ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಜ್ಜಾದ ಉತ್ತರಾಖಂಡ ; ದೇಶಾದ್ಯಂತ ಜೋರಾದ ಚರ್ಚೆ

Shimla: ಏಕರೂಪಾ ನಾಗರಿಕ ಸಂಹಿತೆಯನ್ನು ಮುಂದಿನ ವಾರ ಜಾರಿಗೆ ತರಲು ಉತ್ತರಾಖಂಡ (Uttarakhand implement ucc) ಸರ್ಕಾರ ಮುಂದಾಗಿದೆ. ಈ ವಿಷಯ ಇದೀಗ ದೇಶಾದ್ಯಂತ ಭಾರೀ

ಚರ್ಚೆಗೆ ಕಾರಣವಾಗಿದೆ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ (Uttarkhand) ಪಾತ್ರವಾಗಲಿದೆ. ಇನ್ನು ಗೋವಾದಲ್ಲಿಯೂ

ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದ್ದು, ಕೇಂದ್ರಾಡಳಿತ ಪ್ರದೇಶವಾಗಿದ್ದ ಕಾಲದಲ್ಲಿಯೇ ಗೋವಾದಲ್ಲಿ (Goa) ಫ್ರೆಂಚ್ ಮಾದರಿಯ ನಾಗರಿಕ ಸಂಹಿತೆ ಜಾರಿಯಲ್ಲಿದೆ.

ಇನ್ನು ಮೂಲಗಳ ಪ್ರಕಾರ, ನ್ಯಾಯಮೂರ್ತಿ (ನಿವೃತ್ತ) ರಂಜನಾ ದೇಸಾಯಿ (Ranjana Desai) ನೇತೃತ್ವದಲ್ಲಿ ರಚಿಸಲಾದ ಸಮಿತಿಯು ಮುಂದಿನ ಎರಡು ದಿನಗಳಲ್ಲಿ ಉತ್ತರಾಖಂಡ ಮುಖ್ಯಮಂತ್ರಿ

ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರಿಗೆ ವರದಿಯನ್ನು ಸಲ್ಲಿಸಲಿದೆ. ನಂತರ ಉತ್ತರಾಖಂಡ ವಿಧಾನಸಭೆಯ ವಿಶೇಷ ಅಧಿವೇಶನವನ್ನು ದೀಪಾವಳಿಯ ನಂತರದ ವಾರದಲ್ಲಿ

ಕರೆಯಲಾಗುವುದು, ಆಗ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಅಂಗೀಕರಿಸಲಾಗುತ್ತದೆ. ನಂತರ ಅದು ಕಾನೂನಿನ ಮಾನ್ಯತೆಯನ್ನು ಪಡೆಯುತ್ತದೆ ಎನ್ನಲಾಗಿದೆ.

ಈ ವರ್ಷದ ಜೂನ್ನಲ್ಲಿ, ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಕರಡು ಸಮಿತಿಯ ಸದಸ್ಯರಾದ ಸುಪ್ರೀಂ ಕೋರ್ಟ್ನ (Supreme Court) ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರು

ಉತ್ತರಾಖಂಡಕ್ಕೆ ಏಕರೂಪ ನಾಗರಿಕ ಸಂಹಿತೆಯ ಕರಡು ರಚನೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಉತ್ತರಖಂಡದ ಉದ್ದೇಶಿತ ಏಕರೂಪ ನಾಗರಿಕ ಸಂಹಿತೆಯ

ಕರಡು ಈಗ ಪೂರ್ಣಗೊಂಡಿದೆ ಎಂದು ನಿಮಗೆ ತಿಳಿಸಲು ನನಗೆ ಅಪಾರ ಸಂತೋಷವಾಗಿದೆ. ಕರಡು ಪ್ರತಿಯೊಂದಿಗೆ ತಜ್ಞರ ಸಮಿತಿಯ ವರದಿಯನ್ನು ಮುದ್ರಿಸಿ ಉತ್ತರಾಖಂಡ ಸರ್ಕಾರಕ್ಕೆ ಸಲ್ಲಿಸಲಾಗುವುದು

ಎಂದು (Uttarakhand implement ucc) ತಿಳಿಸಿದ್ದರು.

ಇನ್ನೊಂದೆಡೆ ಲೋಕಸಭಾ ಚುನಾವಣೆಯೂ ಮುನ್ನವೇ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಗುಜರಾತ್ (Gujurat) ಕೂಡಾ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಏಕರೂಪ ನಾಗರಿಕ

ಸಂಹಿತೆ ಜಾರಿಗೆ ತರಲು ಬೇಕಾದ ಅನೇಕ ಸಿದ್ದತೆಗಳನ್ನು ಗುಜರಾತ್ ಸರ್ಕಾರ ಕೂಡಾ ಭರದಿಂದ ನಡೆಸಿದೆ. ಇನ್ನು ಕೆಲವೇ ದಿನಗಳಲ್ಲಿ ಗುಜರಾತ್ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ಎರಡನೇ

ರಾಜ್ಯವಾಗಲಿದೆ.

ಇದನ್ನು ಓದಿ: ಉಡುಪಿಯ ನಾಲ್ವರ ಹತ್ಯೆ ಪ್ರಕರಣ: ಒಬ್ಬಳ ಮೇಲಿನ ದ್ವೇಷ ನಾಲ್ವರ ಹತ್ಯೆಗೈದಿದ್ದ ಹಂತಕ ಮಾಜಿ ಪೊಲೀಸ್

Exit mobile version