ರೈಲ್ವೇ ಟ್ರ್ಯಾಕ್ ಮೇಲೆ ನಿರ್ಮಾಣವಾದ “ಟನಲ್ ಆಫ್ ಲವ್” ; ಪ್ರಕೃತಿಯಿಂದ ಕೂಡಿದ ಈ ತಾಣ ಎಲ್ಲಿದೆ ಗೊತ್ತಾ?

Tunnel Of Love

ನಮ್ಮ ಈ ಆಸಕ್ತಿದಾಯಕ ಜಗತ್ತಿನಲ್ಲಿ, ನೂರಾರು ಸಾವಿರಾರು ಸುಂದರ, ಅದ್ಭುತ ಸ್ಥಳಗಳಿವೆ.

ಅಂತಹ ಸ್ಥಳಗಳಲ್ಲಿ ಒಂದು, ಕ್ಲೆವನ್(Cleven) ನಿಲ್ದಾಣದ ಬಳಿಯ ರೈಲ್ವೆ ಹಳಿಗಳ(Railway Track) ಮೇಲೆ ಸಂಪೂರ್ಣವಾಗಿ ಅಸಾಮಾನ್ಯ ರೀತಿಯಲ್ಲಿ ಬೆಳೆದ ಮರಗಳು ಮತ್ತು ಪೊದೆಗಳು ನೈಸರ್ಗಿಕವಾಗಿ ರಚಿಸಿರುವ “ಪ್ರೀತಿಯ ಸುರಂಗ”(Tunnel of love at ukraine).

ಹೌದು, ಸಣ್ಣ ಉಕ್ರೇನಿಯನ್ ಪಟ್ಟಣವಾದ ಕ್ಲೆವೆನ್‌ನಲ್ಲಿ ಬಳಕೆಯಾಗದ ರೈಲ್ವೇ ಟ್ರ್ಯಾಕ್ ಸ್ವಾಭಾವಿಕವಾಗಿ ದಂಪತಿಗಳಿಗಾಗಿಯೇ ನಿರ್ಮಾಣವಾದ ರೋಮ್ಯಾಂಟಿಕ್ ಸ್ವರ್ಗದಂತೆ ರೂಪಾಂತರವಾಗಿದೆ.

ಸ್ಥಳೀಯವಾಗಿ “ದ ಟನಲ್ ಆಫ್ ಲವ್”(Tunnel of love at ukraine) ಎಂದು ಕರೆಯಲ್ಪಡುವ ಈ ರೈಲ್ವೆ ಟ್ರ್ಯಾಕ್, ಪ್ರೇಮಿಗಳಿಗೆ ವಿಶೇಷವಾದ ಸ್ಥಳವಾಗಿದೆ, ವಿಶೇಷವಾಗಿ ವಸಂತಕಾಲದಲ್ಲಿ ಟ್ರ್ಯಾಕ್ ನ ಉದ್ದಕ್ಕೂ ಮರಗಳ ಬೃಹತ್ ಮೇಲಾವರಣವು ಎರಡೂ ಬದಿಗಳಲ್ಲಿ ಕಮಾನು ರೂಪಿಸಿದಂತೆ ಬೆಳೆಯುತ್ತದೆ.

https://vijayatimes.com/chethan-tweets-over-cm-bommai/

ಈ ಕಮಾನು ಮೂರು ಕಿಲೋಮೀಟರ್‌ಗಳವರೆಗೆ ವ್ಯಾಪಿಸಿದೆ ಮತ್ತು ಮರಗಳ ಹಸಿರು ಸುರಂಗದಂತೆ ಕಾಣುತ್ತದೆ. ಇಲ್ಲಿ ಕೆಲವು ಕ್ಷಣಗಳ ರೋಮ್ಯಾಂಟಿಕ್ ಏಕಾಂತತೆಯನ್ನು ಬಯಸುವ ದಂಪತಿಗಳು ಆಗಾಗ್ಗೆ ಸುತ್ತಾಡುವುದನ್ನು ಕಾಣಬಹುದು.


ಈ ಸುರಂಗದ ಉದ್ದಕ್ಕೂ ಮರದ ದಿಮ್ಮಿಗಳನ್ನು ಸಾಗಿಸುವ ರೈಲು ದಿನಕ್ಕೆ ಮೂರು ಬಾರಿ ಚಲಿಸುವ ಕಾರಣ ಟ್ರ್ಯಾಕ್‌ನ ಮಧ್ಯದಲ್ಲಿ ಮರಗಳು ಬೆಳೆಯುವುದಿಲ್ಲ.

ಆದರೆ ಪ್ರಕೃತಿಯ ಸೋಜಿಗವಾದ ಈ ಸ್ಥಳಕ್ಕೆ ಪ್ರವಾಸಿ ತಾಣವಾಗಿ ಹೆಚ್ಚಿನ ಮನ್ನಣೆ ನೀಡಲಾಗಿಲ್ಲ. ಹಾಗಾಗಿ, ಹೆಚ್ಚಿನವರಿಗೆ ಈ ಸ್ಥಳದ ಬಗ್ಗೆ ತಿಳಿದಿಲ್ಲ ಎನ್ನುವುದು ಬೇಸರದ ಸಂಗತಿ. ಈ ಟನಲ್ ಆಫ್ ಲವ್, ಕೀವ್‌ನಿಂದ ಸುಮಾರು 350 ಕಿ.ಮೀ ದೂರದಲ್ಲಿದೆ.

ನೀವು ಕೂಡ ನಿಮ್ಮ ಸಂಗಾತಿಯ ಜೊತೆಗೆ ಈ “ಪ್ರೀತಿಯ ಸುರಂಗ”ಕ್ಕೆ ಒಮ್ಮೆ ಭೇಟಿ ನೀಡಿ.

Exit mobile version