ಕರ್ನಾಟಕದ ಹೆಮ್ಮೆ ಈ ಗ್ರಾಮ ; ತಂಬಾಕು ಮುಕ್ತ ಗ್ರಾಮ ಎಂಬ ಕೀರ್ತಿ ಈ ಗ್ರಾಮಕ್ಕೆ ಸಲ್ಲುತ್ತದೆ!

ನಮ್ಮ ಸಮಾಜವು ಹಲವಾರು ದುಶ್ಚಟಗಳ ಆಗರವಾಗಿದೆ, ಸಮಾಜವನ್ನು ಅತಿಯಾಗಿ ಬಾಧಿಸುತ್ತಿರುವ ದುಶ್ಚಟಗಳಲ್ಲಿ ತಂಬಾಕು(Tobbaco) ಸೇವನೆ ಕೂಡ ಒಂದು. ದುಶ್ಚಟಗಳಿಗೆ ಒಮ್ಮೆ ದಾಸರಾದರೆ, ಅದರಿಂದ ಹೊರಬರಲು ಸಾಧ್ಯವಿಲ್ಲ ಅಂತಾನೇ ಎಲ್ಲರೂ ಭಾವಿಸುತ್ತಾರೆ. ಆದರೆ ಉಡುಪಿಯಲ್ಲಿ(Udupi) ಮಾತ್ರ ಊಹಿಸಲೂ ಅಸಾಧ್ಯವಾದ ವಿದ್ಯಮಾನವೊಂದು ನಡೆದಿದೆ.‌ ಈ ಗ್ರಾಮದ ಕೇವಲ ಓರ್ವ ವ್ಯಕ್ತಿಯಲ್ಲ, ಬದಲಾಗಿ ಇಡೀ ಊರಿಗೆ ಊರೇ ತಂಬಾಕು ಮುಕ್ತವಾಗಿದೆ.


ಹೌದು, ಕೋಡಿ ಗ್ರಾಮದ ಪಡುತೋನ್ಸೆ ಗ್ರಾಮಕ್ಕೆ ತಾಗಿಕೊಂಡಿರುವ ಕೋಡಿ ಬೆಂಗ್ರೆಯನ್ನು(Kodi Bengre) ‘ತಂಬಾಕು ಮುಕ್ತ ಕೋಡಿ ಬೆಂಗ್ರೆ’ ಎಂದು ಜಿಲ್ಲಾಡಳಿತ ಮಾರ್ಚ್ 31ರಂದು ಅಧಿಕೃತವಾಗಿ ಘೋಷಣೆ ಮಾಡಿದೆ. ರಾಷ್ಟ್ರೀಯ ತಂಬಾಕು ನಿಯಂತ್ರಣ(National Tabboco Control) ಕಾರ್ಯಕ್ರಮದ ಉಡುಪಿ ಜಿಲ್ಲಾ ಸರ್ವೇಕ್ಷಣ ಘಟಕ ವತಿಯಿಂದ ತಂಬಾಕು ಮುಕ್ತ ಹಳ್ಳಿಗಾಗಿ ಸರ್ವೇ ಕಾರ್ಯವನ್ನು ನಡೆಸಲಾಗಿತ್ತು, ಕಳೆದ 27 ವರ್ಷಗಳಿಂದ ತಂಬಾಕನ್ನು ನಿಷೇಧಿಸಿದ್ದ ಕೋಡಿ ಬೆಂಗ್ರೆಯನ್ನು ತಂಬಾಕು ಮುಕ್ತ ಗ್ರಾಮವಾಗಿ ಆಯ್ಕೆ ಮಾಡಲಾಗಿದೆ.

ಇದೇ ರೀತಿ, ಜಿಲ್ಲಾದ್ಯಂತ ವಿವಿಧ ಹಳ್ಳಿಗಳನ್ನು ತಂಬಾಕು ಮುಕ್ತವನ್ನಾಗಿಸಲು ಸರ್ವೇ ಕಾರ್ಯ ನಡೆಸಲಾಗುತ್ತದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ನಾಗರತ್ನಾ ತಿಳಿಸಿದ್ದಾರೆ. ವಿಶೇಷವೆಂದರೆ, ಈ ಭಾಗದ ಜನರಿಗೆ ಯಾವುದೇ ಸರಕಾರವಾಗಲಿ, ಆರೋಗ್ಯ ಇಲಾಖೆಯಾಗಲಿ ಮದ್ಯಪಾನ(Alcohal) ನಿಷೇಧ(Ban) ಮಾಡಬೇಕು ಅಥವಾ ಹಳ್ಳಿಯನ್ನು ತಂಬಾಕು ಮುಕ್ತ ಪ್ರದೇಶವನ್ನಾಗಿಸಬೇಕೆಂಬ ಯಾವುದೇ ಆದೇಶವನ್ನು ನೀಡಿಲ್ಲ, ಯಾವ ಕಾಯ್ದೆಯನ್ನೂ ತಂದಿಲ್ಲ. ಅದರೂ ಇಲ್ಲಿನ ಜನ ಕಳೆದ 27 ವರ್ಷಗಳಿಂದ ಸ್ವಯಂಪ್ರೇರಿತರಾಗಿ ಮದುವೆ ಮುನ್ನ ದಿನದ ಮೆಹಂದಿ ಕಾರ್ಯಕ್ರಮಕ್ಕೆ ಮಧ್ಯ ಮಾಂಸ ಎಲ್ಲವನ್ನೂ ನಿಷೇಧಿಸುವ ಮೂಲಕ ಗ್ರಾಮವನ್ನು ತಂಬಾಕು ಮುಕ್ತ ಪ್ರದೇಶವನ್ನಾಗಿಸಿದ್ದಾರೆ.


ಕೋಡಿಬೆಂಗ್ರೆ ಗ್ರಾಮ ಒಂದು ಸುಂದರ ಪ್ರವಾಸಿ ತಾಣವೂ ಹೌದು. ಇಲ್ಲಿ ಒಂದು ಬದಿಯಲ್ಲಿ ಸಮುದ್ರ, ಎರಡು ಬದಿಯಲ್ಲಿ ನದಿಗಳು ಹರಿಯುತ್ತದೆ. ಸುಮಾರು 290ರಷ್ಟು ಮನೆಗಳಿವೆ. ಶೇ. 70ರಷ್ಟು ಮೊಗವೀರರು, ಉಳಿದಂತೆ ಬಿಲ್ಲವ, ಖಾರ್ವಿ, ಮುಸ್ಲಿಂ ಸಮುದಾಯದ ಮಂದಿ ಇಲ್ಲಿದ್ದಾರೆ. 12 ಅಂಗಡಿಗಳಿವೆ, ಆದರೆ ಇಲ್ಲಿನ ಯಾವ ಅಂಗಡಿಗಳಲ್ಲೂ ತಂಬಾಕು ಸಿಗುವುದಿಲ್ಲ. ಎಲೆ ಅಡಿಕೆಯನ್ನು ಹೊರತುಪಡಿಸಿ ಮದ್ಯ ತಂಬಾಕು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Exit mobile version