ಕರ್ನಾಟಕ ರಾಜ್ಯದ ಅಂಚೆ ಕಚೇರಿಗಳಲ್ಲಿ ಒಟ್ಟು 1,678 ಹುದ್ದೆ ನೇಮಕ: ಎಸ್‌ಎಸ್‌ಎಲ್‌ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು..ಖಾಲಿ ಹುದ್ದೆ ಬಗ್ಗೆ ಇಲ್ಲಿದೆ ಮಾಹಿತಿ..ಚೆಕ್‌ ಮಾಡಿ..

Job News : ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿ 30,041 ಗ್ರಾಮೀಣ ಡಾಕ್‌ ಸೇವಕ್‌ ಹುದ್ದೆಗಳ ಭರ್ತಿಗೆ ಇಂಡಿಯನ್‌ ಪೋಸ್ಟ್‌ (vacancy in post office) ಅಧಿಸೂಚನೆ ಬಿಡುಗಡೆ ಮಾಡಿದೆ.ಇದು ಈ ವರ್ಷದ ಎರಡನೇ

ಅತ್ಯಂತ ಬೃಹತ್‌ ಸಂಖ್ಯೆ ನೇಮಕಾತಿಯ ಪ್ರಕಟಣೆ ಆಗಿದೆ .ಒಟ್ಟು 1,678 ಹುದ್ದೆಗಳು ಅಂದರೆ ಕರ್ನಾಟಕ ರಾಜ್ಯದ ಎಲ್ಲ ಅಂಚೆ ಕಚೇರಿಗಳು ಸೇರಿದಂತೆ ಖಾಲಿ ಇವೆ. ಈ ಅರ್ಜಿಯನ್ನು ಎಸ್‌ಎಸ್‌ಎಲ್‌ಸಿ (SSLC)

ಪಾಸಾದವರು ಸಹ (vacancy in post office) ಸಲ್ಲಿಸಬಹುದು.

ಇನ್ನೊಂದು ವಿಶೇಷವೆಂದರೆ ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ಯಾವುದೇ ಎಕ್ಸಾಮ್‌ (Exam) ನಡೆಸದೇ ನಡೆಸಲಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಎಂದು ಅಂದುಕೊಂಡಲ್ಲಿ ಅರ್ಜಿ ಸಲ್ಲಿಸಲು ಕೆಲವು

ವಿಧಾನವನ್ನು ಈ ಕೆಳಗಿನಂತೆ ತಿಳಿಸಲಾಗಿದೆ. ಜೊತೆಗೆ ನಿಮ್ಮ ಗ್ರಾಮ /ಹೋಬಳಿ/ತಾಲೂಕಿನ ಯಾವ ಅಂಚೆ ಕಚೇರಿಗಳಲ್ಲಿ ಹುದ್ದೆಗಳು ಖಾಲಿ ಇವೆ ಮತ್ತು ಕರ್ನಾಟಕದ ಯಾವ ಜಿಲ್ಲೆ / ಅಂಚೆ ವೃತ್ತಗಳಲ್ಲಿ ಎಷ್ಟು

ಹುದ್ದೆ ಖಾಲಿ ಇವೆ, ಎಂದು ಇಲ್ಲಿ ನಿಮಗೆ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ.

ಕರ್ನಾಟಕದಲ್ಲಿನ ಅಂಚೆ ವಿಭಾಗವಾರು ಹುದ್ದೆಗಳ ಸಂಖ್ಯೆ ಕೆಳಗಿನಂತಿದೆ.

ಬಾಗಲಕೋಟೆ : 29
ಬೀದರ್ : 49
ಬಳ್ಳಾರಿ: 43
ಬೆಳಗಾವಿ: 42
ಜಿಪಿಒ ಬೆಂಗಳೂರು : 6
ಪೂರ್ವ ವೃತ್ತ ಬೆಂಗಳೂರು : 11
ದಕ್ಷಿಣ ವೃತ್ತ ಬೆಂಗಳೂರು : 4
ಪಶ್ಚಿಮ ವೃತ್ತ ಬೆಂಗಳೂರು : 6
ಚಿಕ್ಕಮಗಳೂರು: 63
ಚನ್ನಪಟ್ಟಣ: 66
ದಾವಣಗೆರೆ ಕಛೇರಿ: 47
ಚಿಕ್ಕೋಡಿ: 44
ಚಿತ್ರದುರ್ಗ: 51
ಹಾಸನ: 44
ಧಾರವಾಡ: 36
ಗದಗ: 63


