ದೇಹದಲ್ಲಿ ಮುಖ್ಯವಾದ ಅಂಗವೆಂದರೆ ಅದು ಶ್ವಾಸಕೋಶ. ಶ್ವಾಸಕೋಶವೇ ಹಾಳಾದ್ರೆ ಇಡೀ (Tips for Lungs problem) ದೇಹದ ಆರೋಗ್ಯವೇ ಏರುಪೇರಾಗುತ್ತೆ. ಹಾಗಾದ್ರೆ ನಮ್ಮ ಶ್ವಾಸಕೋಶ
ಕೆಟ್ಟುಹೋಗಿದೆ ಅಂತ ತಿಳಿದುಕೊಳ್ಳುವುದು ಹೇಗೆ? ನಮ್ಮ ಸುತ್ತಮುತ್ತಲಿನ ಗಾಳಿಯಲ್ಲಿ ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್ ಇರುತ್ತದೆ. ಎಲ್ಲವನ್ನು ನಾವು ಮೂಗಿನ ಮೂಲಕ ಉಸಿರಾಡಿ
ತೆಗೆದುಕೊಳ್ಳುತ್ತೇವೆ. ನಮ್ಮ ಸ್ವಾಶಕೋಶ ಆಮ್ಲಜನಕವನ್ನು ಮಾತ್ರ ಒಳಗೆ ತೆಗೆದುಕೊಂಡು, ಇಂಗಾಲದ ಡೈ ಆಕ್ಸೈಡ್ ಅನ್ನು ಫಿಲ್ಟರ್ ಮಾಡಿ, ದೇಹದಿಂದ ಹೊರಗೆ ಹಾಕುತ್ತದೆ.

ಶ್ವಾಸಕೋಶ ಈ ಪ್ರಕ್ರಿಯೆಯನ್ನು ನಿರಂತರವಾಗಿ ಮಾಡಲೇಬೇಕು. ಒಂದು ವೇಳೆ ಶ್ವಾಸಕೋಶಕ್ಕೆ ಸೋಂಕು ಉಂಟಾಗಿ ಅದರಲ್ಲಿ ನೀರು ತುಂಬಿಕೊಂಡಿದ್ದರೆ ಅದರಿಂದ ಶ್ವಾಸಕೋಶ ಸಂಪೂರ್ಣವಾಗಿ
ಮುಚ್ಚಿಕೊಳ್ಳುತ್ತದೆ ಮತ್ತು ಹಾಳಾಗುತ್ತದೆ. ಆ ಸೋಂಕನ್ನು ನ್ಯುಮೋನಿಯಾ (Numonia) ಎನ್ನುತ್ತಾರೆ. ಶ್ವಾಸಕೋಶಕ್ಕೆ ತೊಂದರೆ ನಮ್ಮ ಜೀವನ ಶೈಲಿಯಿಂದ ಬರುತ್ತದೆ. ಇತ್ತೀಚಿಗೆ ಜನ ಆಧುನಿಕ ಜೀವನ
ಶೈಲಿಯನ್ನು ಅನುಸರಿಸುತ್ತಾರೆ. ಆದರೆ ಯಾವುದೇ ಒಂದು ಹೊಸತನ ಅನುಕೂಲ ಮತ್ತು ಅನಾನುಕೂಲಗಳನ್ನು ಹೊಂದಿವೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ನೀವು ಅನುಸರಿಸುತ್ತಿರುವ ಜೀವನ
ಶೈಲಿಯಿಂದ ಯಾವ ರೀತಿಯ ತೊಂದರೆ ಎದುರಾಗುತ್ತದೆ ಎಂಬುದನ್ನು ಗ್ರಹಿಸಿ ಉತ್ತಮವಾದ ರೀತಿಯಲ್ಲಿ ಬದುಕಲು ಯತ್ನಿಸಬೇಕು.
ಈ ಕೆಟ್ಟ ಅಭ್ಯಾಸಗಳಿಂದ ದೂರವಿರಿ.
ಧೂಮಪಾನ ಮಾಡುವುದು.
