ತಮ್ಮ ಆರ್ಥಿಕ ಸಮಸ್ಯೆಯಿಂದ ಮುಕ್ತಿಗೊಳ್ಳಲು ಇಬ್ಬರನ್ನು ಹತ್ಯೆಗೈದು, ದೇಹ ಕತ್ತರಿಸಿ ಹೂತಿಟ್ಟ ದಂಪತಿ!

Thiruvanthapuram : NDTV ಪತ್ರಿಕೆ ವರದಿ ಅನುಸಾರ, ಕೇರಳದಲ್ಲಿ(Kerala) ನಾಪತ್ತೆಯಾಗಿರುವ ಇಬ್ಬರು ಮಹಿಳೆಯರ ಬಗ್ಗೆ ಕಾಣೆಯಾದ ಹಿನ್ನೆಲೆ ಹುಡುಕಿಕೊಡಿ ಎಂಬ ಬಿತ್ತಿಪತ್ರಗಳ ಬಗ್ಗೆ ಜನರಿಗೆ ಇದ್ದ ಅನುಮಾನಗಳಿಗೆ (Two Killed For Black Magic)ಸದ್ಯ ಅಚ್ಚರಿ ಸಂಗತಿಯೊಂದು ಬಹಿರಂಗವಾಗಿದೆ.

ಕಾಣೆಯಾದ ಇಬ್ಬರು ಮಹಿಳೆಯರನ್ನು ಅವರ ಕುಟುಂಬದವರು ಮಾಟಮಂತ್ರ ಮತ್ತು ನರಬಲಿ ಆಮಿಷಗಳಿಗೆ ಒಳಗಾಗಿ,

ಕೊಲೆ(Murder) ಮಾಡಿ, ದೇಹವನ್ನು ಕತ್ತರಿಸಿ ಹೂತಿಟ್ಟಿರುವ ವಿಚಿತ್ರ(Weird) ಘಟನೆಯನ್ನು ಪೊಲೀಸರು ಇದೀಗ ಬಹಿರಂಗಪಡಿಸಿದ್ದಾರೆ.


ಎರ್ನಾಕುಲಂ(Enarkulam) ಜಿಲ್ಲೆಯ ನಾನಾ ನಗರದಿಂದ ಬಂದಿದ್ದ ರೋಸ್ಲಿನ್ ಮತ್ತು ಪದ್ಮಾ ಎಂಬ ಇಬ್ಬರು ಮಹಿಳೆಯರನ್ನು ಬಲಿಕೊಡುವ ಮೂಲಕ ತಮ್ಮ ಆರ್ಥಿಕ ತೊಂದರೆಗಳಿಂದ ಮುಕ್ತಿ ಪಡೆದು ದಿಢೀರ್ ಶ್ರೀಮಂತರಾಗಲು ಹಂತಕ ದಂಪತಿಗಳು ಬಯಸಿದ್ದರು.

ಹೀಗಾಗಿ ಇದೇ ಕಾರಣಕ್ಕೆ ಅವರು ಇಬ್ಬರ ಜೀವವನ್ನು ಬಲಿಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿ ಮತ್ತು ಅವರ ಜೊತೆಗೆ ಮತ್ತೊರ್ವ ವ್ಯಕ್ತಿಯನ್ನು ಇಂದು ಬಂಧಿಸಲಾಗಿದೆ.

ಆರಂಭದಲ್ಲಿ ರೋಸೆಲಿನ್ ಮತ್ತು ಪದ್ಮಾ ಎರ್ನಾಕುಲಂನಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದರು.

ಜೂನ್‌ನಲ್ಲಿ ರೋಸ್ಲಿನ್ ನಾಪತ್ತೆಯಾದರೆ, ಪದ್ಮಾ ಸೆಪ್ಟೆಂಬರ್‌ ತಿಂಗಳಲ್ಲಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : https://vijayatimes.com/does-lumpy-virus-spreads-to-human/

ಇಬ್ಬರು ಮಹಿಳೆಯರ ಕುತ್ತಿಗೆಯನ್ನು ಸೀಳಿ, ಅವರ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಪಥನಂತಿಟ್ಟ(Two Killed For Black Magic) ಜಿಲ್ಲೆಯ ತಿರುವಲ್ಲಾ ಎಂಬ ಪಟ್ಟಣದ ವಿವಿಧ ಸ್ಥಳಗಳಲ್ಲಿ ಹೂತಿಟ್ಟು ತಲೆಮರಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಭಗವಂತ್ ಸಿಂಗ್, ಮಸಾಜ್ ಥೆರಪಿಸ್ಟ್ ಮತ್ತು ಅವರ ಪತ್ನಿ ಲೈಲಾ ಕೊಲೆಗಾರರು ಎಂದು ಪೊಲೀಸರು ಪ್ರಕರಣದಲ್ಲಿ ತಿಳಿಸಿದ್ದಾರೆ.

