ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬರುತ್ತಿದ್ದು, ಬೆಲೆಯಲ್ಲಿ ಇಳಿಕೆ

Kolar: ಉತ್ತರ ಭಾರತದ ರಾಜ್ಯಗಳಿಂದಲೂ ಟೊಮೆಟೊ ಬೇಡಿಕೆ ಇಳಿಕೆಯಾದ ಪರಿಣಾಮ ಕೋಲಾರದ ಎಪಿಎಂಸಿ (tomato pricedrop in kolar) ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ

ಟೊಮೆಟೊ ಬರುತ್ತಿರುವುದರಿಂದ ಬೆಲೆಯಲ್ಲಿ ಇಳಿಕೆ ಕಂಡಿದೆ. ಟೊಮೆಟೊ (Tomato) ಬೆಳೆಗೆ ಕೀಟಬಾಧೆ ಕಡಿಮೆಯಾಗಿದ್ದು, ಟೊಮೆಟೊ 15 ಕೆ.ಜಿ ಬಾಕ್ಸ್ ಬೆಲೆ ರುಪಾಯಿ 2700 ದಾಟಿತ್ತು, ಈಗ

600 ರಿಂದ 700 ರೂ ಗೆ ಇಳಿಕೆಯಾಗಿದೆ. ಕೆಂಪು ಬಂಗಾರವಾದ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಇದೀಗ ಗಣನೀಯವಾಗಿ ಇಳಿಮುಖವಾಗಿದೆ. ಹಾಗಾಗಿ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

ತೀವ್ರಕೀಟ ಬಾಧೆ ಹಾಗೂ ಹವಾಮಾನ ವೈಪರೀತ್ಯದಿಂದ ಟೊಮೆಟೊ ರೇಟ್ (Rate) ಕುಸಿದಿದ್ದು, ಗ್ರಾಹಕರು ಟೊಮೆಟೊ ಖರೀದಿಸಲು ಎರಡು ಮೂರು ಬಾರಿ ಚಿಂತಿಸುವಂತಾಗಿತ್ತು.

ಕೋಲಾರದ (Kolar) ಎಪಿಎಂಸಿ ಮಾರುಕಟ್ಟೆಯಲ್ಲಿ ಹೊರ ರಾಜ್ಯಗಳಿಂದ ಟೊಮೆಟೊಗೆ ಬೇಡಿಕೆ ಹೆಚ್ಚಾದ ಕಾರಣ ಕಳೆದ ಒಂದುವರೆ ತಿಂಗಳಿಂದ ಟೊಮೆಟೊ ಬೆಲೆ ಮುಗಿಲೆತ್ತರಕ್ಕೇರಿತ್ತು.

ಅದರಂತೆ 15 ಕೆಜಿ ತೂಕದ ಟೊಮೆಟೊ 2700 ರೂಗಳಿಗೆ ತಲುಪಿ 3000 ರೂ. ತಲುಪುವ ಹಂತಕ್ಕೆ ಹೋಗಿತ್ತು. ಕೆಲ ಟೊಮೆಟೊ ಬೆಳೆಗಾರರು ದಾಖಲೆಯ ಬೆಲೆಗೆ ಟೊಮೆಟೊ ಮಾರಾಟವಾದ

ಹಿನ್ನೆಲೆಯಲ್ಲಿ ಕೋಟ್ಯಧಿಪತಿಗಳಾಗಿದ್ದಾರೆ. ಆದರೆ ಗ್ರಾಹಕರು ಮಾತ್ರ ಟೊಮೆಟೊ (tomato pricedrop in kolar) ಖರೀದಿಸುವಾಗ ಚಿಂತಿಸುವಂತಾಗಿತ್ತು.

