ಲಕ್ನೋ ನಗರಕ್ಕೆ ‘ಲಕ್ಷ್ಮಣಪುರಿ’ ಹೆಸರಿಡಲು ಯೋಗಿ ಚಿಂತನೆ?

UP

ಉತ್ತರಪ್ರದೇಶದ(Uttarpradesh) ರಾಜಧಾನಿ ಲಕ್ನೋ(Lucknow) ನಗರಕ್ಕೆ ಅದರ ಮೂಲ ಹೆಸರು ‘ಲಕ್ಷ್ಮಣಪುರಿ’ ಎಂದು ಮರುನಾಮಕರಣ ಮಾಡಲು ಮುಖ್ಯಮಂತ್ರಿ(Chiefminister) ಯೋಗಿ ಆದಿತ್ಯನಾಥ್(Yogi Adityanath) ಚಿಂತನೆ ನಡೆಸಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

ಹೀಗೊಂದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಇತ್ತೀಚೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಡಿರುವ ಟ್ವೀಟ್. ಇತ್ತೀಚೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಉತ್ತರಪ್ರದೇಶಕ್ಕೆ ಸ್ವಾಗತಿಸಿ ‘ಲಕ್ಷ್ಮಣದೇವನ ಪವಿತ್ರ ನಗರಕ್ಕೆ ಸ್ವಾಗತ’ ಎಂದು ಟ್ವೀಟ್ ಮಾಡಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಜ್ಞಾಪೂರ್ವಕವಾಗಿ ‘ಲಕ್ಷ್ಮಣದೇವನ’ ಹೆಸರನ್ನು ಪ್ರಸ್ತಾಪಿಸಿದ್ದಾರೆ.

ಹೀಗಾಗಿ ಮುಂದಿನ ದಿನಗಳಲ್ಲಿ ಲಕ್ನೋ ನಗರದ ಹೆಸರನ್ನು ಮರುನಾಮಕರಣ ಮಾಡಲು ಯೋಗಿ ಚಿಂತನೆ ನಡೆಸಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

Exit mobile version