ರಾಜ್ಯದಲ್ಲಿ 314 ರೈಲುಗಳ ವೇಳಾಪಟ್ಟಿ ಬದಲಾವಣೆ: ರೈಲು ಓಡಾಟದಲ್ಲಿ 5 ರಿಂದ 70 ನಿಮಿಷಗಳ ವ್ಯತ್ಯಾಸ

Bengaluru: ರಾಜ್ಯದಲ್ಲಿ ಸಂಚಾರ ನಡೆಸುತ್ತಿರುವ ನೈರುತ್ಯ ರೈಲ್ವೆ ವಲಯಕ್ಕೆ ಸಂಬಂಧಿಸಿದಂತೆ (Trains time change in Karnataka) ಬರೋಬ್ಬರಿ 314 ರೈಲುಗಳ ವೇಳಾಪಟ್ಟಿ

ಪರಿಷ್ಕರಣೆ ಮಾಡಲಾಗಿದೆ. ರೈಲುಗಳ ಆಗಮನ ನಿರ್ಗಮನ 5 ರಿಂದ 70 ನಿಮಿಷಗಳಷ್ಟು ವ್ಯತ್ಯಾಸವಾಗಿದ್ದು, ರೈಲು ನಿಲ್ದಾಣಕ್ಕೆ ಹೊರಡುವ ಮುನ್ನ ರೈಲುಗಳ ವೇಳಾಪಟ್ಟಿ ಚೆಕ್‌ (Check)

ಮಾಡಿಕೊಂಡು (Trains time change in Karnataka) ಹೋದರೆ ಉತ್ತಮ.

ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ರೈಲುಗಳ ಆಗಮನ ಮತ್ತು ನಿರ್ಗಮನದ ನೂತನ ವೇಳಾಪಟ್ಟಿಯು ಅಕ್ಟೋಬರ್ (October) 1 ರಿಂದ ಜಾರಿಗೆ ಬರುವಂತೆ ಬದಲಾಗಿದ್ದು,

ಇದು ವಾರ್ಷಿಕ ವೇಳಾಪಟ್ಟಿ ಪರಿಷ್ಕರಣೆಯಾಗಿದೆ. ರೈಲು ಪ್ರಯಾಣಿಕರ ಅನುಕೂಲ, ರೈಲುಗಳ ಓಡಾಟ ವೇಗ ಹೆಚ್ಚಳಕ್ಕೆ ಅನುಗುಣವಾಗಿ ಬದಲಾವಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ

ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‌ ಅವರು, ಬೆಂಗಳೂರು ವಿಭಾಗದಲ್ಲಿ ಸಂಚರಿಸುವ 292 ರೈಲುಗಳ ಸಮಯವನ್ನು ಪರಿಷ್ಕರಿಸಲಾಗಿದೆ ಎಂದು

ಹೇಳಿದರು. ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ಎಲ್ಲಾ ರೈಲ್ವೆ ವಲಯಗಳ ಅಧಿಕಾರಿಗಳ ಜತೆ ಸಮಾಲೋಚಿಸಿ ಪ್ರಯಾಣಿಕರ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ನೈರುತ್ಯ

ರೈಲ್ವೆ ವಲಯದಲ್ಲಿ ಸಂಚರಿಸುವ 568 ರೈಲುಗಳ ಪೈಕಿ 314 ರೈಲುಗಳ ಸಮಯವನ್ನು ಪರಿಷ್ಕರಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೆಂಗಳೂರು ವಿಭಾಗದಲ್ಲಿ 396 ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 292 ರೈಲುಗಳ ಸಮಯ ಪರಿಷ್ಕರಿಸಲಾಗಿದೆ. ಅ.1ರಿಂದ ಪರಿಷ್ಕರಣೆಗೊಂಡ ಸಮಯದಲ್ಲಿ ಬೆಂಗಳೂರು

ವಿಭಾಗದ ರೈಲುಗಳು ಸಂಚರಿಸುತ್ತವೆ. ಸುಮಾರು 5 ನಿಮಿಷದಿಂದ 70 ನಿಮಿಷಗಳವರೆಗೆ ಕೆಲವು ರೈಲುಗಳು ವೇಗ ಹೆಚ್ಚಿಸುತ್ತವೆ.

4 ಹೊಸ ಜೋಡಿ ರೈಲುಗಳನ್ನು ಪರಿಚಯಿಸಲಾಗಿದ್ದು, ಒಂದು ಜೋಡಿ ರೈಲಿನ ಆವರ್ತನವನ್ನು ಹೆಚ್ಚಿಸಲಾಗಿದೆ ಮತ್ತು 3 ಜೋಡಿ ರೈಲುಗಳನ್ನು ವಿಸ್ತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ನೈರುತ್ಯ ರೈಲ್ವೆ ವೆಬ್‌ಸೈಟ್‌ನಲ್ಲಿ ವೇಳಾಪಟ್ಟಿ ಮಾಹಿತಿ
ನೈರುತ್ಯ ರೈಲ್ವೆ ವಲಯದ ವೆಬ್‌ಸೈಟ್‌ನಲ್ಲಿ (Website) ಹೊಸ ರೈಲುಗಳ ಆಗಮನ ಮತ್ತು ನಿರ್ಗಮನದ ವೇಳಾಪಟ್ಟಿಗಳ ವಿವರಗಳನ್ನು ಅಪ್‌ಲೋಡ್‌ ಮಾಡಲಾಗಿದ್ದು, ಎಲ್ಲಾ ಪ್ರಯಾಣಿಕರು ಗಮನಿಸಬೇಕು

ಎಂದು ನೈರುತ್ಯ ರೈಲ್ವೆಯು ಮನವಿ ಮಾಡಿದೆ.

ವೆಬ್‌ಸೈಟ್‌: https://swr.indianrailways.gov.in/view_section.jsp?lang=0&id=0,1,808,818,847,1880 ಅಥವಾ 139 ನಂಬರಿಗೆ ಡಯಲ್ (Dial) ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಇದನ್ನು ಓದಿ: ಹೋಟೆಲ್ ಆರಂಭಿಸಲು ರಾಜ್ಯ ಸರ್ಕಾರದಿಂದ ಹೋಟೆಲ್ ಯೋಜನೆ ಅಡಿಯಲ್ಲಿ ಸಹಾಯಧನ ವಿತರಣೆ: ಆಸಕ್ತರಿಂದ ಅರ್ಜಿ ಆಹ್ವಾನ

Exit mobile version