ಪಠ್ಯ ಪರಿಷ್ಕರಣೆ : ಸರ್ಕಾರದ ಮುಂದೆ ಬೇಡಿಕೆ ಇಟ್ಟ ಎಡಪಂಥೀಯ ಸಾಹಿತಿಗಳು!

BJP

ಯುವ ಬರಹಗಾರ ರೋಹಿತ್ ಚಕ್ರತೀರ್ಥ(Rohith Chakratheertha) ನೇತೃತ್ವದಲ್ಲಿ ಮಾಡಲಾದ ಪಠ್ಯಪುಸ್ತಕ ಪರಿಷ್ಕರಣೆಗೆ ಎಡಪಂಥೀಯ ಸಾಹಿತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಡಪಂಥೀಯ ಸಾಹಿತಿಗಳು ಪಠ್ಯ ವಾಪಸ್ ಅಭಿಯಾನ ಆರಂಭಿಸಿದ್ದಾರೆ. ಈಗಾಗಲೇ 6 ಕ್ಕೂ ಹೆಚ್ಚು ಎಡಪಂಥೀಯ ಸಾಹಿತಿಗಳು ತಮ್ಮ ಪಠ್ಯ ವಾಪಸ್ ಪಡೆದಿದ್ದಾರೆ. ಇನ್ನೂ ಕೆಲವು ಸಾಹಿತಿಗಳು ಪ್ರಾಧಿಕಾರ, ಸಮಿತಿ, ಪ್ರತಿಷ್ಠಾನಗಳಿಗೂ ರಾಜೀನಾಮೆ ನೀಡಿ ಅಸಮಾಧಾನವನ್ನು ಹೊರಹಾಕಿದ್ದಾರೆ.

ದೇವನೂರು ಮಹಾದೇವ(Devanoor Mahadeva), ಬೋಳುವಾರು ಮಹಮದ್, ಎಸ್.ಜಿ. ಸಿದ್ದರಾಮಯ್ಯ, , ಚಂದ್ರಶೇಖರ್ ತಾಳ್ಯ, ಸರಜೂ ಕಾಟ್ಕರ್, ಈರಪ್ಪ ಕಂಬಳಿ, ಮೂಡ್ನಾಕೂಡು ಚಿನ್ನಸ್ವಾಮಿ ಅವರು ತಮ್ಮ ಅನುಮತಿಯನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಹಂಪಾನಾ ಅವರು ಕುವೆಂಪು ಪ್ರತಿμÁ್ಠನಕ್ಕೆ ರಾಜೀನಾಮೆ ನೀಡಿದ್ದಾರೆ. ಎಡಪಂಥೀಯ ಸಾಹಿತಿಗಳು ಸರ್ಕಾರಕ್ಕೆ ಕೆಲ ಬೇಡಿಕೆಗಳನ್ನು ಇಟ್ಟಿದ್ದಾರೆ.

ಬೇಡಿಕೆ ಏನು? :

  1. ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯಪುಸ್ತಕವನ್ನು ಮುಂದುವರಿಸಬೇಕು.
  2. ಲಂಕೇಶ್, ಸಾರಾ ಅಬೂಬುಕ್ಕರ್ ಸೇರಿದಂತೆ ಕೈಬಿಟ್ಟಿರುವ ಸಾಹಿತಿಗಳ ಪಠ್ಯ ಮರು ಸೇರ್ಪಡೆ ಮಾಡಬೇಕು.
  3. ಹೊಸ ಪಠ್ಯಪುಸ್ತಕ ಪರಿಷ್ಕರಣೆ ವರದಿ ತಿರಸ್ಕಾರ ಮಾಡಬೇಕು.
  4. ರೋಹಿತ್ ಚಕ್ರತೀರ್ಥರನ್ನು ಪರಿಷ್ಕರಣೆ ಸಮಿತಿಯಿಂದ ವಜಾ ಮಾಡಬೇಕು.
  5. ಕೇಶವ್ ಹೆಡ್ಗೆವಾರ್ ಅವರ ಪಠ್ಯವನ್ನು ಕೈ ಬಿಡಬೇಕು.
  6. ಶಾಲಾ ಪಠ್ಯದಲ್ಲಿ ಕೇಸರೀಕರಣ ತುಂಬುವುದನ್ನು ಕೈಬಿಡಬೇಕು.

ಆದರೆ ಎಡಪಂಥೀಯ ಸಾಹಿತಿಗಳ ಬೇಡಿಕೆಗಳಿಗೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh) ಅವರು ಹೊಸ ಪಠ್ಯಪುಸ್ತಕವನ್ನು ಮರುಪರಿಷ್ಕರಣೆ ಮಾಡುವ ಪ್ರಶ್ನೆಯೇ ನಮ್ಮ ಮುಂದಿಲ್ಲ. ಪಠ್ಯ ಪರಿಷ್ಕರಣೆ ಕುರಿತು ಕೆಲವರು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ. ಇದಕ್ಕೆಲ್ಲಾ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

Exit mobile version