ಇದನ್ನು ಓದಿ: ಚೆಸ್ ವಿಶ್ವಕಪ್‌ : 21 ವರ್ಷಗಳ ಬಳಿಕ ಚೆಸ್ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ಗೇರಿದ ಭಾರತದ ಪ್ರಜ್ಞಾನಂದ

ಕಳೆದೊಂದು ವಾರದಿಂದ ಮಾರುಕಟ್ಟೆಗೆ ಬರುವ ಟೊಮೆಟೊ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಟೊಮೆಟೊ ಬೆಲೆ ಕಡಿಮೆಯಾಗಿದ್ದು, ಟೊಮೆಟೊ ಬೆಲೆ ಸದ್ಯ 600 ರೂ.ಗಳಿಗೆ ಕುಸಿದಿದೆ. ಟೊಮೆಟೊಗೆ

(Tomato) ಬಂಗಾರದ ಬೆಲೆ ಬಂದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ರೈತರು ಟೊಮೆಟೊ ಬೆಳೆಯಲು ಒಲವು ತೋರಿಸಿದ್ದಾರೆ.ಕೋಲಾರದ ಎಪಿಎಂಸಿ (APMC) ಮಾರುಕಟ್ಟೆಗೆ ನೆರೆಯ ಆಂಧ್ರ ಪ್ರದೇಶ

(Andra Pradesh) ಸೇರಿದಂತೆ ಚಿತ್ರದುರ್ಗದ ಚಳ್ಳಕೆರೆ (Challakere), ಮಂಡ್ಯ (Mandya) ಸೇರಿದಂತೆ ರಾಜ್ಯದ ಇತರೆ ಭಾಗಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೊಟೊ ಬರುತ್ತಿದೆ.

ಉತ್ತರ ಭಾರತದ ರಾಜ್ಯಗಳಲ್ಲಿ ನೆರೆಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವರ್ತಕರು ಟೊಮೆಟೊ ಖರೀದಿಗೆ ಮುಂದಾಗುತ್ತಿಲ್ಲಇದರ ಪರಿಣಾಮ ಕಳೆದ ನಾಲ್ಕೈದು ದಿನಗಳಲ್ಲಿಂದೀಚೆಗೆ 2,700 ರೂ.ಗಳಿಂದ

15 ಕೆಜಿ (KG) ಬಾಕ್ಸ್‌ ಬೆಲೆ 600-700ಕ್ಕೆ ಕುಸಿದಿದೆ. ಟೊಮೆಟೊ ಬೆಲೆ ಕುಸಿತ ಕಂಡರೂ ಸಹ ಈಗ ಸದ್ಯದ ಮಟ್ಟಿಗಿರುವ ಬೆಲೆಯಲ್ಲಿ ರೈತರಿಗೆ ಯಾವುದೇ ನಷ್ಟ ಉಂಟಾಗುವುದಿಲ್ಲ. ಇದೇ ಬೆಲೆ ಮುಂದುವರಿದರೆ

ಹಾಕಿದ ಬಂಡವಾಳದ ಜತೆಗೆ ಲಾಭ ಮಾಡಿಕೊಳ್ಳಬಹುದಾಗಿದೆ. ಇತ್ತ ಬೆಲೆ ಕುಸಿತದಿಂದ ಗ್ರಾಹಕರಿಗೆ ಖುಷಿ ತಂದಿದ್ದು ನಿರಾಳವಾಗಿ ಟೊಮ್ಯಾಟೊ (Tomato) ಖರೀದಿಗೆ ಮುಂದಾಗಿದ್ದಾರೆ.

ಟೊಮೆಟೊ ಬೆಲೆ ಜಾಸ್ತಿಯಾದ ಬೆನ್ನಲ್ಲೇ ರೈತರು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆದರು. ಜತೆಗೆ ರೋಗಬಾಧೆ ಕಡಿಮೆಯಾಗಿ ಇಳುವರಿ ಹೆಚ್ಚಿದ್ದು, ಹೊರ ರಾಜ್ಯಗಳಿಂದ ಬೇಡಿಕೆ ಕಡಿಮೆ

ಆಗಿರುವ ಕಾರಣ ಸಾಮಾನ್ಯವಾಗಿ ಬೆಲೆ ಇಳಿಮುಖ ಕಂಡಿದೆ. ಹಾಗಾಗಿ ರೈತರು ಚಿಂತೆಪಡುವ ಅವಶ್ಯಕತೆ ಇಲ್ಲ. ಇದೇ ಬೆಲೆ ಇನ್ನು ಹಲವು ದಿನಗಳು ಮುಂದುವರಿಯುವ ಸಾಧ್ಯತೆಯಿದೆ ಎಂದು

ಬಂಗಾರಪೇಟೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಿವಾರೆಡ್ಡಿ (Shiva Reddy), ತಿಳಿಸಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version