ಪಾಕಿಸ್ತಾನಕ್ಕೆ ಎಫ್-16 : ಜೈಶಂಕರ್ ಹೇಳಿಕೆಗೆ ಅಮೇರಿಕಾ  ಪ್ರತಿಕ್ರಿಯೆ

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ(usa counter attack on India) ಎರಡೂ ವಿಭಿನ್ನ ಅಂಶಗಳಿಗೆ ಒತ್ತು ನೀಡುವುದರೊಂದಿಗೆ  ಅಮೇರಿಕಾದ ಪಾಲುದಾರರಾಗಿದ್ದು,

ಈ ಇಬ್ಬರೂ ನಮ್ಮ ಪಾಲುದಾರರು ಮತ್ತು ಪ್ರತಿಯೊಂದರಲ್ಲೂ ವಿಭಿನ್ನ ಅಂಶಗಳಿಗೆ ಒತ್ತು ನೀಡುತ್ತಾರೆ ಎಂದು ಜೋ ಬಿಡೆನ್‌(usa counter attack on India) ಆಡಳಿತ ಹೇಳಿಕೆ ನೀಡಿದೆ.

ಸದ್ಯ ಅಮೇರಿಕಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್  ಭಯೋತ್ಪಾದನೆಯ ವಿರುದ್ಧ ಹೋರಾಡಲು ಎಫ್-16 ಯುದ್ದ ವಿಮಾನಗಳನ್ನು ಪಾಕಿಸ್ತಾನಕ್ಕೆ ನೀಡಲಾಗುತ್ತಿದೆ ಎಂಬ ಅಮೇರಿಕಾದ ವಾದವನ್ನು  ತೀವ್ರವಾಗಿ ಟೀಕಿಸಿದ್ದರು.

https://vijayatimes.com/raid-on-pfi/

ಎಫ್-16 ಫೈಟರ್ ಜೆಟ್‌ಗಳನ್ನು ಎಲ್ಲಿ ಮತ್ತು ಯಾರ ವಿರುದ್ಧ ಬಳಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ವಿಷಯಗಳನ್ನು ಹೇಳುವ ಮೂಲಕ ನೀವು ಯಾರನ್ನೂ ಮೂರ್ಖರನ್ನಾಗಿಸುತ್ತಿಲ್ಲ” ಎಂದು ಜೈಶಂಕರ್‌ಅಮೇರಿಕಾದ ನಡೆಯನ್ನು ಟೀಕಿಸಿದ್ದರು.

ಜೈಶಂಕರ್‌ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಮೇರಿಕಾದ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್, “ಭಾರತ ಮತ್ತು ಪಾಕಿಸ್ತಾನ ಈ ಇಬ್ಬರೂ ನಮ್ಮ ಪಾಲುದಾರರು ಮತ್ತು ಪ್ರತಿಯೊಂದರಲ್ಲೂ ವಿಭಿನ್ನ ಅಂಶಗಳಿಗೆ ಒತ್ತು ನೀಡುತ್ತಾರೆ.

https://vijayatimes.com/no-bribe-campaign/

ನಾವು ಇಬ್ಬರನ್ನೂ ಪಾಲುದಾರರಾಗಿ ನೋಡುತ್ತೇವೆ, ಏಕೆಂದರೆ ನಾವು ಅನೇಕ ಸಂದರ್ಭಗಳಲ್ಲಿ ಮೌಲ್ಯಗಳನ್ನು ಹಂಚಿಕೊಂಡಿದ್ದೇವೆ. ನಾವು ಅನೇಕ ಸಂದರ್ಭಗಳಲ್ಲಿ ಸಮಾನ ಹಿತಾಸಕ್ತಿಗಳನ್ನು ಹೊಂದಿದ್ದೇವೆ ಮತ್ತು ಭಾರತದೊಂದಿಗೆ ನಾವು ಹೊಂದಿರುವ ಸಂಬಂಧವು ತನ್ನದೇ ಆದ ನೆಲೆಯ ಮೇಲೆ ನಿಂತಿದೆ.

ಅದೇ ರೀತಿ ಪಾಕಿಸ್ತಾನದೊಂದಿಗೆ ನಾವು ಹೊಂದಿರುವ ಸಂಬಂಧವು ತನ್ನದೇ ಆದ ನೆಲೆಯ ಮೇಲೆ ನಿಂತಿದೆ ” ಎಂದು ನೆಡ್ ಪ್ರೈಸ್ ಅಭಿಪ್ರಾಯಪಟ್ಟಿದ್ದಾರೆ.

https://youtu.be/qA8iySF16NI

ಇನ್ನು  ಈ ತಿಂಗಳ ಆರಂಭದಲ್ಲಿ, ಬಿಡೆನ್ ಆಡಳಿತವು ಪಾಕಿಸ್ತಾನಕ್ಕೆ 450 ಮಿಲಿಯನ್ ಡಾಲರ್ ಮೌಲ್ಯದ ಎಫ್-16 ಫೈಟರ್ ಜೆಟ್ಗಳನ್ನು ನೀಡಲು ಅನುಮೋದನೆ ನೀಡಿದೆ.  

ಈ ಹಿಂದಿನ ಟ್ರಂಫ್‌ ಸರ್ಕಾರವು ಪಾಕಿಸ್ತಾನದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಬಿಡೆನ್‌ಸರ್ಕಾರ ತೆರವುಗೊಳಿಸಿದ್ದು, ಪಾಕಿಸ್ತಾನಕ್ಕೆ ಮಿಲಿಟರಿ ನೆರವು ನೀಡಲು ಮುಂದಾಗಿದೆ. ಅಮೇರಿಕಾ ಸರ್ಕಾರದ ಈ ನಿರ್ಧಾರಕ್ಕೆ  ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

-ಮಹೇಶ್.ಪಿ.ಎಚ್

Exit mobile version