ವಂದೇ ಭಾರತ್ ರೈಲಿನಲ್ಲಿ ರಾಶಿ ರಾಶಿ ಪ್ಲಾಸ್ಟಿಕ್‌ ಬಾಟಲಿಗಳು: ಕಾಣೆಯಾಯ್ತು ಸ್ವಚ್ಛ ಭಾರತ

New delhi : ಭಾರತೀಯ ರೈಲ್ವೆ ಅಂದ್ರೆ ಅದು ಕೊಳಕು, ಗಲೀಜಿಗೆ ಹೆಸರುವಾಸಿ. ಇದರಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸ್ವಚ್ಫತೆಗೆ (Vande Bharat train Plastic) ಒಂದಿಷ್ಟೂ ಪ್ರಾಮುಖ್ಯತೆ ಕೊಡದೇ ಇರೋದೇ ಈ ದುಸ್ಥಿತಿಗೆ ಕಾರಣ.

ಇತ್ತೀಚೆಗೆ ಭಾರತೀಯ ರೈಲ್ವೆಗೆ ಸೇರ್ಪಡೆಯಾದ ವಂದೇ ಭಾರತ್‌ ರೈಲಿಗೂ(Vande Bharath Express) ಇದೇ ಗತಿ ಬರುತ್ತಿದೆ.

ಸ್ವಚ್ಫ ಹಾಗೂ ಸುಖಕರ ಪ್ರಯಾಣದ ಭರವಸೆಯೊಂದಿಗೆ ಹಳಿಗೆ ಇಳಿದಿರುವ ಈ ರೈಲು ಕೂಡ ಸ್ವಚ್ಫತೆಯ ವಿಚಾರದಲ್ಲಿ ಹಳಿ ತಪ್ಪುತ್ತಿದೆ.

ಇತ್ತೀಚಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರು ಕುಡಿದ ನೀರಿನ ಬಾಟಲಿಯನ್ನು ಎಲ್ಲೆಂದರಲ್ಲಿ ಎಸೆದಿರುವುದು ಕಂಡುಬಂದಿದೆ.

ಅಲ್ಲದೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿ ಭಾರಿ ಟೀಕೆಗೆ ಗುರಿಯಾಗಿದೆ.

ವಂದೇ ಭಾರತ್‌ ರೈಲಿನ ಈ ದೃಶ್ಯ ಕಂಡು ಕೆಂಡಾಮಂಡಲರಾದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌(Ashwini Vaishnav) ವಂದೇ ಭಾರತ್‌ ರೈಲನ್ನು ಸ್ವಚ್ಛವಾಗಿಡಲು ಪ್ರಯಾಣದ ಮಧ್ಯೆಯೂ ಸ್ವಚ್ಫತಾಕಾರ್ಯ ಕೈಗೊಳ್ಳಲು ರೈಲ್ವೇ ಸಿಬ್ಬಂದಿಗೆ ಆದೇಶ ನೀಡಿದ್ದಾರೆ.

ವಿಮಾನಗಳಲ್ಲಿ ಕೈಗೊಳ್ಳುವಂತೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕೂಡ ಸ್ವಚ್ಛತಾ ಕಾರ್ಯ ಅಳವಡಿಸಿಕೊಳ್ಳುವಂತೆ ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕಸ ಎಸೆಯುವ ಕುರಿತು ಕೇಳಿ ಬಂದ ಹಲವು ವರದಿಗಳನ್ನು ಗಮನಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್,

ಈ ರೈಲುಗಳಲ್ಲಿ ಸ್ವಚ್ಛತಾ ಕೆಲಸಗಳನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: U19 ವಿಶ್ವಕಪ್ ಗೆದ್ದ ಭಾರತ ಮಹಿಳಾ ಕ್ರಿಕೆಟ್‌ ತಂಡ: ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ಮಣಿಸಿದ ಭಾರತೀಯ ವನಿತೆಯರು

ವಂದೇ ಭಾರತ್ ರೈಲುಗಳಲ್ಲಿ ಸ್ವಚ್ಛತಾ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ ಎಂದು ಸಚಿವರು ಶನಿವಾರ ಟ್ವೀಟ್(Tweet) ಮಾಡಿ ಪ್ರಯಾಣಿಕರಿಗೆ ತಿಳಿಸಿದ್ದಾರೆ.