ಹಾವೇರಿ: 33
ಗೋಕಾಕ್: 13
ಕೋಲಾರ: 75
ಮಂಗಳೂರು: 52
ಕಲಬುರಗಿ: 44
ಕಾರವಾರ: 53
ಕೊಡಗು: 44
ಆರ್‌ಎಂಎಸ್ ಕ್ಯೂ: 6
ಮಂಡ್ಯ: 78
ರಾಯಚೂರು: 49
ಮೈಸೂರು: 43
ನಂಜನಗೂಡು: 41
ಪುತ್ತೂರು: 89
ಶಿರಸಿ: 48
ಆರ್‌ಎಂಎಸ್ ಹೆಚ್‌ಬಿ: 44
ಯಾದಗಿರಿ: 33
ಶಿವಮೊಗ್ಗ: 74
ಉಡುಪಿ: 109
ತುಮಕೂರು: 81
ವಿಜಯಪುರ: 65

ಇಲ್ಲಿ ತಿಳಿಸಲಾಗಿರುವ ಪ್ರತಿ ಜಿಲ್ಲೆಯ ಯಾವ ಅಂಚೆ ಕಚೇರಿಗಳಲ್ಲಿ ಯಾವ ಹುದ್ದೆಗಳು ಹಾಗೂ ಎಷ್ಟು ಹುದ್ದೆ ಖಾಲಿ ಇವೆ ಎಂದು ತಿಳಿಯುವ ವಿಧಾನ ಇಲ್ಲಿದೆ


ಅಭ್ಯರ್ಥಿಗಳು ತಮ್ಮ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ, ಎಲ್ಲೆಲ್ಲಿ ಅಂಚೆ ಕಛೇರಿಗಳಿವೆ, ಎಂದು ಸುಲಭವಾಗಿ ತಿಳಿಯಲು ಇಲ್ಲಿ ತಿಳಿಸಲಾಗಿರುವ ಕೆಳಗಿನ ಹಂತಗಳನ್ನು ಫಾಲೋ ಮಾಡಿರಿ.

ಮೊದಲು ವೆಬ್‌ಸೈಟ್‌ (Website) ವಿಳಾಸ https://indiapostgdsonline.cept.gov.in/HomePageS/D11.aspx ಕ್ಕೆ ಭೇಟಿ ನೀಡಿ.

ಈ ವೆಬ್‌ಪುಟದಲ್ಲಿ ನೀವು ಕರ್ನಾಟಕದಲ್ಲಿನ ಎಲ್ಲ ಅಂಚೆ ವೃತ್ತಗಳ ಲಿಸ್ಟ್‌ ಅನ್ನು ನೋಡಬಹುದು.

ವೆಬ್‌ಪೇಜ್‌ ಹೋಮ್ ಪೇಜ್ ಅನ್ನು ಹಾಗೆ ಡೌನ್ ಮಾಡಿಕೊಂಡು ಹೋದಲ್ಲಿ ನಿಮಗೆ ‘Select Division‘ ಎಂಬ ಆಯ್ಕೆ ಕಾಣಿಸುತ್ತದೆ ಅಲ್ಲಿ ನಿಮ್ಮ ಜಿಲ್ಲೆ/ವೃತ್ತವನ್ನು ಆಯ್ಕೆ ಮಾಡಿ.

ಉದಾಹರಣೆಗೆ ನೀವು ಉಡುಪಿ ಜಿಲ್ಲೆಯವರಾಗಿದ್ದಲ್ಲಿ ‘ಉಡುಪಿ ‘ ಎಂದು ಆಯ್ಕೆ ಮಾಡಿ.

ನಂತರ ‘View Posts’ ಎಂಬ ಆಯ್ಕೆ ಇರುವಲ್ಲಿ ಕ್ಲಿಕ್ ಮಾಡಿ.

ಇಲ್ಲಿ ನಿಮಗೆ ಒಂದು ಪಿಡಿಎಫ್‌ ಫೈಲ್‌ (PDF File) ಓಪನ್‌ ಆಗುತ್ತದೆ.

ಇಲ್ಲಿ ನಿಮಗೆ ಪ್ರತಿ ಜಿಲ್ಲೆಯಲ್ಲಿರುವ ಪ್ರತಿಯೊಂದು ಅಂಚೆ ಕಛೇರಿಗಳ ಹುದ್ದೆಗಳ ಸಂಖ್ಯೆ ಹಾಗೂ, ಲಿಸ್ಟ್‌ ಮತ್ತು ಯಾವ ಕೆಟಗರಿ ಅಭ್ಯರ್ಥಿಗೆ ಯಾವ ಕ‍ಛೇರಿಯಲ್ಲಿ ಹುದ್ದೆ ಮೀಸಲಿದೆ ಎಂದು ತಿಳಿದುಕೊಳ್ಳಬಹುದು.

ವಿಶೇಷ ಸೂಚನೆ : ಕರ್ನಾಟಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕೆಂದು ಅಂದುಕೊಂಡಿದ್ದರೆ 10ನೇ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ ಓದಿರಬೇಕು.

ರಶ್ಮಿತಾ ಅನೀಶ್

Exit mobile version