ಈ ಕೊಲೆಗಳು ಅವರಿಗೆ ಸಮೃದ್ಧ ಜೀವನವನ್ನು ತರುತ್ತವೆ ಎಂಬ ಹುಚ್ಚು ನಂಬಿಕೆಗೆ ಅವರು ಒಳಗಾಗಿದ್ದರು ಎನ್ನಲಾಗಿದೆ.

ಬಂಧನಕ್ಕೊಳಗಾದ ಮೂರನೇ ವ್ಯಕ್ತಿ, ರಶೀದ್ ಅಥವಾ ಮುಹಮ್ಮದ್ ಶಫಿ, ಅಪರಾಧದಲ್ಲಿ ಅವರಿಗೆ ಸಹಾಯ ಮಾಡಿದ್ದಾರೆ ಮತ್ತು ಅದರೊಂದಿಗೆ ಹೋಗಲು ಮನವೊಲಿಸಿದ್ದಾರೆ.

ಎರ್ನಾಕುಲಂನಿಂದ ಇಬ್ಬರು ಮಹಿಳೆಯರನ್ನು ಅಪಹರಿಸಿ ದಂಪತಿಯ ಮನೆಗೆ ಕರೆತಂದಿರುವ ಶಂಕೆ ವ್ಯಕ್ತವಾಗಿದೆ.

ಪದ್ಮಾ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.

ಮಹಿಳೆಯರ ಫೋನ್ ಗಳನ್ನು ಮುಹಮ್ಮದ್ ಶಫಿ ಎಂಬಾತನ ಬಳಿ ಪತ್ತೆ ಮಾಡಲಾಗಿದ್ದು, ಆತ ಒಡೆದು ಹಾಕಿದ್ದು, ಅಪಹರಣ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

“ಕಡವಂತರಾದಿಂದ (ಎರ್ನಾಕುಲಂ) ಕಾಣೆಯಾದ ಮಹಿಳೆಗೆ ಸಂಬಂಧಿಸಿದಂತೆ ನಾವು ತನಿಖೆ ನಡೆಸಿದಾಗ,

ಆಕೆಯನ್ನು ತಿರುವಲ್ಲಾದ ಆ ದಂಪತಿಗಳ ಮನೆಯಲ್ಲಿ ಕೊಂದು ಅವಳ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಂತರ ಹೂಳಲಾಗಿದೆ ಎಂದು ನಮಗೆ ತಿಳಿದುಬಂದಿತು.

ಇದು ಆರ್ಥಿಕ ಲಾಭಕ್ಕಾಗಿ ನರಬಲಿಯಾಗಿದೆ. ಆ ದಂಪತಿಗಳನ್ನು ಈಗಾಗಲೇ ಬಂದಿಸಿದ್ದೇವೆ” ಎಂದು ಕೊಚ್ಚಿ(Kochi) ನಗರ ಪೊಲೀಸ್ ಆಯುಕ್ತ ನಾಗರಾಜು ಚಕಿಲಂ ಹೇಳಿದ್ದಾರೆ.

https://youtu.be/NIbQmBVUfDo

ದಂಪತಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಜೂನ್‌ನಲ್ಲಿ ಅದೇ ಮನೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ಹತ್ಯೆ ಮಾಡಿರುವುದರ ಬಗ್ಗೆ ಅವರು ಒಪ್ಪಿಕೊಂಡಿದ್ದಾರೆ. ಆ ಮಹಿಳೆ ರೋಸೆಲಿನ್ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ.

ಈ ಪ್ರಕರಣದಲ್ಲಿ ಹಲವು ಸ್ತರಗಳಿವೆ. ದಂಪತಿಗಳ ಆರ್ಥಿಕ ಲಾಭದ ಹುಚ್ಚಿಗಾಗಿ ಈ ನರಬಲಿ ಮಾಡಲಾಗಿದೆ ಎಂದು ನಾವು ಈಗ ಅರ್ಥಮಾಡಿಕೊಂಡಿದ್ದೇವೆ.

ಅಲ್ಲದೆ, ಮಧ್ಯವರ್ತಿ ಹಣ ಪಡೆದಿರುವುದು ನಮಗೆ ತಿಳಿದಿದೆ. ಇಡೀ ಪ್ರಕರಣವನ್ನು ಬಹಿರಂಗಪಡಿಸಲು ನಮಗೆ ಹೆಚ್ಚಿನ ಸಮಯ ಬೇಕು.

ಇದನ್ನೂ ಓದಿ : https://vijayatimes.com/pm-reminds-old-politics/

ಕೊಲೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

Exit mobile version