ಹಲ್ಲು ಮತ್ತು ವಸಡಿನ ಆರೈಕೆಗೆ ಇಲ್ಲಿವೆ ಸಾಮಾನ್ಯ ಸಲಹೆಗಳು

Health : ಸಾಕಷ್ಟು ಜನರು ಹಲ್ಲು ಮತ್ತು ವಸಡಿನ ಆರೋಗ್ಯವನ್ನು ಲಘುವಾಗಿ ಪರಿಗಣಿಸುತ್ತಾರೆ. ಆದರೆ, ಬಾಯಿಯ, ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ನಮ್ಮ ಬಾಯಿ, ಹಲ್ಲು ಮತ್ತು ವಸಡುಗಳನ್ನು (Tooth and gum care) ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ.

ದೀರ್ಘಕಾಲದವರೆಗೆ ಹಲ್ಲಿನ ನೈರ್ಮಲ್ಯವನ್ನು ನಿರ್ಲಕ್ಷಿಸುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಆರೋಗ್ಯಕರ ರೀತಿಯಲ್ಲಿ ಹಲ್ಲುಗಳು ಮತ್ತು ವಸಡುಗಳನ್ನು ಆರೈಕೆ ಮಾಡುವುದು ಹೇಗೆ ಎಂಬುದಕ್ಕೆ ಕೆಲವು ಸಲಹೆಗಳು ಇಲ್ಲಿವೆ.

• ದೇಹದಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬಂದ ಕೂಡಲೇ ವೈದ್ಯರನ್ನು ಕಾಣುವ ಬಹುತೇಕ ಮಂದಿ ಬಾಯಿಯಲ್ಲಿ ಯಾವುದೇ ಸಮಸ್ಯೆ ಕಂಡುಬಂದರೂ ಸ್ವಚಿಕಿತ್ಸೆ ಮಾಡಿಕೊಳ್ಳುತ್ತಾರೆ.

ಆದರೆ, ದಂತ ಸಮಸ್ಯೆಗಳು ಕಂಡು ಬಂದರೆ ಮೊದಲು ದಂತ ವೈದ್ಯರನ್ನು ಕಾಣಬೇಕು. ಸ್ವಚಿಕಿತ್ಸೆ ಮಾಡಿಕೊಳ್ಳುವುದು ಜಾಹೀರಾತುಗಳನ್ನು ನೋಡಿ ಪ್ರಯೋಗ ಮಾಡುವುದು ಒಳ್ಳೆಯದಲ್ಲ.

ಇದನ್ನೂ ಓದಿ : https://vijayatimes.com/release-of-congress-files/

• ಹಲ್ಲುಗಳನ್ನು ಹೆಚ್ಚು ಉಜ್ಜಿದಷ್ಟು ಹಾಳಾಗುವುದೂ ಹೆಚ್ಚು. ಹೀಗಾಗಿ ಹಲ್ಲುಜ್ಜಲು 3-3-3-3 ನಿಯಮವನ್ನು ಅವುಸರಿಸಿ.

• ಹಲ್ಲುಗಳನ್ನು ಉಜ್ವಲು ಮೃದುವಾದ ಬ್ರಷ್ ಗಳನ್ನು ಬಳಸಿ. ಮೂರು ಸೆಕೆಂಡುಗಳ ಕಾಲ ಮೂರು ಹಲ್ಲುಗಳನ್ನು ಉಜ್ಜಿ. ಎಲ್ಲಾ ಹಲ್ಲುಗಳ ಉಜ್ಜುವ ಅವಧಿ ಮೂರು ನಿಮಿಷಗಳಾಗಿರಬೇಕು.

• ಸಕ್ಕರೆ ರಹಿತ ಮತ್ತು ಆಲ್ಕೋಹಾಲ್ ರಹಿತ ಮೌತ್ವಾಶ್ಗಳನ್ನು ಬಳಸಿ.

• ಬ್ರಷ್ ಮಾಡಿದ ಕನಿಷ್ಠ 30 ನಿಮಿಷಗಳ ಬಳಿಕ ಮೌತ್ವಾಶ್ (Mouthwash) ಬಳಿಸಿ.

ಇದನ್ನೂ ಓದಿ : https://vijayatimes.com/cattle-transportation-in-rajasthan/

• ದೀರ್ಘಕಾಲದ ತಲೆನೋವು, ಕುತ್ತಿಗೆ ಮತ್ತು ಭುಜದ ನೋವು ಪರಿಹರಿಸಲಾಗದ ಬೆನ್ನು ನೋವು ಬಾಯಿಯ ಕ್ಯಾನ್ಸರ್ಗೆ (Oral cancer) ಕಾರಣವಾಗಿರಬಹುದು. ಈ ಬಗ್ಗೆ ಎಚ್ಚರ ಇರಲಿ.

• ಅನೇಕರು ಹಲ್ಲುಗಳ ನಡುವೆ ಸಿಲುಕಿಕೊಳ್ಳುವ ಆಹಾರ ತೆಗೆಯಲು ಟೂತ್ ಪಿಕ್, ಸೇಫ್ಟಿ ಪಿನ್ಗಳನ್ನು ಬಳಕೆ ಮಾಡುತ್ತಾರೆ. ಆದರೆ, ಹಲ್ಲುಗಳ ಆರೋಗ್ಯಕ್ಕೆ ಇದು ಉತ್ತಮವಲ್ಲ.

• ಆಗಾಗ ದೇಹದಲ್ಲಿ ವಿಟಮಿನ್ ಡಿ ಮಟ್ಟವನ್ನು ಪರಿಶೀಲಿಸಿಕೊಳ್ಳುವುದು ಮುಖ್ಯ. ಹೆಚ್ಚೆಚ್ಚು ವ್ಯಾಯಾಮ ಮಾಡಿ, ವಿಟಿಮಿನ್ ಡಿ ಭರಿತ ಆಹಾರ ಸೇವನೆ ಮಾಡಬೇಕು. ಸೂರ್ಯನ ಶಾಖವನ್ನು (Tooth and gum care) ತೆಗೆದುಕೊಳ್ಳಬೇಕು.

• ಉಗುರು ಕಚ್ಚುವುದು, ಬಾಯಿಯಿಂದ ಉಸಿರಾಡುವುದನ್ನು. ಇಂತಹ ಅಭ್ಯಾಸಗಳು ಮುಖದ ರೂಪ, ಹಲ್ಲುಗಳ ಜೋಡನೆಯ ಮೇಲೆ ಪರಿಣಾಮ ಬೀರುತ್ತವೆ.

• ಮಕ್ಕಳು ಊಟ ಮಾಡುವಾಗ ದೊಡ್ಡ ರಂಧ್ರವಿರುವ ಬಾಟಲ್ ಗಳನ್ನು ನೀಡಿ. ಇದರಿಂದ ಹಲ್ಲುಗಳ ಮಧ್ಯೆ ಉಳಿದುಕೊಳ್ಳುವ ಆಹಾರ ಸ್ವಚ್ಛಗೊಳ್ಳಲು ಸಹಾಯ ಮಾಡುತ್ತದೆ

Exit mobile version