Bengaluru: ರಾಜ್ಯ ಕಾಂಗ್ರೆಸ್ ಸರ್ಕಾರ ವ್ಯಾಪಾರಿ ಉದ್ದೇಶಿತ ವಿದ್ಯುತ್ ದರವನ್ನು ಭಾರೀ ಏರಿಕೆ ಮಾಡಿರುವುದರ (Traders warning State Govt) ವಿರುದ್ದ ಇಂದು ಬಂದ್ಗೆ ಕರೆ ನೀಡಿರುವ ಕೆಲ ವ್ಯಾಪಾರಿ ಸಂಘಟನೆಗಳು
ತಾವು ಕೂಡಾ ಬೆಲೆ ಏರಿಕೆ ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ (Traders warning State Govt) ಎಚ್ಚರಿಕೆ ನೀಡಿವೆ.

ವಿದ್ಯುತ್ ದರವನ್ನು ಕಡಿಮೆ ಮಾಡದೇ ಇದ್ದರೆ ಹೋಟೆಲ್ ಆಹಾರಗಳ ದರದಲ್ಲಿ ನಾವು ಕೂಡಾ 5 ರಿಂದ 10 ರೂಪಾಯಿಗಳವರೆಗೆ ಏರಿಕೆ ಅನಿವಾರ್ಯ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಹೋಟೆಲ್ ಮಾಲೀಕರ
ಸಂಘ ಎಚ್ಚರಿಕೆ ನೀಡಿದೆ.
ಇದನ್ನು ಓದಿ: ಸಣ್ಣ ತಗಡಿನ ಶೆಡ್ನಲ್ಲಿ ಕೇವಲ ಎರಡು ಬಲ್ಬ್ ಇರುವ 90ರ ವೃದ್ಧೆಯ ಮನೆಗೆ 1 ಲಕ್ಷ ವಿದ್ಯುತ್ ಬಿಲ್: ಕಣ್ಣೀರಿಟ್ಟ ಅಜ್ಜಿ
ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಈ ಕುರಿತು ಮಾತನಾಡಿ, ರೈಸ್ ಮಿಲ್ಗಳು ಅಕ್ಕಿ ಬೆಲೆಯನ್ನು ಏರಿಸುವುದಾಗಿ ಹೇಳಿದ್ದಾರೆ, ಇನ್ನೊಂದೆಡೆ ಪ್ರತಿ ಲೀಟರ್ ನಂದಿನಿ ಹಾಲಿನ ದರ
5 ರೂಪಾಯಿ ಏರಿಕೆಯಾಗುವ ಸಾಧ್ಯತೆಯಿದೆ ಅದೇ ರೀತಿ ಎಲ್ಲ ವ್ಯಾಪಾರಿಗಳು ಬೆಲೆ ಏರಿಕೆಗೆ ಮುಂದಾಗಿದ್ದಾರೆ. ಹೀಗಾಗಿ ನಾವು ಕೂಡಾ ಬೆಲೆ ಏರಿಕೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ವ್ಯಾಪಾರ ಮಾಡಲು

ಸಾಧ್ಯವಾಗುವುದಿಲ್ಲ. ಹೀಗಾಗಿ ನಾವು ದರ ಏರಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ.
ಇನ್ನು ಪ್ರತಿ ಲೀಟರ್ ನಂದಿನಿ ಹಾಲಿನ ದರವನ್ನು 5 ರೂಪಾಯಿ ಹೆಚ್ಚಿಸಲು ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿ, ನಂತರ ತೀರ್ಮಾನ
ತೆಗೆದುಕೊಳ್ಳುತ್ತೇವೆ ಎಂದು ಕೆಎಂಎಫ್ ನೂತನ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳೇ ಬೆಲೆ ಏರಿಕೆಗೆ ಮುಂದಾಗಿವೆ. ಹೀಗಾಗಿ ಎಲ್ಲ ವ್ಯಾಪಾರಿಗಳು ಕೂಡಾ ಬೆಲೆ
ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಉಚಿತ ವಿದ್ಯುತ್ ನೀಡುವ ಯೋಜನೆಗೆ ಹಣ ಹೊಂದಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರದಲ್ಲಿ ತೀವ್ರ ಏರಿಕೆ ಮಾಡಿದೆ. ಅದರ ನೇರ ಪರಿಣಾಮ ವ್ಯಾಪಾರಿ ವರ್ಗದ ಮೇಲೆ ಬಿದ್ದಿದೆ.