US ವಿದ್ಯಾರ್ಥಿಗಳಿಗೆ ಸಂಗೀತದ ಮೂಲಕ ಗಣಿತ ಹೇಳಿಕೊಡುತ್ತಿರುವ ಭಾರತೀಯ ಶಿಕ್ಷಕ ; ಇವರ ಭೋದನೆಗೆ ನೆಟ್ಟಿಗರ ಮೆಚ್ಚುಗೆ

United States : ಇತ್ತೀಚಿನ ದಿನಗಳಲ್ಲಿ ತರಗತಿಯೊಳಗೆ ಪಾಠ ಮಾಡುವ ಶಿಕ್ಷಕರಿಗೆ (Trigonometry through music) ವಿದ್ಯಾರ್ಥಿಗಳನ್ನು ನಿಯಂತ್ರಿಸಿ, ಪಾಠ ಕಲಿಸುವುದೇ ಹೆಚ್ಚು ಕಷ್ಟಕರವಾಗಿದೆ.

ಆದ್ರೆ, ಇಲ್ಲೊಬ್ಬ ಶಿಕ್ಷಕ ತಮ್ಮ ವಿದ್ಯಾರ್ಥಿಗಳಿಗೆ (Students) ವಿಭಿನ್ನ ರೀತಿಯಲ್ಲಿ ಭೋದನೆ (Teaching) ಮಾಡುವ ಮೂಲಕ ವಿದ್ಯಾರ್ಥಿ ಬಳಗ ಸೇರಿದಂತೆ ನೆಟ್ಟಿಗರ ಮನ ಗೆದ್ದಿದ್ದಾರೆ.

ಓದುವ ವಿಷಯಗಳಲ್ಲಿ ಗಣಿತ (Mathematics) ಅತ್ಯಂತ ಕಠಿಣವಾದ ವಿಷಯ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿಯೇ.

ಗಣಿತ ಅಂದ್ರೆ ವಿದ್ಯಾರ್ಥಿಗಳಿಗೆ ಹಾಗಲಕಾಯಿ ತಿಂದ ಹಾಗೆ. ಇನ್ನು ವಿದ್ಯಾರ್ಥಿಗಳಿಗೆ ಗಣಿತ ಕಲಿಸದೆ ಮನೆಗೆ ಹೋಗಬಾರದು ಎಂಬುದು ಗಣಿತ ಶಿಕ್ಷಕರ ಹಠ!

ವಿದ್ಯಾರ್ಥಿಗಳ ಮೆದುಳಿಗೆ ತುಂಬಿಸುವುದೇ ಕೆಲವೊಮ್ಮೆ ಅಲ್ಲ ಹಲವೊಮ್ಮೆ ಶಿಕ್ಷಕರ ವರ್ಗಕ್ಕೆ ಬಹಳ ಕಠಿಣವಾದ ಕೆಲಸ! ಗಣಿತ ವಿಷಯದಲ್ಲಿ ಅತ್ಯಂತ ಕಠಿಣವಾದ ವಿಷಯ ಅಂದ್ರೆ ಅದು ಟ್ರಿಗ್ನಾಮೆಟ್ರಿ (Trigonometry through music).

ಈ ವಿಷಯದ ಭಾಗದಲ್ಲಿ ಸೂತ್ರಗಳ ನಂತರ ಸೂತ್ರಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯವಿರುವುದರಿಂದ ಅನೇಕರು ಗಣಿತವನ್ನು ಸಂಕೀರ್ಣ ವಿಷಯವೆಂದು ಕಂಡುಕೊಳ್ಳುತ್ತಾರೆ.

https://youtu.be/tQ1qMsn2YoE ಪ್ರಚಾರಕ್ಕೆ ಮಾತ್ರ ಸೀಮಿತವಾದ ಸರ್ಕಾರ ಕೇಂದ್ರ

ಉದಾಹರಣೆಗೆ, x ಅಥವಾ y ಗಾಗಿ ಪರಿಹರಿಸುವುದು, ಕಾಸ್ ಅಥವಾ ಸೈನ್ ತೀಠಾ. ಈ ತೀಠಾ ಮೌಲ್ಯವನ್ನು ಕಂಡುಹಿಡಿಯುವುದು ಮತ್ತು ಪಿರಮಿಡ್ ಅಥವಾ ಇತರ ಕೋನಗಳ ಆಕಾರಗಳ ಪ್ರದೇಶವನ್ನು ನಿರ್ಧರಿಸುವುದು ಅತ್ಯಂತ ಕಠಿಣ. https://vijayatimes.com/report-of-2022-global-hunger-index/

ಹೀಗಾಗಿ, ವಿದ್ಯಾರ್ಥಿಗಳಿಗೆ ಸೂತ್ರಗಳನ್ನು ನೆನಪಿಟ್ಟುಕೊಳ್ಳಲು ಮತ್ತು ವಿಷಯವನ್ನು ಸುಲಭ ಮತ್ತು ಉತ್ತೇಜಕವಾಗಿಸಲು ಸಹಾಯ ಮಾಡಲು,

ಭಾರತೀಯ ಮೂಲದವರಾದ ಶಿಕ್ಷಕ ಬಾಲ ರೆಡ್ಡಿ ಅವರು ಸಂಕೀರ್ಣವಾದ ಗಣಿತದ ಸೂತ್ರಗಳು ಮತ್ತು ಪ್ರಮೇಯಗಳನ್ನು ಹಾಡುಗಳ ಮೂಲಕ ಯುಎಸ್ ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಿದ್ದಾರೆ.

ಈಗ, ಅವರು US ನಲ್ಲಿ ವಿದ್ಯಾರ್ಥಿಗಳಿಗೆ ಟ್ರಿಗ್ನಾಮೆಟ್ರಿಯನ್ನು ಕಲಿಸುವ ಹಳೆಯ ವೀಡಿಯೊ ಆನ್‌ಲೈನ್‌ನಲ್ಲಿ ಬಹಳ ವೈರಲ್ (Viral) ಆಗಿದೆ.

ಒಂದು ದಿನದ ಹಿಂದೆ ಈ ವೀಡಿಯೋ ಹಂಚಿಕೊಂಡ ನಂತರ, ವೀಡಿಯೊವು 8.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಹಾಗೂ ಮತ್ತಷ್ಟು ಹೆಚ್ಚು ವೀಕ್ಷಣೆಯತ್ತ ಸಾಗಿದೆ.

ಈ ವೀಡಿಯೋ ಕುರಿತು ಅನೇಕ ನೆಟಿಜನ್‌ಗಳು ಹಲವಾರು ರೀತಿ ಕಾಮೆಂಟ್‌ ಹಾಕುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

https://twitter.com/AK_Inspire/status/1581542612829605888?s=20&t=pfgU0lW14IA8Elim-EfqVQ

ಈ ರೀತಿ ವಿಭಿನ್ನವಾಗಿ ಪಾಠ ಮಾಡುವ ಶಿಕ್ಷಕರ ಸಂಖ್ಯೆ ನಮಗೆ ಹೆಚ್ಚು ‍ಅಗತ್ಯವಿದೆ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಟ್ರಿಗ್ನಾಮೆಟ್ರಿ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ.

Exit mobile version