US ಅಧ್ಯಕ್ಷ ರೇಸ್ನಲ್ಲಿ ವಿವೇಕ್ ರಾಮಸ್ವಾಮಿ ; ಅತ್ಯಂತ ಶ್ರೀಮಂತನಾಗಿರೋ ಈತ ಅಮೇರಿಕನ್ನರ ಮನಗೆಲ್ತಿರೋದ್ಯಾಕೆ..?!

Washington DC: 2024ರ ಸಪ್ಟೆಂಬರ್ನಲ್ಲಿ ಅಮೇರಿಕಾದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅದಕ್ಕಾಗಿ (US presidential election – Ramaswamy) ಅಮೇರಿಕಾದಲ್ಲಿ ಈಗಾಗಲೇ ಭಾರೀ

ಪ್ರಚಾರ ಸಭೆಗಳು ನಡೆಯುತ್ತಿವೆ. ಈ ಬಾರಿಯ ಪ್ರಚಾರದಲ್ಲಿ ಹೆಚ್ಚು ಕೇಳಿ ಬರುತ್ತಿರುವ ಹೆಸರು ವಿವೇಕ್ ರಾಮಸ್ವಾಮಿ (Vivek Ramaswamy). ಭಾರತೀಯ ಮೂಲದ ಈ ವ್ಯಕ್ತಿ ಇದೀಗ

ಅಮೇರಿಕಾದಲ್ಲಿ ಭಾರೀ ಜನಪ್ರಿಯತೆಯನ್ನೇ ಗಳಿಸುತ್ತಿದ್ದಾರೆ. ಮೊನಚು ಮಾತು, ಹೊಸ ಅಮೇರಿಕಾ ಕಟ್ಟುವ ಕನಸು, ಖಚಿತ ನಿಲುವು, ಅಮೇರಿಕಾವೇ ಫಸ್ಟ್ ಅನ್ನೋ ನೀತಿ ಇದೀಗ

ವಿವೇಕ್ ರಾಮಸ್ವಾಮಿ ಅವರನ್ನು ಅಧ್ಯಕ್ಷೀಯ (US presidential election – Ramaswamy) ರೇಸ್ನಲ್ಲಿ ಮುನ್ನಡೆ ಸಾಧಿಸುವಂತೆ ಮಾಡಿವೆ.

ಇನ್ನು ವಿವೇಕ್ ರಾಮಸ್ವಾಮಿ ಅವರ ತಂದೆ ಮತ್ತು ತಾಯಿ ಭಾರತದಿಂದ ಅಮೇರಿಕಾಕಕ್ಕೆ (America) ಉದ್ಯೋಗಕ್ಕಾಗಿ ವಲಸೆ ಹೋದವರು. ವಿವೇಕ್ ರಾಮಸ್ವಾಮಿ ಅವರು ಅಮೇರಿಕದಲ್ಲಿ

ನೆಲಸಿರುವ 2ನೇ ತಲೆಮಾರಿನವರ ಭಾರತೀಯರಾಗಿದ್ದಾರೆ. ಅವರದ್ದು ಅಪ್ಪಟ ತಮಿಳು ಬ್ರಾಹ್ಮಣ ಕುಟುಂಬ. ಅವರ ತಂದೆ ಗಣಪತಿ ರಾಮಸ್ವಾಮಿ (Ganapati Ramaswamy) ಮತ್ತು ತಾಯಿ

ಗೀತಾ ರಾಮಸ್ವಾಮಿ (Geetha Ramaswamy) ಕೇರಳದ ವಡಕ್ಕನಚೇರಿಯವರು.

ಇನ್ನು 38 ವರ್ಷದ ವಿವೇಕ್ ರಾಮಸ್ವಾಮಿ ಹಾರ್ವರ್ಡ್ (Harvard) ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರದಲ್ಲಿ ಪದವಿ ಮತ್ತು ಯಾಲೆ ಲಾ ಸ್ಕೂಲ್ನಲ್ಲಿ (Yale Law School) ಕಾನೂನು ಪದವಿ ಪಡೆದಿದ್ದಾರೆ.

