Uttarakashi: ಭಾನುವಾರ (ನ.14) ಉತ್ತರಾಖಂಡದ (Uttarakhand) ಉತ್ತರಕಾಶಿ ಜಿಲ್ಲೆಯಲ್ಲಿ ಕುಸಿತಗೊಂಡ ನಿರ್ಮಾಣ ಹಂತದ ಸುರಂಗದೊಳಗೆ ಸಿಲುಕಿರುವ 40 ಕಾರ್ಮಿಕರ ರಕ್ಷಣೆಗೆ ಎನ್ಡಿಆರ್ಎಫ್ (NDRF), ಎಸ್ಡಿಆರ್ಎಫ್ ತಂಡಗಳು ನಡೆಸುತ್ತಿರುವ ಸಾಹಸ ಮುಂದುವರಿದಿದೆ.
ಕೊಳವೆ ಮೂಲಕ ಆಹಾರ, ನೀರು, ಆಕ್ಸಿಜನ್ (Oxygen) ಪೂರೈಸಲಾಗುತ್ತಿದೆ. ಸುರಂಗದ ಒಳಗೆ ಮಣ್ಣು ಕುಸಿದು ಬೀಳುತ್ತಿದ್ದು, ಅದು ರಕ್ಷಣಾ ಕಾರ್ಯಾಚರಣೆಗೆ ತುಸು ಅಡ್ಡಿಯಾಗುತ್ತಿದ್ದು, ಹೈಡ್ರಾಲಿಕ್ ಜಾಕ್ (Hydraulic Jack) ನೆರವಿನಿಂದ 900 ಮಿ.ಮೀ ವ್ಯಾಸದ ಉಕ್ಕಿನ ಕೊಳವೆಯನ್ನು ಸುರಂಗದೊಳಗೆ ಕಳುಹಿಸಲಾಗಿದ್ದು, ಅದರ ಮೂಲಕ ಕಾರ್ಮಿಕರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಆ ಮಣ್ಣು ಕುಸಿದು ಬೀಳದಂತೆ ಕಾಂಕ್ರೀಟ್ (Concreate) ಸಿಂಪಡಿಸಲಾಗುತ್ತಿದೆ. ಒಳಗೆ ಸಿಲುಕಿಕೊಂಡ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದು, ವಾಕಿಟಾಕಿ ಮೂಲಕ ಅವರ ಜತೆ ಹಲವು ಬಾರಿ ಸಂಪರ್ಕ ಸಾಧಿಸಲಾಗಿದೆ,” ಎಂದು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಪ್ರಕಟಣೆ ತಿಳಿಸಿದೆ. ಸುರಂಗದೊಳಗೆ ಸಿಲುಕಿರುವ ಬಹುತೇಕ ಕಾರ್ಮಿಕರು ಒಡಿಶಾ (Odissa) ಮೂಲದವರು ಎಂದು ತಿಳಿದುಬಂದಿದೆ.
ಸುರಂಗದೊಳಗೆ 15 ಮೀಟರ್ ದೂರ ಸಾಗಿದ್ದೇವೆ. ಕಾರ್ಮಿಕರನ್ನು ತಲುಪಲು ಇನ್ನೂ 35 ಮೀಟರ್ ತೆರಳಬೇಕಾಗಿದೆ. ಅಲ್ಲಿ ಅವಶೇಷಗಳು ರಾಶಿ ಬಿದ್ದಿದ್ದು ಅದನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಕಾರ್ಮಿಕರನ್ನು ರಕ್ಷಿಸುವ ಕಾರ್ಯ ಪೂರ್ಣಗೊಳ್ಳಲು ಇನ್ನು ಎರಡು ದಿನ ಬೇಕಾಗಬಹುದು. ಸುರಂಗದ ಒಳಗೆ ಸಿಲುಕಿರುವವರಿಗೆ ನೀರು, ಆಮ್ಲಜನಕ ಮತ್ತು ವಿದ್ಯುತ್ ಅನ್ನು ಒದಗಿಸಲಾಗಿದೆ.
ಸಣ್ಣ ಆಹಾರದ ಪ್ಯಾಕೆಟ್ಗಳನ್ನು (Food Packet) ಪೈಪ್ಗಳ ಮೂಲಕ ರವಾನಿಸಲಾಗುತ್ತಿದೆ,” ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ತಿಳಿಸಿದೆ. ಭಾನುವಾರ ಬೆಳಿಗ್ಗೆ ಸುರಂಗ ಕುಸಿತ ಅವಘಡ ಸಂಭವಿಸಿದ ಸಂದರ್ಭದಿಂದ ರಕ್ಷಣಾ ತಂಡಗಳು ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. 200 ಮೀಟರ್ ಪ್ರದೇಶದವರೆಗೂ ಬಿದ್ದಿದ್ದ ಕಲ್ಲು ಬಂಡೆಗಳನ್ನು ಕತ್ತರಿಸಿ ತೆರವುಗೊಳಿಸುವುದರಲ್ಲಿಯೇ ಹೆಚ್ಚಿನ ಶ್ರಮ ಹಾಗೂ ಸಮಯ ವಿನಿಯೋವಾಗಿದೆ.
ಇದರಲ್ಲಿ ರಕ್ಷಣಾ ತಂಡಗಳು ಸಮನ್ವಯದಿಂದ ಕೆಲಸ ಮಾಡುತ್ತಿದ್ದು, ಗಮನಾರ್ಹ ಪ್ರಗತಿ ಸಾಧಿಸಿವೆ. ಸುರಂಗವನ್ನು ಬ್ಲಾಕ್ ಮಾಡಿರುವ 21 ಮೀಟರ್ ಸ್ಲ್ಯಾಬ್ (Slab) ತೆರವುಗೊಳಿಸಲಾಗಿದ್ದು, ಇನ್ನೂ 19 ಮೀಟರ್ ಮಾರ್ಗ ತೆರವಾಗಬೇಕಿದೆ.
ಭವ್ಯಶ್ರೀ ಆರ್.ಜೆ