ಹಾನಿಕಾರಕ ರಸಾಯನಿಕಗಳಿಗೆ ಓಡ್ಡಿಕೊಳ್ಳುವುದು.
ಮಾಲಿನ್ಯ ತುಂಬಿದ ವಾತಾವರಣದಲ್ಲಿ ಬದುಕುವುದು.
ದಿನ ಕಳೆದಂತೆ ಶ್ವಾಸಕೋಶದ ಅಂಗಾಂಶಗಳನ್ನು ಧೂಳು ಮತ್ತು ಇನ್ನಿತರ ಹಾನಿಕಾರಕ ಅಂಶಗಳನ್ನು ತನ್ನಲ್ಲಿ ಹಿಡಿದಿಟ್ಟುಕೊಂಡು ಉಸಿರಾಟಕ್ಕೆ ತೊಂದರೆ ಉಂಟು ಮಾಡುವುದು ಇತ್ಯಾದಿ. ಶ್ವಾಸಕೋಶಕ್ಕೆ
ತೊಂದರೆ ಇದೆ ಅಂತ ಈ ಕೆಳಗಿನ ಲಕ್ಷಣಗಳಿಂದ (Tips for Lungs problem) ಪತ್ತೆ ಹಚ್ಚ ಬಹುದು.
ಉಸಿರಾಟದ ತೊಂದರೆ: ನಿಮಗೆ ಸಾಧಾರಣವಾಗಿ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಉಸಿರಾಟದ ತೊಂದರೆ ಇದೆ ಅಂದ್ರೆ ಶ್ವಾಸಕೋಶಕ್ಕೆ ಹಾನಿಯಾಗಿದೆ ಎಂದು ತಿಳಿದುಕೊಳ್ಳ ಬೇಕು. ಉಸಿರಾಟದ
ತೊಂದರೆ ಹೃದಯದ ರೋಗದ ಕಾಯಿಲೆ ಕೂಡ ಸೂಚಿಸುತ್ತದೆ. ತಕ್ಷಣ ವೈದ್ಯರನ್ನು ಭೇಟಿ ಮಾಡಿ.
ನಿರಂತರ ಕೆಮ್ಮು: ಶ್ವಾಸಕೋಶದ ಸಮಸ್ಯೆ ಇರುವವರಿಗೆ ಕೆಮ್ಮು ನಿರಂತರವಾಗಿರುತ್ತದೆ. ಕೆಮ್ಮಿಗೆ ಸಂಬಂಧಪಟ್ಟ ಚಿಕಿತ್ಸೆ ಪಡೆದರೂ ಕಡಿಮೆಯಾಗಲಿಲ್ಲವೆಂದರೆ ವೈದ್ಯರನ್ನು ಭೇಟಿ ಮಾಡುವುದು ಅಗತ್ಯ.

ಉಸಿರನ್ನು ಹೊರಗೆ ಬಿಡುವಾಗ ನೋವು: ಶ್ವಾಸಕೋಶದ ಸಮಸ್ಯೆ ಇರುವವರಿಗೆ ಉಸಿರಾಟದ ತೊಂದರೆ ಇರುತ್ತದೆ. ಉಸಿರನ್ನು ಹೊರಗೆ ಬಿಡುವಾಗ ನೋವುಂಟಾದರೆ ನಿಮ್ಮ ಶ್ವಾಸಕೋಶ ಸರಿಯಾದ
ಆಕಾರದಲ್ಲಿಲ್ಲ ಎಂದರ್ಥ.
ಕೆಮ್ಮಿನ ಜೊತೆ ರಕ್ತ ಬರುವುದು : ನಿಮ್ಮ ಕೆಮ್ಮಿನಲ್ಲಿ ರಕ್ತ ಬಂದರೆ ಅದರ ನಿರ್ಲಕ್ಷ ಬೇಡ ಏಕೆಂದರೆ ಅದು ಗಂಭೀರ ಸಮಸ್ಯೆ ಮತ್ತು ಶ್ವಾಸಕೋಶದ ತೊಂದರೆಯನ್ನು ಸೂಚಿಸುತ್ತದೆ. ತಕ್ಷಣ
ವೈದ್ಯರನ್ನು ಭೇಟಿ ಮಾಡುವುದು ಅಗತ್ಯ.
