Weird : ಕಡಿದಾಗ ರಕ್ತ ಸುರಿಸುವ ಮರ ‘ಬ್ಲಡ್ ವುಡ್ ಟ್ರಿ’ ; ಇದರ ಗುಣಲಕ್ಷಣಗಳೇ ವಿಚಿತ್ರ!

Africa : ಆಪ್ರಿಕಾದ ದಕ್ಷಿಣ ಪ್ರದೇಶದಲ್ಲಿ ‘ಪೆಟೋಕಾರ‍್ಪಸ್ ಅಂಗೋಲೆನ್ಸಿಸ್’ (Pterocarpus Angolensis) ಎಂದು ಸಸ್ಯಶಾಸ್ತ್ರದಲ್ಲಿ ಗುರುತಿಸಲ್ಪಡುವ ಮರವೊಂದಿದೆ.

ಈ ಮರ ರಕ್ತ (Blood) ಸುರಿಸುವ ಮೂಲಕ, ‘ಸಸ್ಯಗಳಿಗೆ ಜೀವವಿದೆ’ ಎನ್ನುವ ಜಗದೀಶ ಚಂದ್ರಬೋಸ್ (Jagadeesh Chandrabose) ಅವರ ಸಂಶೋದನೆಯನ್ನು ರುಜುವಾತು ಪಡಿಸಿದೆ.

ಕಿಯಾಟ್, ಮುನಿಂಗಾ, ಮುಕ್ವಾ ಎಂಬುದು ಈ ಮರಕ್ಕಿರುವ ಸ್ಥಳೀಯ ಹೆಸರುಗಳು. ಆದರೆ ವಿಶ್ವಾದ್ಯಂತ ಇದು ಪ್ರಸಿದ್ದಿಯಾಗಿರುವುದು ‘ಬ್ಲಡ್ ವುಡ್ ಟ್ರಿ’ (Blood Wood Tree) ಎಂದು.

ಈ ಮರದ ಕಾಂಡ ಅಥವಾ ಕೊಂಬೆಯನ್ನು ಕೊಡಲಿಯಿಂದ ಕಡಿದಾಗ, ಅಥವಾ ಕೊಚ್ಚಿದಾಗ ಆ ಜಾಗದಿಂದ ಕೆಂಪು ಬಣ್ಣದ ನೀರು ಹೊರಬರುತ್ತದೆ.

ಇದನ್ನೂ ಓದಿ : https://vijayatimes.com/memes-to-a-comedian-hero-ositha-iheme/

ಈ ನೀರು ಅಂಟಾಂಟಾಗಿದ್ದು, ಪ್ರಾಣಿಗಳ ಮೈಮೇಲೆ ಆದ ಗಾಯದಿಂದ ರಕ್ತ ಸ್ರವಿಸುವುದನ್ನು ನೆನಪಿಗೆ ತರುವ ಇದು ನಿಜವಾದ ರಕ್ತದಂತೆಯೇ ಇರುತ್ತದೆ.

ಅಲ್ಲದೇ ಈ ನೀರಿನ ಬಣ್ಣ ಗಾಡವಾಗಿರುವುದರಿಂದ ಕೆಲವು ಕಡೆ ಬಣ್ಣದ ವಸ್ತುಗಳ ತಯಾರಿಕೆಯಲ್ಲಿ ಇದನ್ನು ಬಳಸಿದರೆ, ಮತ್ತೆ ಕೆಲವೆಡೆ ಪ್ರಾಣಿಯ ಕೊಬ್ಬನ್ನು ಇದರೊಡನೆ ಬೆರೆಸಿ ಅನೇಕ ಸೌಂದರ್ಯ ವರ್ದಕಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತಿದೆ.


ಅದೇ ರೀತಿ, ಮೈ ಮೇಲಿನ ಗಾಯಗಳು ಬೇಗ ವಾಸಿಯಾಗಲು ಇದರ ಲೇಪನ ಅತ್ಯಂತ ಉಪಯುಕ್ತ. ಇರಿತದಿಂದಾದ ನೋವಿನ ಉಪಶಮನಕ್ಕೆ, ಮಲೇರಿಯಾ, ಹೊಟ್ಟೆ ಸಂಬಂಧಿ ಕಾಯಿಲೆ,

ಹಲವು ರೀತಿಯ ಜ್ವರ, ಕಣ್ಣಿನ ತೊಂದರೆ ಹಾಗೂ ಬಾಣಂತಿಯರಲ್ಲಿ ಹಾಲಿನ ಪ್ರಮಾಣ ಹೆಚ್ಚಿಸಲು ಈ ನೀರಿನ ವೈದ್ಯಕೀಯ ಗುಣವನ್ನು ಬಳಸಿಕೊಂಡು,

ಇದನ್ನೂ ಓದಿ : https://vijayatimes.com/birthday-wishes-to-pm-narendra-modi/

ಔಷದಿಯನ್ನು ತಯಾರಿಸುವ ಪರಿಪಾಟ ಇಲ್ಲಿನ ಜನರಲ್ಲಿದೆ. ಈ ನೀರಿನ ಬಣ್ಣ ಕೆಂಪಾಗಿರುವುದರಿಂದ ರಕ್ತ ಸಂಬಂಧಿ ಕಾಯಿಲೆ ಗುಣಪಡಿಸುವ ಶಕ್ತಿ ಹೊಂದಿದೆ ಎಂಬುದು ಇಲ್ಲಿನವರ ನಂಬಿಕೆ.

ಹಾಗೇ, ಇದರ ಉನ್ನತ ಗುಣಮಟ್ಟ ಹಾಗೂ ಬಣ್ಣದಿಂದಾಗಿ, ಇದರಿಂದ ತಯಾರಿಸಿದ ಪೀಠೋಪಕರಣಗಳು ಹೆಚ್ಚು ಆಕರ್ಷಕ ಮತ್ತು ಹೆಚ್ಚು ಬೆಲೆ ಹೊಂದಿರುವಂತವು.

ಈ ಮರದ ವಿನ್ಯಾಸ ಮತ್ತು ಮೃದುತ್ವದಿಂದಾಗಿ ಇದರಲ್ಲಿ ಕೆತ್ತನೆ ಕಾರ‍್ಯ ಅತಿ ಸರಾಗವಾಗಿ ನಡೆಯುತ್ತದೆ. ಈ ಮರ ಸುಮಾರು 12 ರಿಂದ 18 ಮೀಟರ್ ಎತ್ತರ ಬೆಳೆಯುತ್ತದೆ. ಇದರ ತೊಗಟೆ ಬಹಳ ಒರಟು. ದಟ್ಟ ಕಂದು ಬಣ್ಣ ಹಾಗೂ ಹಳದಿ ಹೂವುಗಳು ಇದರ ವೈಶಿಷ್ಟ್ಯ.

ಈ ಮರದ ಕೊಂಬೆಗಳು ಬಹಳ ಎತ್ತರದಲ್ಲಿ ಕವಲೊಡೆಯುವುದರಿಂದ ಸುತ್ತಲೂ ಛತ್ರಿಯಾಕಾರದಲ್ಲಿ ಹರಡುತ್ತವೆ, ಇದು ಮರದ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತಿದೆ.
Exit mobile version