Bengaluru: ಚೀನಾ (China) ಮಾರುಕಟ್ಟೆಯೊಂದಿಗಿನ ವ್ಯಾಪಾರ ವಹಿವಾಟು ಕಡಿಮೆಯಾದ ಮೇಲೆ ಸ್ಥಳೀಯವಾಗಿ ರೇಷ್ಮೆಗೆ ಬೇಡಿಕೆ ಬಂದಿದ್ದು, ರಾಮನಗರ (Ramanagar), ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಗಳು ರೇಷ್ಮೆಗೆ ಪ್ರಸಿದ್ಧವಾಗಿದೆ.ರೇಷ್ಮೆ ಬೆಳೆಗಾರರು ಹೆಚ್ಚಾಗಿ ರೇಷ್ಮೆಗೆ ಒಲವು ತೋರುತ್ತಿದ್ದು, ಇಲಾಖೆಯಲ್ಲಿ 68 ಹುದ್ದೆಗಳು ಖಾಲಿಯಿದೆ ಆದರೆ ಇನ್ನೂ ನೇಮಕಾತಿ ಆಗಿಲ್ಲ.

ರೇಷ್ಮೆ ಬೆಳೆಗೆ ಒಂದೆಡೆ ನುಸಿರೋಗ ಕಾಡುತ್ತಿದ್ದರೆ ಮತ್ತೊಂದೆಡೆ ರೇಷ್ಮೆ ಇಲಾಖೆಗೆ ಸಿಬ್ಬಂದಿ ಸಮಸ್ಯೆ ತಲೆ ನೋವಾಗಿ ಪರಿಣಮಿಸಿದ್ದು, ಜಿಲ್ಲೆಯ ರೇಷ್ಮೆ ಇಲಾಖೆಯ ಹುದ್ದೆಗಳಲ್ಲಿ ಶೇ. 50 ಕ್ಕೂ ಹೆಚ್ಚು ಸಿಬ್ಬಂದಿಗಳಿಲ್ಲದೆ ರೇಷ್ಮೆ ಬೆಳೆಗಾರರ ಜತೆಗೆ ಅಧಿಕಾರಿಗಳಿಗೂ ಸಮಸ್ಯೆ ಉಂಟಾಗುತ್ತಿದೆ.
ಜಿಲ್ಲೆಯಲ್ಲಿರುವ 4 ತಾಲ್ಲೂಕಿನ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಜಿಲ್ಲಾ ಕಚೇರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳ ಸ್ಥಾನಗಳಲ್ಲಿ ಬಹುತೇಕ ಹುದ್ದೆಗಳು ಕಳೆದ ಕೆಲ ವರ್ಷಗಳಿಂದ ಖಾಲಿ ಇದ್ದರೂ ನೇಮಕಾತಿಯಾಗಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ಕೆಲ ಹುದ್ದೆಗಳಿಗೆ ನೇಮಕ ಮಾಡಲು ಅವಕಾಶ ಇರುವುದಿಲ್ಲ.

ರೇಷ್ಮೆ ಇಲಾಖೆ ಕೆಲಸ ಕಚೇರಿಗೆ ಮಾತ್ರ ಸೀಮಿತವಾಗಿಲ್ಲದೆ ಅದಕ್ಕಿಂತ ಹೆಚ್ಚಾಗಿ ರೇಷ್ಮೆ ಬೆಳೆಗಾರರ ಹೊಲಗಳಿಗೆ ಹಾಗೂ ರೇಷ್ಮೆ ಸಾಕಾಣಿಕೆ ಸ್ಥಳಗಳಿಗೆ ಭೇಟಿ ನೀಡಿ ಅವರಿಗೆ ಸಲಹೆಗಳನ್ನು ನೀಡಬೇಕಾದ ಕೆಲಸ ಕೂಡ ಇದೆ. ಆದರೆ ಇಲಾಖೆಯಲ್ಲಿ ಬಹುತೇಕ ಹುದ್ದೆಗಳು ಖಾಲಿಯೇ ಇದ್ದು, ಒಬ್ಬರಿಗೆ ಎರಡು – ಮೂರು ಹುದ್ದೆಗಳ ಜವಾಬ್ದಾರಿ ನೀಡಲಾಗಿದೆ. ಇದರಿಂದ ಅಧಿಕಾರಿ, ಸಿಬ್ಬಂದಿಗಳಿಗೆ ಒತ್ತಡದ ನಡುವೆ ಕೆಲಸ ಮಾಡಬೇಕಾದ ಪರಿಸ್ಥಿತಿಯಿದೆ.
ಈವರೆಗೆ ಕೇವಲ 31 ಹುದ್ದೆಗಳು ಭರ್ತಿಯಾಗಿದ್ದು, ಡಿಗ್ರೂಪ್ (D Group)ಸಿಬ್ಬಂದಿ ಸೇರಿದಂತೆ ಒಟ್ಟು ಜಿಲ್ಲೆಯ ರೇಷ್ಮೆ ಇಲಾಖೆ 95 ಹುದ್ದೆ ಮಂಜೂರಾಗಿದೆ. ರೇಷ್ಮೆ ಇಲಾಖೆಯಡಿ, ರೇಷ್ಮೆ ವಿಸ್ತರಣಾಧಿಕಾರಿ, ಕಚೇರಿ ಸಹಾಯಕರು ಉಳಿದಂತೆ 64 ಹುದ್ದೆಗಳು ಬಾಕಿ ಇದ್ದು, ಕಳೆದ ತಿಂಗಳು 4 ಮಂದಿ ಸಿಬ್ಬಂದಿ ನಿವೃತ್ತರಾಗಿದ್ದು, 68 ಹುದ್ದೆಗಳು ಖಾಲಿಯಾಗಿದೆ.
ಭವ್ಯಶ್ರೀ ಆರ್.ಜೆ