ನಂತರ ತಮ್ಮ 23ನೇ ವಯಸ್ಸಿನಲ್ಲಿ ಕ್ಯಾಂಪಸ್ ವೆಂಚರ್ ನೆಟ್ವರ್ಕ್ (Campus venture Network) ಎಂಬ ಕಂಪನಿಯನ್ನು ಸ್ಥಾಪಿಸವ ಮೂಲಕ ಸ್ವಂತ ಉದ್ಯಮ ಆರಂಭಿಸಿದ ವಿವೇಕ್ ರಾಮಸ್ವಾಮಿ,

ಈಗ ಅಮೇರಿಕಾದ ಅತ್ಯಂತ ಶ್ರೀಮಂತರಲ್ಲಿ ಒಬ್ಬರೆನಿಸಿದ್ದಾರೆ.

ಅಮೇರಿಕಾದಲ್ಲಿ ಅತ್ಯಂತ ಪ್ರಸಿದ್ದ ಉದ್ಯಮಿಯಾಗಿರುವ ವಿವೇಕ್ ರಾಮಸ್ವಾಮಿ ಅವರು, ಕ್ಯುವಿಟಿ ಫೈನಾನ್ಷಿಯಲ್ ಎಂಬ ಹೆಡ್ಜ್ ಫಂಡ್ ಸಂಸ್ಥೆಯನ್ನು, ರೋಯಿವಂಟ್ ಸೈನ್ಸಸ್ ಎಂಬ ಬಯೋಟೆಕ್ನಾಲಜಿ

ಸಂಸ್ಥೆ, ಚಾಪ್ಟರ್ ಮೆಡಿಕೇರ್ (Chapter Medicare) ಎಂಬ ಮೆಡಿಕೇರ್ ನ್ಯಾವಿಗೇಶನ್ ಪ್ಲಾಟ್ಫಾರ್ಮ್ (Navigation Platform), ಆನ್ಕೋರ್ ಬಯೋಫಾರ್ಮಾ, ಟೆಕ್ಮಿರಾ ಫಾರ್ಮಾಸ್ಯೂಟಿಕಲ್ಸ್,

ಆರ್ಬುಟಸ್ ಬಯೋಫಾರ್ಮಾ (Arbutus Biopharma) ಎಂಬ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ.

ಜಿ-20 ಶೃಂಗಸಭೆ : ಭದ್ರತೆಗೆ AI ಕ್ಯಾಮರಾ ; ಎಲ್ಲೆಡೆ ಸ್ನೈಪರ್ಸ್ ; ಭದ್ರಕೋಟೆಯಾದ ದೆಹಲಿ..!

ವಿವೇಕ್ ರಾಮಸ್ವಾಮಿ ಅವರು ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯಕ್ಕೆ ಧುಮುಕಿದ್ದು, ಸ್ಟೂಡೆಂಟ್ ಯೂನಿಯನ್ಗಳ (Student Union) ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 2016 ನಂತರ ರಿಪಬ್ಲಿಕನ್

(Republican) ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾರೆ. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ಗೆ (Donald Trump) ಬೆಂಬಲ ನೀಡಿದ್ದರು.

ಆದರೆ 2024ರಲ್ಲಿ ಅಮೇರಿಕಾದಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಭ್ಯರ್ಥಿಯಾಗಲು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಫ್ಲೋರಿಡಾ ಗವರ್ನರ್ ರಾನ್

ಡೀಸ್ಯಾಂಟಿಸ್ (Ron DeSantis) ಜೊತೆ ಸ್ಪರ್ಧೆ ನಡೆಸಲಿದ್ದಾರೆ.

ಮಹೇಶ್

Exit mobile version