ವಿಜಯಟೈಮ್ಸ್‌ ಬಲೆಗೆ ಬಿದ್ದ ಕೋಳಾಲದ ನಕಲಿ ವೈದ್ಯ: ಸ್ಟಿರಾಯ್ಡ್‌, ನಕಲಿ ಮಾತ್ರೆಗಳೇ ಈತನ ಅಸ್ತ್ರ

Bengaluru: ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ವಿಪರೀತ ಹೆಚ್ಚಿದೆ. ಕರ್ನಾಟಕದಲ್ಲಿ ಸರಿಸುಮಾರು 40000ಕ್ಕೂ ಅಧಿಕ ನಕಲಿ (vijayatimes found fake doctor) ವೈದ್ಯರಿದ್ದಾರೆ ಅನ್ನೋದು ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಸರ್ಕಾರಿ ಆರೋಗ್ಯ ವ್ಯವ್ಯಸ್ಥೆ ಸರಿಯಾಗಿ ಕೆಲಸ ಮಾಡಿದ್ದಿದ್ರೆ ಇಂಥಾ ನಕಲಿ ವೈದ್ಯರ (Fake Doctors)ಹಾವಳಿ ಹೆಚ್ಚುತ್ತಲೇ ಇರಲಿಲ್ಲ. ಆದ್ರೆ ಸರ್ಕಾರಿ ಆಸ್ಪತ್ರೆಗಳಿಗೆ(Government Hospitals) ಸರಿಯಾದ ಸೌಲಭ್ಯ ಕಲ್ಪಿಸದೆ,

ವೈದ್ಯರನ್ನು ನೇಮಕ ಮಾಡದ ಕಾರಣ, ನಕಲಿ ವೈದ್ಯರ ಹಾವಳಿ ವಿಪರೀತ ಹೆಚ್ಚಿದೆ.

ಕಾಟಚಾರಕ್ಕೆ ಬಿಎಎಂಎಸ್‌(BAMS) ಡಿಗ್ರಿ ಪಡೆದುಕೊಂಡು ಬೇಕಾಬಿಟ್ಟಿ ಅಲೋಪತಿ ವೈದ್ಯ ಪದ್ಧತಿ ಅನುಸರಿಸುತ್ತಿರುವ ಈ ನಕಲಿ ವೈದ್ಯರು ಜನರ ಪ್ರಾಣಕ್ಕೆ ಕಂಟಕ ಪ್ರಾಯರಾಗುತ್ತಿದ್ದಾರೆ.

ಇಂಥಾ ಯಮರೂಪಿ ವೈದ್ಯನ ಅಸಲಿ ರೂಪವನ್ನು ವಿಜಯಟೈಮ್ಸ್‌(Vijayatimes) ತಂಡ ಬಟಾ ಬಯಲು ಮಾಡಿದೆ.

ಇದನ್ನೂ ಓದಿ: ಅದಾನಿ ಕಂಪನಿಯಲ್ಲಿರುವ ಎಸ್‌ಬಿಐ, ಎಲ್‌ಐಸಿ ಹೂಡಿಕೆಗಳ ಬಗ್ಗೆ ತನಿಖೆ ಮಾಡುವಂತೆ ಕಾಂಗ್ರೆಸ್ ಆಗ್ರಹ

ತುಮಕೂರು(Tumkur) ಜಿಲ್ಲೆಯ ಕೋಳಾಲ ಗ್ರಾಮದಲ್ಲಿ ಬಸವೇಶ್ವರ ಅನ್ನೋ ಕ್ಲಿನಿಕ್‌(Basaveshwara Clinic) ಇಟ್ಟುಕೊಂಡು ಜನರ ಜೀವದ ಜೊತೆ ನಕಲಿ ಡಾಕ್ಟರ್‌ ಸಂತೋಷ್‌(Dr Santhosh) ಚಲ್ಲಾಟ ಆಡುತ್ತಿದ್ದ.

ಈತ ಮಾತೆತ್ತಿದ್ರೆ ರೋಗಿಗಳಿಗೆ ಸ್ಟಿರಾಯ್ಡ್(Steroid) ಕೊಡ್ತಿದ್ದ. ಜ್ವರಕ್ಕೂ ಇಂಜೆಕ್ಷನ್, ಕಾಮು ನೋವಿಗೂ ಇಂಜೆಕ್ಷನ್.

ಈ ಡಾಕ್ಟರ್ ಬಳಿ ಯಾವ ರೋಗಕ್ಕೆ ಹೋದ್ರೂ ಆತ ಕೊಡೋದು ಸ್ಟಿರಾಯ್ಡ್ ಇಂಜೆಕ್ಷನ್ ಮತ್ತು ನಕಲಿ ಮಾತ್ರೆಗಳು.

