ತೃತೀಯ ಲಿಂಗಿ ದಂಪತಿ ಜಹಾದ್ ಮತ್ತು ಜಿಯಾ ಪಾವಲ್‌ಗೆ  ಮಗು ಜನನ


Kozhikode : “ಅಂತಿಮವಾಗಿ ಕಾಯುವಿಕೆ ಮುಗಿದಿದೆ, ಹೊಸ ಸದಸ್ಯರನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ” ಎಂದು ದೇಶದ ಮೊದಲ ತೃತೀಯ ಲಿಂಗಿ(Transgenders) ದಂಪತಿಗಳು ತಮ್ಮ ಮಗು ಜನನದ ಕುರಿತು ಸಾಮಾಜಿಕ ಮಾದ್ಯಮದಲ್ಲಿ (transgender couples baby borned)ಘೋಷಿಸಿಕೊಂಡಿದ್ದಾರೆ.

ಕೇರಳದ ಕೋಝಿಕ್ಕೋಡ್‌ನ ಜಹಾದ್(Jahad) ಮಗುವಿಗೆ ಜನ್ಮ ನೀಡಿದ ಮೊದಲ ಟ್ರಾನ್ಸ್‌ಮ್ಯಾನ್ ಆಗಿದ್ದಾರೆ.  

ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿರುವ ಜಿಯಾ ಪಾವಲ್, ತನ್ನ ಹೆಸರನ್ನು ತಾಯಿ ಮತ್ತು ಜಹಾದ್‌ ಹೆಸರನ್ನು ತಂದೆ ಎಂದು ನೋಂದಾಯಿಸಲು ಆಸ್ಪತ್ರೆಯ ಅಧಿಕಾರಿಗಳನ್ನು ವಿನಂತಿಸುವುದಾಗಿ ಹೇಳಿದರು.  ಇನ್ನು ಮಗುವಿನ ತೂಕ 2.920 ಕೆಜಿ ಇದ್ದು, ತಂದೆ ಮತ್ತು ಮಗು ಆರೋಗ್ಯವಾಗಿದ್ದಾರೆ.

ನಾವು ಲಿಂಗದ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ನಮ್ಮನ್ನು ಬೆಂಬಲಿದ ಎಲ್ಲರಿಗೂ ಧನ್ಯವಾದಗಳು.

ಇನ್ನು ಮುಂದೆ ಜಹಾದ್ ತಂದೆಯಾಗುತ್ತಾರೆ ಮತ್ತು ನಾನು ಹೆಮ್ಮೆಯ ತಾಯಿಯಾಗುತ್ತೇನೆ” ಎಂದು ಅವರು ಹೇಳಿದ್ಧಾರೆ.

ಕೋಝಿಕ್ಕೋಡ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ.ಸಿ.ಶ್ರೀಕುಮಾರ್(Dr C Sri Kumar) ಮಾತನಾಡಿ,

ಇಬ್ಬರೂ ಆರೋಗ್ಯವಾಗಿದ್ದಾರೆ ಮತ್ತು ಅಗತ್ಯ ವಿಶ್ರಾಂತಿಯ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು.

ನವಜಾತ ಶಿಶುವಿನ ರೋಲ್ ರಿವರ್ಸಲ್ ಮತ್ತು ಲಿಂಗವನ್ನು ನೋಂದಾಯಿಸಲು ಆಸ್ಪತ್ರೆಯ ಅಧಿಕಾರಿಗಳು (transgender couples baby borned) ತಜ್ಞರ ಸಲಹೆಯನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ಧಾರೆ.

ಇನ್ನು “ಇದು ಸುಂದರವಾಗಿದೆ, ನಾನು ತಂದೆ ಮತ್ತು ತಾಯಿ ಇಬ್ಬರೂ ಆಗುತ್ತೇನೆ” ಎಂದು ಜಹಾದ್ ಒಂದು ವಾರದ ಹಿಂದೆ ಹೇಳಿದ್ದರು.

ಕಳೆದ ವಾರ ದಂಪತಿಗಳು ತಮ್ಮ ಗರ್ಭಧಾರಣೆಯನ್ನು ಘೋಷಿಸಿದ್ದರು. ಇವರಿಬ್ಬರು ಮೂರು ವರ್ಷಗಳ ಹಿಂದೆ ಭೇಟಿಯಾಗಿ ಪ್ರೀತಿಸುತ್ತಿದ್ದರು.

ಆರಂಭದಲ್ಲಿ, ಅವರು ಮಗುವನ್ನು ದತ್ತು ತೆಗೆದುಕೊಳ್ಳಲು ಯೋಚಿಸಿದ್ದರು. ಆದರೆ ಅವರ ಮನವಿಯನ್ನು ಸರ್ಕಾರ ತಿರಸ್ಕರಿಸಿತು.

ಹೆಚ್ಚು ಅರ್ಹ ದಂಪತಿಗಳು ಸಹ ದತ್ತು ತೆಗೆದುಕೊಳ್ಳುವಾಗ ಟ್ರಾನ್ಸ್ ದಂಪತಿಗಳು ಹೇಗೆ ದತ್ತು ತೆಗೆದುಕೊಳ್ಳಲು ಅರ್ಜಿ ಸಲ್ಲಿಸಬಹುದು? ಎಂದು ಅಧಿಕಾರಿಗಳು ಪ್ರಶ್ನಿಸಿದ್ದರು.

ಜಹಾದ್ ಸ್ತನ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಮತ್ತು ಪುರುಷನಾಗಲು ತನ್ನ ಗರ್ಭಾಶಯವನ್ನು ತೆಗೆದುಹಾಕಲು ಸಿದ್ದತೆ ನಡೆಸಿದ್ದರು.

ಜಹಾದ್ ಈಗಾಗಲೇ ಭಾರೀ ಹಾರ್ಮೋನ್ ಚಿಕಿತ್ಸೆಗೆ ಒಳಗಾಗಿದ್ದರು. “ನಾವು ಟ್ರಾನ್ಸ್‌ಮ್ಯಾನ್ ಮತ್ತು ಟ್ರಾನ್ಸ್‌ವುಮನ್ ಆಗಲು ನಮ್ಮ ಪ್ರಯಾಣವನ್ನು ಮುಂದುವರಿಸುತ್ತೇವೆ… ಹೆರಿಗೆಯಾದ ಆರು ತಿಂಗಳ ನಂತರ ನಾವು ನಮ್ಮ ಚಿಕಿತ್ಸೆಯನ್ನು ಮುಂದುವರಿಸುತ್ತೇವೆ. ಇದು ಇಬ್ಬರೂ ಚೆನ್ನಾಗಿ ಯೋಚಿಸಿದ ನಿರ್ಧಾರ” ಎಂದು ಜಹಾದ್ ಹೇಳಿದ್ದರು.

Exit mobile version