ಸರಿಯಾಗಿ ಉಸಿರಾಡಲು ಆಗುತ್ತಿಲ್ಲವೆಂಬುವ ಭಾವನೆ: ಶ್ವಾಸಕೋಶದ ತೊಂದರೆ ಇರುವವರಿಗೆ ಉಸಿರಾಟದ ಸಮಸ್ಯೆ ಇರುತ್ತದೆ, ಉಸಿರಾಡಲು ಕಷ್ಟವಾಗುತ್ತದೆ, ಈ ಭಾವನೆ ಬಂದಾಗ ವೈದ್ಯರನ್ನು
ಭೇಟಿ ಮಾಡಿ. ಇದರ ಜೊತೆ ಇನ್ನೂ ಕೆಲವು ಗುಣಲಕ್ಷಣಗಳನ್ನು ಕಾಣಬಹುದು.ವ್ಯಾಯಾಮ ಮಾಡಲು ಸಾಧ್ಯವಾಗದೇ ಇರುವುದು. ನಡೆಯುವಾಗ ಉಸಿರಾಟದ ತೊಂದರೆ. ಎದೆ ಬಿಗಿತ.
ಎದೆ ಕಟ್ಟುವುದು: ಕೆಮ್ಮಿದಾಗ ಕಫದ ಸಮಸ್ಯೆಯಿಂದ ಎದೆಗಟ್ಟುವ ಅನುಭವ ಆದರೆ ಅದೇ ತರಹ ನಿರಂತರ ಮುಂದುವರೆದರೆ ಇದರಿಂದ ಎದೆ ಕಟ್ಟುವ ಮತ್ತು ಎದೆ ಬಾರದ ಸಮಸ್ಯೆ ಉಂಟಾಗುತ್ತದೆ.
ವೈದ್ಯರ ಬೇಟಿ ಅಗತ್ಯ.
ಪದೇಪದೇ ಎದೆ ನೋವು ಬರುವುದು: ನಿಮ್ಮ ಶ್ವಾಸಕೋಶ ದುರ್ಬಲವಾಗಿದೆ ಎಂದರೆ ಪದೇ ಪದೇ ನಾವು ಬರುತ್ತದೆ. ನಮ್ಮ ದೇಹದಲ್ಲಿ ಸರಿಯಾಗಿ ಆಮ್ಲಜನಕ ಸೇರುತ್ತಿಲ್ಲವೆಂದರ್ಥ ನಮ್ಮ ದೇಹ ಸರಿಯಾದ
ರೀತಿಯ ಆಮ್ಲಜನಕ ತೆಗೆದುಕೊಂಡಿಲ್ಲವೆಂದು ಅರ್ಥ. ಪದೇ ಪದೇ ಎದೆ ನೋವು ಬಂದರೆ ಅದು ವಾರಗಳ ಕಳೆದರೂ ಹಾಗೆ ಇರುತ್ತದೆ. ಶ್ವಾಸಕೋಶ ಹಾಳಾಗಿದೆ ಎಂದರ್ಥ.
ಉತ್ತಮ ಸ್ವಾಶಕೋಶದ ಆರೋಗ್ಯಕ್ಕೆ ಹೀಗೆ ಮಾಡಿ : ಧೂಮಪಾನ ಬಿಟ್ಟುಬಿಡಿ. ಆರೋಗ್ಯವಾದ ಬಿಸಿ ಆಹಾರಗಳನ್ನು ಸೇವಿಸಿ, ಹಸಿರು ತರಕಾರಿಗಳನ್ನು ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಿ.
ವ್ಯಾಯಾಮವನ್ನು ಮಾಡುವುದು ಮರೆಯಬೇಡಿ.
ಇದನ್ನು ಓದಿ: ಕರ್ನಾಟಕ ಬಂದ್: ಶುಕ್ರವಾರ ಕರ್ನಾಟಕ ಬಂದ್ಗೆ ಬೆಂಬಲ ಕೊಟ್ಟ ಸಂಘಟನೆಗಳು ಯಾವುವು?
ಧನಂಜಯ