡೆಗಳಿಂದ ಭಯೋತ್ಪಾದನಾ ನಿಗ್ರಹ ವೈಮಾನಿಕ ದಾಳಿ ನಡೆಸಲಾಯಿತು. ಫೆಬ್ರವರಿ 26, 2019ರ ಮುಂಜಾನೆ, ಭಾರತೀಯ ವಾಯುಪಡೆಯ ಹಲವಾರು ಜೆಟ್‌ಗಳು ಬಾಲಾಕೋಟ್‌ನಲ್ಲಿರುವ ಜೈಶ್‌ನ ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ದಾಳಿ ಮಾಡಿ, ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರನ್ನು, ಸುಮಾರು 500 ಕ್ಕೂ ಹೆಚ್ಚು ಜನರನ್ನು ಬಲಿಪಡೆಯಿತು. ಬಾಲಾಕೋಟ್‌ನಲ್ಲಿ ನಡೆದ ವೈಮಾನಿಕ ದಾಳಿಯ ನಂತರ, ಪಾಕಿಸ್ತಾನದ ವಾಯುಪಡೆಯು ಜಮ್ಮು ಮತ್ತು ಕಾಶ್ಮೀರದಲ್ಲಿನ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಲು ಪ್ರಯತ್ನಿಸಿತು.

ಈ ಪ್ರಯತ್ನವನ್ನು IAF ವಿಫಲಗೊಳಿಸಿತು. ಸಂಘರ್ಷದ ಸಮಯದಲ್ಲಿ, ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನದ ಪಡೆಗಳು ಹೊಡೆದುರುಳಿಸಿ ವಶಪಡಿಸಿಕೊಂಡರು. ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ನಂತರ ಪಾಕಿಸ್ತಾನದಿಂದ ಬಿಡುಗಡೆ ಮಾಡಿಸಲಾಯಿತು ಮತ್ತು ಭಾರತದ ಅತ್ಯಮೂಲ್ಯ ಮಿಲಿಟರಿ ಪ್ರಶಸ್ತಿಯಾದ ಪರಮ ವೀರಚಕ್ರ ನೀಡಿ ಗೌರವಿಸಲಾಯಿತು. ಇದು ಯುದ್ಧದ ಸಮಯದಲ್ಲಿ ವಿಶಿಷ್ಟ ಶೌರ್ಯವನ್ನು ಪ್ರದರ್ಶಿಸುವುದಕ್ಕಾಗಿ ನೀಡುವ ಶೌರ್ಯ ಪದಕವಾಗಿದೆ. ಪುಲ್ವಾಮಾ ದಾಳಿಯ ಭೀಕರತೆಗೆ ಈಗ ಮೂರು ವರ್ಷವಾದರೂ, ದಾಳಿಯಲ್ಲಿ ಪ್ರಾಣ ಕಳೆದುಕೊಂಡ ವೀರ ಸಿಆರ್‌ಪಿಎಫ್ ಯೋಧರ ಸ್ಮರಣಾರ್ಥ ಫೆಬ್ರುವರಿ 14 ಭಾರತೀಯರಿಗೆ ‘ಕಪ್ಪು ದಿನ’ವಾಗಿದೆ.

ಭಾರತದ ಮೇಲೆ ಆಗಾಗ ನಡೆಯುವ ಭಯೋತ್ಪಾದಕರ ದಾಳಿಯ ಸಂಪೂರ್ಣ ನಿಷೇಧಕ್ಕಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾನೂನು ಮಟ್ಟದಲ್ಲಿ ತನಿಖೆ ನಡೆಯಬೇಕಿದೆ. ಕಾನೂನು ತನ್ನ ದಾರಿ ಹಿಡಿಯಲಿ. ಸಾವಿಗೆ ಸಾವು ಪ್ರತೀಕಾರ ವಾಯಿತು, ಇದು ಒಂದು ಮಟ್ಟಕ್ಕೆ ಸಮಾಧಾನ ತಂದರೂ ನಮಗೆ ಇನ್ನು ನಿಜವಾದ ನ್ಯಾಯ ಸಿಕ್ಕಿಲ್ಲ. ಪ್ರತೀಕಾರಕ್ಕೂ ದೊಡ್ಡದಾದ ಪರಿಹಾರದ ಬಗೆಗೆ ಸರ್ಕಾರ ಚಿಂತಿಸಬೇಕಿದೆ. ಮುಂದೆಂದು ಇಂಥಹ ಕರಾಳ ದಿನ ಭಾರತದ ಪಾಲಾಗದಂತೆ ತಡೆಯಬೇಕಿದೆ. ಎಲ್ಲಿಯ ತನಕ ಸರ್ಕಾರ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲವೋ ಅಲ್ಲಿಯ ತನಕ ಭಾರತಕ್ಕೆ ಮುಖ್ಯವಾಗಿ ಗಡಿ ಪ್ರದೇಶದ ವಾಸಿಗಳಿಗೆ ಹಾಗೂ ದೇಶಕ್ಕಾಗಿ ಪ್ರಾಣ ಪಣವಾಗಿಟ್ಟು ಕೆಲಸ ಮಾಡುತ್ತಿರುವ ಯೋಧರಿಗೆ ರಕ್ಷಣೆ ಇಲ್ಲ.

ಪುಲ್ವಾಮದಂಥಾ ಭೀಕರ ದಾಳಿ ಮತ್ತೆಂದೂ ಮರುಕಳಿಸಬಾರದು ಅನ್ನೋದೇ ಪ್ರತಿಯೊಬ್ಬ ಭಾರತೀಯನ ಪ್ರಾರ್ಥನೆ. ಆದರೆ ಯೋಧರ ಬಲಿದಾನ ಯಾವ ಕಾರಣಕ್ಕೂ ರಾಜಕೀಯ ವಸ್ತುವಾಗಬಾರದು. ಈ ಬಲಿದಾನಕ್ಕೆ ನಿಜವಾದ ಅರ್ಥ ಸಿಗಬೇಕಾದರೆ ನ್ಯಾಯಾಲಯ ಆದಷ್ಟು ಬೇಗ ತೀರ್ಪು ನೀಡಿ ತಪ್ಪಿತಸ್ಥರಿಗೆ ಕಠಿಣಾತಿ ಕಠಿಣ ಶಿಕ್ಷೆ ನೀಡಲಿ. ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ಪ್ರಾರ್ಥಿಸಿಕೊಳ್ಳುತ್ತೇವೆ.
- ರಮಿತ ಕಾಮನಾಯಕನಹಳ್ಳಿ