ಟ್ರಾಫಿಕ್‌ ಪೊಲೀಸರಿಂದ ಭರ್ಜರಿ ಆಫರ್‌: ಫೆ 11ರೊಳಗೆ ಬಾಕಿ ದಂಡ ಕಟ್ಟಿದ್ರೆ ಶೇ.50 ರಿಯಾಯಿತಿ..!

Traffic E-challan : ರಸ್ತೆ ಸಂಚಾರದ ವೇಳೆ  ಸಂಚಾರಿ ನಿಯಮಗಳನ್ನು(Traffic Rules) ಉಲ್ಲಂಘಿಸಿದವರಿಗೆ ರಾಜ್ಯ ಸರ್ಕಾರ ಭರ್ಜರಿ ಆಫರ್‌ (Traffic E-challan rebate)ನೀಡಿದೆ.

ಸಂಚಾರಿ ನಿಮಯಗಳನ್ನು ಉಲ್ಲಂಘಿಸಿ  ವಾಹನದ ಮೇಲೆ ಪೊಲೀಸರು ದಂಡ ಹಾಕಿದ್ದು, ಅದನ್ನು ನೀವು ಪಾವತಿಸದೇ ಇದ್ದರೆ,

ಫೆಬ್ರವರಿ 11ರೊಳಗೆ ಬಾಕಿ ಇರುವ ದಂಡ ಪಾವತಿಸಿದರೆ  ದಂಡದ ಮೊತ್ತಕ್ಕೆ ಶೇಕಡಾ 50ರಷ್ಟು ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ.

ಕರ್ನಾಟಕ(Karnataka) ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷರಾಗಿರುವ ನ್ಯಾಯಮೂರ್ತಿ ಬಿ.ವೀರಪ್ಪ(B Veerappa)

ಅವರ ಸಮ್ಮಖದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸಂಚಾರಿ ನಿಮಯ ಉಲ್ಲಂಘನೆ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.

ಇದರ ನಂತರ, ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರು ಒಂದು ಬಾರಿ 50% ರಿಯಾಯಿತಿಯನ್ನು ಪ್ರಸ್ತಾಪಿಸಿದ್ದಾರೆ. 

ಈ ಪ್ರಸ್ತಾಪಕ್ಕೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಿ, ಅಂತಿಮವಾಗಿ  ಒಪ್ಪಿಗೆ ನೀಡಿದೆ.

ಇದನ್ನೂ ಓದಿ: ಸುಮ್‌ ಸುಮ್ನೆ ನಿಮ್ಮುಂದೆ ಬಂದು ಕೂರಲು ನಮಗೇನು ನಾಯಿ ಕಚ್ಚಿದ್ದೀಯಾ? : ನಟ ದರ್ಶನ್‌

ಇನ್ನು ಬೆಂಗಳೂರು ವಿಶೇಷ ಆಯುಕ್ತ (ಸಂಚಾರ) ಡಾ.ಎಂ.ಎ.ಸಲೀಂ(Dr M A Salim) ಈ ಕುರಿತು  (Traffic E-challan rebate) ಮಾತನಾಡಿ, ಬೆಂಗಳೂರು ನಗರದಲ್ಲಿ ಎರಡು ಕೋಟಿಗೂ ಹೆಚ್ಚು ಇ-ಚಲನ್ ಪ್ರಕರಣಗಳಿದ್ದು, ಒಟ್ಟು 500 ಕೋಟಿ ದಂಡ ವಿಧಿಸಬಹುದಾಗಿದೆ.  

ಆದರೆ ಸಾರ್ವಜನಿಕರಿಗೆ ಸಂಚಾರಿ ನಿಮಯಗಳನ್ನು ಪಾಲಿಸುವಂತೆ ಉತ್ತೇಜಿಸುವ ನಿಟ್ಟಿನ ಶೇಕಡಾ 50ರಷ್ಟು ರಿಯಾಯಿತಿಯನ್ನು ನೀಡಲಾಗಿದೆ.

ಹೀಗಾಗಿ ನಮ್ಮ ವೆಬ್‌ಸೈಟ್‌ನಲ್ಲಿ ಯಾರಾದರೂ ತಮ್ಮ ವಾಹನದ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಪರಿಶೀಲಿಸಬಹುದು ಮತ್ತು ಶೇಕಡಾ 50ರಷ್ಟು ದಂಡವನ್ನು ಪಾವತಿ ಮಾಡಬಹುದು.

ನಾವು ಶುಕ್ರವಾರದೊಳಗೆ ಬೆಂಗಳೂರು ಟ್ರಾಫಿಕ್ ಪೊಲೀಸ್ ವೆಬ್‌ಸೈಟ್‌ನಲ್ಲಿ(Traffic Police Website) ಇಂಟರ್‌ಫೇಸ್ ಅನ್ನು ನವೀಕರಿಸುತ್ತೇವೆ ಮತ್ತು ಲಿಂಕ್ ನೀಡುತ್ತೇವೆ.

ನಗರದ ಎಲ್ಲಾ ವಾಹನ ಮಾಲೀಕರಿಗೆ ತಮ್ಮ ವಾಹನಗಳ ವಿರುದ್ಧ ಯಾವುದೇ ಪ್ರಕರಣಗಳು ಬಾಕಿ ಉಳಿದಿವೆಯೇ ಎಂದು ಪರಿಶೀಲಿಸಿ (Traffic E-challan) ಮತ್ತು ರಿಯಾಯಿತಿ ವಿಂಡೋವನ್ನು ಬಳಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿರುವವರು ತಮ್ಮ ದಂಡವನ್ನು ಪಾವತಿಸಲು ಸ್ಥಳೀಯ ಟ್ರಾಫಿಕ್ ಪೊಲೀಸ್ ಠಾಣೆಗಳಿಗೂ ಭೇಟಿ ನೀಡಬಹುದು.

ಇನ್ನು ಬೆಂಗಳೂರಿನ ಹೊರಗಿನವರು ತಮ್ಮ ದಂಡವನ್ನು ಪಾವತಿಸಲು “ಕರ್ನಾಟಕ ಒನ್” ಕೇಂದ್ರಗಳು ಅಥವಾ ಹತ್ತಿರದ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಬಹುದು. ಎಲ್ಲ ರೀತಿಯ ದಂಡಗಳಿಗೂ ಶೇಕಡಾ 50ರಷ್ಟು ರಿಯಾಯಿತಿ ನೀಡಲಾಗಿದೆ.

Exit mobile version