ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದ ವಂದೇ ಭಾರತ್ ರೈಲು ಕರುವಿಗೆ ಡಿಕ್ಕಿ : ವರದಿ

Bengaluru : ಪ್ರಧಾನಿ ನರೇಂದ್ರ ಮೋದಿ(Train Hits Calf Suffers Dent) ಅವರು ಒಂದು ವಾರದ ಹಿಂದೆಯಷ್ಟೇ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್(Vande Bharat Express) ರೈಲಿಗೆ ಚಾಲನೆ ನೀಡಿದ್ದರು.

ಚೆನ್ನೈ-ಮೈಸೂರು-ಬೆಂಗಳೂರು(Train Hits Calf Suffers Dent) ಮಾರ್ಗಕ್ಕೆ ಪ್ರಧಾನಿ ಚಾಲನೆ ನೀಡಿದ ಬಳಿಕ ಈ ಮಾರ್ಗದಲ್ಲಿ ಪ್ರಯಾಣ ಆರಂಭಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ಸದ್ಯ ಮಾರ್ಗ ಮಧ್ಯೆ ಕರುವಿಗೆ ಡಿಕ್ಕಿ ಹೊಡೆದಿದೆ.

ಕರುವಿಗೆ ಚೆನೈಗೆ ಸಾಗುವ ಮಾರ್ಗದ ಮಧ್ಯೆ ಗುದ್ದಿದೆ ಎನ್ನಲಾಗಿದೆ.

ಇದನ್ನೂ ಓದಿ : https://vijayatimes.com/intel-won-it-ratna-awards/

ಈ ಘಟನೆಯನ್ನು ರೈಲ್ವೇ ಇಲಾಖೆ(Railway Department) ವರದಿ ಮಾಡಿಕೊಂಡಿದೆ. ಈ ಘಟನೆ ಗುರುವಾರ ತಮಿಳುನಾಡಿನ ಅರಕ್ಕೋಣಂನಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮೊದಲು ಒಂದು ನಿಲುಗಡೆಯನ್ನು ತೆಗೆದುಕೊಳ್ಳುವ ಸೆಮಿ-ಹೈ-ಸ್ಪೀಡ್ ರೈಲು ಸದ್ಯ ಅಪಘಾತಕ್ಕೆ ಒಳಗಾಗಿದೆ.

https://youtu.be/T4JXaKRwUF4 ಚುನಾವಣೆ ಹತ್ತಿರ ಬರ್ತಿದ್ದಂಗೇ ಎಲ್ಲೆಲ್ಲೂ ಕಾಮಗಾರಿ, ಗುದ್ದಲಿ ಪೂಜೆ!

ರೈಲು ಕರುವಿಗೆ ಡಿಕ್ಕಿ ಹೊಡೆದ ಪರಿಣಾಮ ಕರು ಸ್ಥಳದಲ್ಲೇ ಸಾವನ್ನಪ್ಪಿದೆ. ಅಪಘಾತ ಸಂಭವಿಸಿದಾಗ ರೈಲು ಗಂಟೆಗೆ 90 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು ಎಂಬುದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಂದೇ ಭಾರತ್ ರೈಲು ಪ್ರಯಾಣಿಸುವ ಘಾಟ್ ವಿಭಾಗದಲ್ಲಿನ ವಕ್ರಾಕೃತಿಗಳು ಮತ್ತು ತಿರುವುಗಳನ್ನು ಪರಿಗಣಿಸಿ, ಅಧಿಕಾರಿಗಳು ಅದರ ಸರಾಸರಿ ವೇಗವನ್ನು ಗಂಟೆಗೆ 75 ರಿಂದ 77 ಕಿಲೋಮೀಟರ್‌ಗಳಿಗೆ ಸದ್ಯ ನಿಗದಿಪಡಿಸಿದ್ದಾರೆ.

ದೇಶದಲ್ಲಿ ಇವರೆಗೂ ಪ್ರಾರಂಭಿಸಲಾದ ಐದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ದಕ್ಷಿಣ ಭಾರತಕ್ಕೆ ನೀಡಿರುವ ಈ ರೈಲು ಮಾತ್ರವೇ ಮಂದಗತಿಯಲ್ಲಿ ಸಾಗುತ್ತಿದೆ.

ಕರುವಿಗೆ ಡಿಕ್ಕಿ ಹೊಡೆದು ಅಪಘಾತಕ್ಕೊಳಗಾದ ಕೂಡಲೇ ರೈಲಿನ ಹಾನಿಯನ್ನು ಪರಿಶೀಲಿಸಲು ರೈಲು ಕೆಲವು ನಿಮಿಷಗಳ ಕಾಲ ಸ್ಥಗಿತಗೊಳಿಸಲಾಯಿತು.

ತದನಂತರ ಚೆನ್ನೈಗೆ ತಲುಪಿದ ಬಳಿಕ ರೈಲಿನ ಮುಂಭಾಗ ನಜ್ಜುಗುಜ್ಜಾಗಿದ್ದು ತಿಳಿದುಬಂದಿದೆ, ರೈಲ್ವೆ ಇಲಾಖೆ ಅಧಿಕಾರಿಗಳು ಚಿಕ್ಕ ಪರಿಶೀಲನೆ ನಡೆಸಿದ್ದಾರೆ.

ಅಕ್ಟೋಬರ್‌ ತಿಂಗಳಿನಿಂದ ತನ್ನ ಚೊಚ್ಚಲ ಪ್ರಯಾಣ ಆರಂಭಿಸಿದ ವಂದೆ ಬಾರತ್ ಎಕ್ಸ್‌ಪ್ರೆಸ್ ರೈಲಿಗೆ ಇದು ಐದನೇ ಅಪಘಾತವಾಗಿದೆ.

ಇದನ್ನೂ ಓದಿ : https://vijayatimes.com/wine-fight-festival/

ಭವಿಷ್ಯದಲ್ಲಿ ಇಂತಹ ಅಹಿತಕರ ಘಟನೆಗಳನ್ನು ತಪ್ಪಿಸಲು ಇಲಾಖೆಯು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಮುಂದಾಗಿದೆ.

ಸದ್ಯ ಅಪಘಾತದಲ್ಲಿ ಬಲಿಯಾದ ಕರುವಿನ ಮಾಲೀಕರನ್ನು ಪತ್ತೆಹಚ್ಚಿ, ಪ್ರಕರಣವನ್ನು ದಾಖಲಿಸಿ ಭಾರಿ ದಂಡವನ್ನು ವಿಧಿಸುತ್ತದೆ ಎಂದು ದಕ್ಷಿಣ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರ ಈ ಹೇಳಿಕೆಯನ್ನು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಜಾನುವಾರುಗಳು ಹಳಿ ತಪ್ಪಿದ ಘಟನೆಗಳ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್(Ashwini Vaishnav) ಅವರು,

ಜಾನುವಾರುಗಳು ಹಳಿಗಳ ಮೇಲೆ ಸುಳಿಯದಂತೆ ಮುಂದಿನ ಆರು ತಿಂಗಳಲ್ಲಿ 1,000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಡಿಯಲ್ಲಿ ಫೆನ್ಸ್ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.

Exit mobile version