ಇದರೊಟ್ಟಿಗೆ ಪ್ರಯಾಣಿಕರಿಗೂ ಸಹ ಶುಚಿತ್ವವನ್ನು ಕಾಪಾಡಲು ಮನವಿ ಮಾಡಿದ್ದಾರೆ.

ವಂದೇ ಭಾರತ್ ರೈಲುಗಳ ಕೋಚ್‌ನಲ್ಲಿ ಸಿಬ್ಬಂದಿಗಳು ಪ್ರಯಾಣಿಕರಿಂದ ಕಸ ಸಂಗ್ರಹಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡ ಸಚಿವ ಅಶ್ವಿನ್‌,

ವಂದೇ ಭಾರತ್ ರೈಲುಗಳಲ್ಲಿ ಶುಚಿಗೊಳಿಸುವ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ.

ನಿಮ್ಮ ಸಹಕಾರವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಖಾಲಿ ನೀರಿನ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು,

ಆಹಾರ ಪ್ಯಾಕೆಟ್‌ಗಳು ಮತ್ತು ರೈಲಿನಲ್ಲಿ ಹರಡಿರುವ ಕಾಗದದಂತಹ ಕಸವನ್ನು ತೋರಿಸುವ ವಿವಿಧ ಫೋಟೋಗಳು ಮತ್ತು ವೀಡಿಯೊಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ವರದಿಯಾಗಿವೆ.

ಶನಿವಾರ, ಭಾರತೀಯ ಆಡಳಿತ ಸೇವೆಗಳ (ಐಎಎಸ್)(IAS) ಅಧಿಕಾರಿ ಅವನೀಶ್ ಶರಣ್(Avaneesh Sharan) ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ನೆಲದ ಮೇಲೆ ಚದುರಿರುವ ಕಸದ ಫೋಟೊವನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ಸನಾತನ ಧರ್ಮ ನಮ್ಮ ರಾಷ್ಟ್ರೀಯ ಧರ್ಮ : ಸಿಎಂ ಯೋಗಿ ಆದಿತ್ಯನಾಥ್

ಈ ಬಗ್ಗೆ ಸಚಿವರು ಮತ್ತು ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದರು. ಸಚಿವರ ಆದೇಶದ(Vande Bharat train Plastic) ಮೇರೆಗೆ ರೈಲ್ವೆ ಶುಚಿಗೊಳಿಸುವ ಸಿಬ್ಬಂದಿಗಳು ರೈಲ್ವೇ ಕೋಚ್‌ಗೆ ಅಡ್ಡಲಾಗಿ ನಿಂತು ಕುಳಿತಿರುವ ಪ್ರಯಾಣಿಕರಿಂದ ಕಸ ಸಂಗ್ರಹಿಸುವ ಕೆಲಸ ಆರಂಭಿಸಿದ್ದಾರೆ.

ಇತ್ತೀಚೆಗಷ್ಟೇ ಆರಂಭವಾದ ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕಸದ ರಾಶಿ ಇರುವುದು ಕಂಡುಬಂದಿದ್ದು, ಈ ಬಗ್ಗೆ ಬಂದ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಎಂದು ವಾಲ್ಟೇರ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅನುಪ್ ಸತ್ಪತಿ,

ಸ್ವಚ್ಛತೆ ಎಂದರೆ ನಿಮ್ಮನ್ನು ಮತ್ತು ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕ್ರಿಯೆ.

ನೀವು ಈ ರೀತಿ ವರ್ತಿಸಿದರೆ ಸ್ವಚ್ಛ ರೈಲು-ಸ್ವಚ್ಛ ಭಾರತ್ ಎಂಬ ನಮ್ಮ ಧ್ಯೇಯ ವಾಕ್ಯವನ್ನು ಈಡೇರಿಸಲು ಸಾಧ್ಯವಿಲ್ಲ! ನಿಮಗೆ ಉತ್ತಮ ಸೇವೆ ನೀಡಲು ರೈಲ್ವೆಯೊಂದಿಗೆ ಸಹಕರಿಸಿ, ಕಸವನ್ನು ನಿಲ್ಲಿಸಿ ಎಂದು ತಿಳಿಸಿದ್ದಾರೆ.

Exit mobile version