ವಿವಿಧೆಡೆ ಟಿಪ್ಪು ಜಯಂತಿ ಆಚರಣೆ

ಬೆಂಗಳೂರು ನ 10 : ಇಂದು ಟಿಪ್ಪು ಸುಲ್ತಾನ್ ಜಯಂತಿ ಹಿನ್ನೆಲೆಯಲ್ಲಿ ನಾಡಿನ ಗಣ್ಯರು, ರಾಜಕಾರಣಿಗಳು, ವಿದ್ಯಾರ್ಥಿಗಳು ಟಿಪ್ಪು ಜಯಂತಿಯನ್ನು ಆಚರಿಸಿ ಶುಭಾಷಯ ಕೋರಿದ್ದಾರೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಅಪ್ರತಿಮ ಸ್ವಾತಂತ್ರ್ಯ ಸೇನಾನಿ, ದಕ್ಷ ಆಡಳಿತಗಾರ ಮತ್ತು ಜಾತ್ಯತೀತನಾಗಿ ಸರ್ವರನ್ನೂ ಪೊರೆದ ಟಿಪ್ಪು ಸುಲ್ತಾನ್ ನಾಡಿನ ಹೆಮ್ಮೆ” ಎಂದು ಟ್ವೀಟ್ ಮಾಡಿದ್ದಾರೆ. ರಾಜಕೀಯ ಪ್ರೇರಿತ ಅಪಪ್ರಚಾರಕ್ಕೆ ಕಿವಿಗೊಡದೆ ನೈಜ ಇತಿಹಾಸದ ಪುಟಗಳಿಂದ ಟಿಪ್ಪುವನ್ನು ಅರಿಯೋಣ. ನಾಡ ಬಂಧುಗಳಿಗೆ ಟಿಪ್ಪು ಜಯಂತಿಯ ಶುಭಾಶಯಗಳು” ಎಂದು ತಿಳಿಸಿದ್ದಾರೆ.

ಶಾಸಕ ಜಮೀರ್ ಅಹ್ಮದ್ ಖಾನ್ ಟಿಪ್ಪು ಜಯಂತಿಯ ಶುಭ ಕೋರಿದ್ದಾರೆ. “ಬ್ರಿಟೀಷರ ಸರ್ವಾಧಿಕಾರಿ ಆಡಳಿತದ ವಿರುದ್ಧ ಸೆಟೆದು ನಿಂತು, ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಮಹಾನ್ ದೇಶಪ್ರೇಮಿ ಹಜ್ರತ್ ಟಿಪ್ಪು ಸುಲ್ತಾನ್ ಅವರ ಜನ್ಮದಿನದ ಸಂದರ್ಭದಲ್ಲಿ ಅವರ ತ್ಯಾಗ ಬಲಿದಾನವನ್ನು ಸ್ಮರಿಸುತ್ತಾ, ನನ್ನ ಗೌರವ ನಮನಗಳನ್ನು ಅರ್ಪಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ , “ಮೈಸೂರಿನ ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯ ಶುಭಾಶಯಗಳು” ಎಂದಿದ್ದಾರೆ.

ಕರ್ನಾಟಕ ವಿದ್ಯಾರ್ಥಿ ಸಂಘಟನೆ (KVS) ಟಿಪ್ಪು ಜಯಂತಿಯ ಶುಭ ಕೋರಿದ್ದು, “ಕೃಷಿ ದೇಶದ ಜೀವಾಳ” ಎಂದಿದ್ದ ಟಿಪ್ಪು ಸುಲ್ತಾನ್, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದರು. ಕೃಷಿಯ ಅಭಿವೃದ್ದಿಗಾಗಿ ಪ್ರಥಮ ಬಾರಿಗೆ ರೇಷ್ಮೆ ಪರಿಚಯಿಸಿದ್ದ ಟಿಪ್ಪು, ರೈತರ ಕೃಷಿಗಾಗಿ ನೂರಾರು ಕೆರೆಗಳನ್ನು ನಿರ್ಮಿಸಿದ್ದರು. ರೈತರಿಗೆ ಬಡ್ಡಿ ರಹಿತ ಸಾಲ, ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು. ಅಲ್ಲದೆ, ಕೃಷಿ ಭೂಮಿಯನ್ನು ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡಲು ಶ್ರಮಿಸಿದ್ದರು. ಆದರೆ, ಇಂದಿನ ರೈತ ವಿರೋಧಿ ಸರ್ಕಾರಗಳು ರೈತರನ್ನು ಬೀದಿಪಾಲು ಮಾಡಲು ಮುಂದಾಗಿವೆ.. ಟಿಪ್ಪುವಿಗೆ ರೈತರ ಬಗೆಗಿದ್ದ ಕಾಳಜಿಯನ್ನು ಅರಿತುಕೊಳ್ಳೋಣ, ರೈತ ಹೋರಾಟದಲ್ಲಿ ಭಾಗಿಯಾಗೋಣ” ಎಂದಿದೆ. ಹೀಗೆ ಹಲವಾರು ರಾಜಖಿಯ ಮುಖಂಡರು ಹಾಗೂ ಸಂಘಟನೆಗಳು ಟಿಪ್ಪು ಜಯಂತಿಗೆ ಶುಭಾಷಯ ತಿಳಿಸಿದ್ದಾರೆ

Exit mobile version