ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಇನ್ನಿಲ್ಲ

ಬೆಂಗಳೂರು, ಜು. 26: ಕನ್ನಡಚಿತ್ರ ರಂಗದ ಹಿರಿಯ ನಟಿ,‌ ಅಭಿಯನ ಶಾರದೆ ಜಯಂತಿ ಇನ್ನಿಲ್ಲ.

ಕಳೆದ ಹಲವು ದಿನಗಳಿಂದ ಅನಾರೋಗ್ಯದಿದ ಬಳಲುತ್ತಿದ್ದ ನಟಿ ಜಯಂತಿ(76) ಬೆಂಗಳೂರಿನ‌ ತಮ್ಮ ನಿವಾಸದಲ್ಲಿ ಸೋಮವಾರ ಬೆಳಗ್ಗೆ ವಿಧಿವಶರಾದರು.

1950ರಲ್ಲಿ ಬಳ್ಳಾರಿಯಲ್ಲಿ ಜನಿಸಿದ್ದ ನಟಿ ಜಯಂತಿ, ಮೂಲ ಹೆಸರು ಕಮಲಾ ಕುಮಾರಿ. 1968ರಲ್ಲಿ ತೆರೆಕಂಡ ಜೇನುಗೂಡು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಜಯಂತಿ, ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಮರಾಠಿ ಭಾಷೆಗಳಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ವರನಟ ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ್ದು, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿಯೂ ಕೆಲಸ‌ ಮಾಡಿದ್ದರು. 1965ರಲ್ಲಿ ‘ಮಿಸ್ ಲೀಲಾವತಿ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದ ಅಭಿನಯ ಶಾರದೆ ಜಯಂತಿ ಅವರಿಗೆ ‘ಎರಡು ಮುಖ’, ‘ಧರ್ಮ ದಾರಿ ತಪ್ಪಿತು’, ‘ಮನಸ್ಸಿನಂತೆ ಮಾಂಗಲ್ಯ’, ‘ಮಸಣದ ಹೂವು’ ಹಾಗೂ ‘ಆನಂದ್’ ಚಿತ್ರದ ಅಭಿನಯಕ್ಕೆ ಐದು ಬಾರಿ ರಾಜ್ಯ ಪ್ರಶಸ್ತಿ ಪಡೆದಿದ್ದರು. “ಎಡಕಲ್ಲು ಗುಡ್ಡದ ಮೇಲೆ” ಹಾಗೂ “ನಾಗರಹಾವು” ಚಿತ್ರದಲ್ಲಿನ ಜಯಂತಿ ಅವರ ಓಬವ್ವ ಪಾತ್ರ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿವೆ.

ಅಭಿನಯ ಶಾರದೆ ಜಯಂತಿ ಅವರ ನಿಧನಕ್ಕೆ ಚಿತ್ರರಂಗ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

Exit mobile version