ಕೇಂದ್ರ ರೈಲ್ವೆಯಲ್ಲಿ ಟೆಕ್ನಿಕಲ್ ಅಸೋಸಿಯೇಟ್‌ಗಳ ನೇಮಕ: ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೇಂದ್ರ ರೈಲ್ವೆಯಲ್ಲಿ ಖಾಲಿ ಇರುವ ತನ್ನ ವಿವಿಧ ಘಟಕಗಳಲ್ಲಿ ಸೀನಿಯರ್ ಟೆಕ್ನಿಕಲ್ ಅಸೋಸಿಯೇಟ್‌ (Senior Technical Associate) ಹಾಗೂ ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್‌(Junior Technical Associate) ಪೋಸ್ಟ್‌ಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳು
ಸೀನಿಯರ್ ಟೆಕ್ನಿಕಲ್ ಅಸೋಸಿಯೇಟ್‌/ ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್‌: 135

ವಿದ್ಯಾರ್ಹತೆ
ಸೀನಿಯರ್ ಟೆಕ್ನಿಕಲ್ ಅಸೋಸಿಯೇಟ್‌ ಹುದ್ದೆಗಳಿಗೆ ಸಂಬಂಧಿಸಿದ ಇಂಜಿನಿಯರಿಂಗ್ ಪದವಿ ಪಾಸ್ ಮಾಡಿರಬೇಕು.
ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್‌ ಹುದ್ದೆಗಳಿಗೆ ಡಿಪ್ಲೊಮ ಶಿಕ್ಷಣವನ್ನು, ಬಿಎಸ್ಸಿ, ಸಿವಿಲ್ ಇಂಜಿನಿಯರಿಂಗ್ ಪಾಸ್‌ ಮಾಡಿರಬೇಕು.

ವಯಸ್ಸು
ಕನಿಷ್ಠ 18 ವರ್ಷ ದಾಟಿರಬೇಕು.
ಸಾಮಾನ್ಯ ಅಭ್ಯರ್ಥಿಗಳಿಗೆ 33 ವರ್ಷ ದಾಟಿರಬಾರದು.
ಒಬಿಸಿ ಅಭ್ಯರ್ಥಿಗಳಿಗೆ 36 ವರ್ಷ ವಯಸ್ಸು ದಾಟಿರಬಾರದು.
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 38 ವರ್ಷ ದಾಟಿರಬಾರದು.

ಅರ್ಜಿ ಸಲ್ಲಿಕೆ ದಿನಾಂಕಗಳು
ಅರ್ಜಿ ಸಲ್ಲಿಕೆ ಮೊದಲ ದಿನಾಂಕ : 04-10-2023
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 25-10-2023 ರ ಸಂಜೆ 05 ಗಂಟೆವರೆಗೆ

ಅರ್ಜಿ ಶುಲ್ಕ ವಿವರ
ಸಾಮಾನ್ಯ ವರ್ಗ, ಒಬಿಸಿ ವರ್ಗದವರಿಗೆ ಶುಲ್ಕ ರೂ.500.
ಎಸ್‌ಸಿ / ಎಸ್‌ಟಿ / ಒಬಿಸಿ / ಮಹಿಳಾ / ಆರ್ಥಿಕವಾಗಿ ಹಿಂದುಳಿದವರಿಗೆ ರೂ.250.
ಶುಲ್ಕ ಪಾವತಿ ವಿಧಾನ : ಡಿಮ್ಯಾಂಡ್ ಡ್ರಾಪ್ಟ್‌ ತೆಗೆಯುವ ಮೂಲಕ.

ಆಯ್ಕೆ ವಿಧಾನ
ವಿದ್ಯಾರ್ಹತೆ : 55 ಅಂಕಗಳು
ಕೆಲಸದ ಅನುಭವ : 30 ಅಂಕಗಳು
ವೈಯಕ್ತಿಕ / ಇಂಟೆಲಿಜೆನ್ಸ್‌ ಟೆಸ್ಟ್ : 15 ಅಂಕಗಳು
ಒಟ್ಟು ಅಂಕಗಳು : 100

ವಿದ್ಯಾರ್ಹತೆ
ಸೀನಿಯರ್ ಟೆಕ್ನಿಕಲ್ ಅಸೋಸಿಯೇಟ್‌ ಹುದ್ದೆಗಳಿಗೆ Rs.32,000-37,000.
ಜೂನಿಯರ್ ಟೆಕ್ನಿಕಲ್ ಅಸೋಸಿಯೇಟ್‌ ಹುದ್ದೆಗಳಿಗೆ Rs.25,000-30,000.

ಕೇಂದ್ರ ರೈಲ್ವೆಯ ಅಧಿಕೃತ ವೆಬ್‌ಸೈಟ್‌ (Website) ವಿಳಾಸ : https://cr.indianrailways.gov.in/

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ನೋಟಿಫಿಕೇಶನ್‌ (Notification) ಪಿಡಿಎಫ್‌ ಫೈಲ್‌ ಕ್ಲಿಕ್ ಮಾಡಿ ಓದಿರಿ. central railway technical associate recruitment 2023 notification

ಭವ್ಯಶ್ರೀ ಆರ್.ಜೆ

Exit mobile version