ಉಚಿತ ತರಬೇತಿ: ಕೋಳಿ ಸಾಕಾಣಿಕೆ, ಹೈನುಗಾರಿಕೆ ತರಬೇತಿಗೆ ಅರ್ಜಿ ಅಹ್ವಾನ, ವಸತಿ, ಊಟೋಪಚಾರ ಉಚಿತ

ಕೋಳಿ ಸಾಕಾಣಿಕೆ, ಉಚಿತ ಹೈನುಗಾರಿಕೆ, ಎರೆಹುಳು ಗೊಬ್ಬರ ತಯಾರಿಕೆ ತರಬೇತಿಗೆ ಊಟ, ವಸತಿಯೊಂದಿಗೆ (training for farming 2023) ಆಸಕ್ತಿ ಅಭ್ಯರ್ಥಿಗಳಿಗೆ ಅರ್ಜಿ ಕರೆಯಲಾಗಿದೆ.

ಹಾಗೂ ಫಾಸ್ಟ್ ಫುಡ್ ಸ್ಟಾಲ್ (Fast Food Stall) ಉದ್ಯಮದ ಸ್ವಯಂ ಉದ್ಯೋಗ ಮಾಡಬಯಸುವ ಆಸಕ್ತ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ನಿರುದ್ಯೋಗ ಯುವಕ, ಯುವತಿಯರು ಈ ತರಬೇತಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ವಯಸ್ಸು ಕನಿಷ್ಟ 18 ರಿಂದ ಗರಿಷ್ಟ 45 ವರ್ಷದೊಳಗಿರಬೇಕು. ಉತ್ತರ ಕನ್ನಡ (Uttar Kannada),

ಹಾವೇರಿ, ಧಾರವಾಡ (Dharwad) , ಗದಗ (Gadag) ಜಿಲ್ಲೆಗೂ ಸರಿದಂತೆ ನೆರೆಹೊರೆಯ ಜಿಲ್ಲೆಯ ಸ್ವಯಂ ಉದ್ಯೋಗಾಂಕ್ಷಿಗಳು ಈ ಅವಕಾಶ ಉಪಯೋಗಿಸಕೊಳ್ಳಬಹುದಾಗಿದೆ.

ಉಚಿತ ಊಟ, ವಸತಿ
ಕೆನರಾ ಬ್ಯಾಂಕ್ ದೇಶಪಾಂಡೆ ಅರಸೆಟಿ (Canara Bank Deshpande Araseti) ತರಬೇತಿ ಸಂಸ್ಥೆಯು (training for farming 2023) ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿದ್ದು, ಸೆಪ್ಟೆಂಬರ್

ಸೂರ್ಯಯಾನ: ಚಂದ್ರಯಾನ ಯಶಸ್ವಿ ಬೆನ್ನಲ್ಲೇ ಸೆಪ್ಟೆಂಬರಲ್ಲಿ ಸೂರ್ಯಕ್ರಾಂತಿಗೆ ಇಸ್ರೋ ತಯಾರಿ

(September)

ತಿಂಗಳಲ್ಲಿ ನಡೆಯುವ ಈ ತರಬೇತಿಗೆ ಆಯ್ಕೆಯಾದ ಆಸಕ್ತ ಶಿಬಿರಾರ್ಥಿಗಳಿಗೆ ಸಂಸ್ಥೆಯ ವತಿಯಿಂದಲೇ ತರಬೇತಿ ಅವಧಿ ಮುಗಿಯುವವರೆಗೂ ವಸತಿಯೊಂದಿಗೆ ಊಟೋಪಚಾರ ಉಚಿತವಾಗಿರುತ್ತದೆ.

ದಾಖಲೆಗಳು:
ಆಸಕ್ತಿ ಇರುವ ಅಭ್ಯರ್ಥಿಗಳು ರೇಷನ್ ಕಾರ್ಡ್ (Ration Card), ಆಧಾರ್ ಕಾರ್ಡ್ (Aadhar Card), ಮತದಾರರ ಗುರುತಿನ ಚೀಟಿ ಇದರಲ್ಲಿ ಯಾವುದಾದರೊಂದು ಹಾಗೂ ಎರಡು

ಫೋಟೋಗಳೊಂದಿಗೆ ಹಳಿಯಲಾದ ಕೆನರಾ ಬ್ಯಾಂಕ್ ದೇಶಪಾಂಡೆ ಅರಸೆಟಿ ಸಂಸ್ಥೆಗೆ ಅರ್ಜಿ ಸಲ್ಲಿಸಬಹುದು.

ಇನ್ನಷ್ಟು ಮಾಹಿತಿಗೆ
ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ ಅರಸೆಟಿ ಸಂಸ್ಥೆ, ಹಳಿಯಾಳ (Haliyala) ಉತ್ತರ ಕನ್ನಡ ಜಿಲ್ಲೆ ಈ ವಿಳಾಸಕ್ಕೆ ಸಂಪರ್ಕಿಸಬೇಕು ಮೊ :9980510717, 9482188780

ಭವ್ಯಶ್ರೀ ಆರ್.ಜೆ

Exit mobile version