ಹುಬ್ಬಳ್ಳಿಗೆ ಅರ್ಧ ಗಂಟೆ ಮುಂಚೆ ತಲುಪಲಿದೆ ಧಾರವಾಡ -ಬೆಂಗಳೂರು ವಂದೇ ಭಾರತ್‌ ರೈಲು

Bengaluru: ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು (Vande Bharat Express Train) ಧಾರವಾಡ ನಡುವಿನ ವಂದೇ ಭಾರತ್‌ ರೈಲಿನ ವೇಗವನ್ನು ಹೆಚ್ಚಿಸಲಾಗಿದ್ದು, ಹೊಸ

ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಮತ್ತು ರೈಲುಗಳ ಸಮಯವನ್ನು (Vande Bharat Express Train) ಪರಿಷ್ಕರಣೆ ಮಾಡಲಾಗುತ್ತಿದೆ.

ಹುಬ್ಬಳ್ಳಿ (Hubballi) ಶ್ರೀ ಸಿದ್ಧಾರೂಢ ಸ್ವಾಮೀಜಿ ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ಅಕ್ಟೋಬರ್‌ 7 ರಿಂದ ಜಾರಿಗೆ ಬರುವಂತೆ ಸಮಯ ಪರಿಷ್ಕರಿಸಲಾಗಿದೆ. ಹುಬ್ಬಳ್ಳಿಗೆ ಬೆಂಗಳೂರಿನಿಂದ ಈ

ಮೊದಲಿಗಿಂತ ಅರ್ಧಗಂಟೆ ವೇಗವಾಗಿ ಸಾಗಲಿದೆ. ಅಂತೆಯೇ ಹುಬ್ಬಳ್ಳಿ/ ಧಾರವಾಡದಿಂದ (Dharwad) ಯಶವಂತಪುರಕ್ಕೆ 15 ನಿಮಿಷ ವೇಗವಾಗಿ ಆಗಮಿಸಲಿದೆ.

ಬೆಳಿಗ್ಗೆ 11ಕ್ಕೆ ಹುಬ್ಬಳ್ಳಿ ತಲುಪಲಿದೆ. ರೈಲು ಸಂಖ್ಯೆ 20661 ಕೆ.ಎಸ್‌.ಆರ್‌. (KSR) ಬೆಂಗಳೂರು-ಧಾರವಾಡ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಎಸ್‌.ಎಸ್‌.ಎಸ್‌. ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಗ್ಗೆ 11:30 ಕ್ಕೆ

ಆಗಮಿಸಿ 11:35 ಕ್ಕೆ ನಿರ್ಗಮಿಸುತ್ತದೆ.

ಬದಲಾದ ಸಮಯದಲ್ಲಿ ಬೆಳಗ್ಗೆ 11ಕ್ಕೆ ಆಗಮಿಸಿ 11:05ಕ್ಕೆ ನಿರ್ಗಮಿಸಲಿದೆ. ಇನ್ನು ಮಾರ್ಗ ಮಧ್ಯೆ ಯಶವಂತಪುರಕ್ಕೆ ಬೆಳಿಗ್ಗೆ 5.53ಕ್ಕೆ, ದಾವಣಗೆರೆಗೆ (Davanagere) 9.15ಕ್ಕೆ ತಲುಪಲಿದೆ.

ಸಂಜೆ 7ಕ್ಕೆ ಯಶವಂತಪುರಕ್ಕೆ ((Yashavantapura) ಆಗಮನ ರೈಲು ಸಂಖ್ಯೆ 20662 ಧಾರವಾಡ-ಕೆ.ಎಸ್‌.ಆರ್‌. ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ (Vande Bharath Express)

ಯಶವಂತಪುರ ನಿಲ್ದಾಣಕ್ಕೆ ಸಂಜೆ 07:13/ 07:15 ರ ಬದಲು ಸಂಜೆ 06:58/07:00 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.

ಬೆಳಗಾವಿ (Belgaum)– ಮೈಸೂರು ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿಯನ್ನು ನೈರುತ್ಯ ರೈಲ್ವೆ ಇಲಾಖೆಯು ಪರಿಷ್ಕರಿಸಿದೆ. ದಿನನಿತ್ಯ ಸಂಜೆ 6 ಗಂಟೆಗೆ ಈ ರೈಲು ಬೆಳಗಾವಿಯಿಂದ ಹೊರಟು ಮರುದಿನ

ಬೆಳಗ್ಗೆ 5.55ಕ್ಕೆ ಮೈಸೂರು (Mysore) ತಲುಪಲಿದ್ದು, ಮೈಸೂರಿನಿಂದ ರಾತ್ರಿ 8.30ಕ್ಕೆ ಹೊರಟು ಮರುದಿನ ಬೆಳಗ್ಗೆ 8.45ಕ್ಕೆ ಬೆಳಗಾವಿಗೆ ತಲುಪುವಂತೆ ವೇಳಾಪಟ್ಟಿ ತಯಾರಿಸಲಾಗಿದೆ.

ಇದಕ್ಕಿಂತ ಮೊದಲು ಈ ರೈಲು ಬೆಳಗ್ಗೆ 10.45ಕ್ಕೆ ಬೆಳಗಾವಿ ತಲುಪುತ್ತಿತ್ತು. ಇದು ಪ್ರಯಾಣಿಕರಿಗೆ ಅನಾನುಕೂಲವಾಗಿತ್ತು. ಹಾಗಾಗಿ ರೈಲು ಸಂಚಾರದ ವೇಳಾಪಟ್ಟಿಯನ್ನು ಬದಲಿಸುವಂತೆ

ವಿಧಾನ ಪರಿಷತ್‌ ಸದಸ್ಯ ಹಾಗೂ ರಾಜ್ಯ ಸರ್ಕಾರದ ದಿಲ್ಲಿ ಪ್ರತಿನಿಧಿ ಪ್ರಕಾಶ್‌ ಹುಕ್ಕೇರಿ (Prakash Hukkeri) ಮನವಿ ಮಾಡಿಕೊಂಡಿದ್ದರು.

ಇದನ್ನು ಓದಿ: ಬೆಂಗಳೂರಿನಲ್ಲಿ ಟ್ರಾಫಿಕ್ ಸಿಗ್ನಲ್‌ಗೆ ಜಿಪಿಎಸ್: ಸಂಚಾರ ದಟ್ಟಣೆ ಸಮಸ್ಯೆಗೆ ಸಿಗುತ್ತಾ ಮುಕ್ತಿ

Exit mobile version