ಕೋಳಾಲದ ಬಸವೇಶ್ವರ ಕ್ಲಿನಿಕ್‌ನಲ್ಲಿ ಯಾವಾಗ ನೋಡಿದ್ರೂ ಜನಜಂಗುಳಿ. ಯಾಕಂದ್ರೆ ಈತ ಕೊಡೋ ಮ್ಯಾಜಿಕ್ ಇಂಜೆಕ್ಷನ್‌ನಿಂದ ರೋಗ ಬೇಗ ವಾಸಿಯಾಗುತ್ತೆ ಅನ್ನೋ ನಂಬಿಕೆ ಜನರದ್ದು.

ಆದ್ರೆ ಪಾಪ ಹಳ್ಳಿ ಜನರಿಗೆ ಮಾತ್ರ ಈ ಯಮರೂಪಿ ನಕಲಿ ವೈದ್ಯ ತಮಗೆ ಸ್ಟಿರಾಯ್ಡ್ ಕೊಟ್ಟು ಕೊಲ್ಲುತ್ತಿದ್ದಾನೆ ಅನ್ನೋದೇ ಗೊತ್ತಿಲ್ಲ.

BAMS ಡಿಗ್ರಿ ಮಾಡಿಕೊಂಡು, ಅಲೋಪತಿ ಪ್ರಾಕ್ಟೀಸ್ ಮಾಡುತ್ತಿರುವ ಸಂತೋಷ್ ಜನರ ಜೀವದ ಜೊತೆ ಚಲ್ಲಾಟ ಆಡ್ತಿದ್ದಾನೆ ಅನ್ನೋ ಮಾಹಿತಿ ವಿಜಯ ಟೈಮ್ಸ್ ತಂಡಕ್ಕೆ ಸಿಕ್ತು.

ಈ ಯಮರೂಪಿ ಡಾಕ್ಟರ್ನ ಅಸಲಿ ರೂಪ ಬಯಲಿಗೆಳೆಯಬೇಕು ಅಂತ ರಹಸ್ಯ ಕಾರ್ಯಾಚರಣೆ ಮಾಡಿದ್ವಿ.

ರೋಗಿಗಳಂತೆ ವೇಷ ಧರಿಸಿ ನಾವೂ ಈತನ ಕೈಯಿಂದ ಅನಗತ್ಯವಾಗಿ ಸ್ಟಿರಾಯ್ಡ್ ಹಾಕಿಸಿಕೊಂಡ್ವಿ, ಆ ಮೂಲಕ ಸಾಕ್ಷಿ ಸಂಗ್ರಹಿಸಿದ್ವಿ.

ಇದನ್ನೂ ಓದಿ: ಕಾರ್ಕಳದ ಪರಶುರಾಮನ ಕ್ಷೇತ್ರದಲ್ಲಿ ನಡೆಯುತ್ತಿರುವುದು ಧಾರ್ಮಿಕ ಕಾರ್ಯಕ್ರಮವೇ… ಅಥವಾ ಮೋಜು ಮಸ್ತಿಯೋ : ಕಾರ್ಕಳದ ನಾಗರಿಕರ ಪ್ರಶ್ನೆಗೆ ಉತ್ತರ ಕೊಡಿ ಸಚಿವ ಸುನಿಲ್‌ ಕುಮಾರ್‌ ಅವರೇ

ನಮ್ಮ ರಹಸ್ಯ(vijayatimes found fake doctor) ಕಾರ್ಯಾಚರಣೆ ವೇಳೆ ಈ ನಕಲಿ ವೈದ್ಯನ ಕರಾಳ ರೂಪಗಳು ಬಯಲಾದವು. ನಾವು ರೋಗಿಗಳಂತೆ ಕ್ಲಿನಿಕ್ ಹೋಗಿ ನೋಡಿದಾಗ ನಮಗೇ ಅಚ್ಚರಿ ಕಾದಿತ್ತು.

ಯಾವುದೇ ರೋಗಿ ಇವನ ಬಳಿ ಬಂದ್ರೂ ಆತ ಕೊಡೋದು ಸ್ಟಿರಾಯ್ಡ್ ಇಂಜೆಕ್ಷನ್. ಈ ಇಂಜೆಕ್ಷನ್ ಕೊಟ್ಟಾಗ ಜನರಿಗೆ ಒಮ್ಮೆ ರೋಗ ಗುಣ ಆದ ಅನುಭವ ಆಗುತ್ತೆ.

ಆದ್ರೆ ಅದು ರೋಗಿಯ ದೇಹದ ಮೇಲೆ ಎಂಥಾ ಗಂಭೀರ ದುಷ್ಟರಿಣಾಮ ಬೀರುತ್ತೆ ಅನ್ನೋದು ಜನರಿಗೆ ತಿಳಿದಿಲ್ಲ. ಇನ್ನು ಈತನ ಕ್ಲಿನಿಕ್ನಲ್ಲಿ ನಕಲಿ ಔಷಧಿಗಳ ರಾಶಿಯೇ ಇತ್ತು.

ತಮಾಷೆ ಅಂದ್ರೆ ಆಸ್ಪತ್ರೆ ಪೂರ್ತಿ ಹುಡುಕಿದ್ರೂ ಡಾಕ್ಟರ್ ಸಂತೋಷ್ ರವರ ಮೆಡಿಕಲ್ ಸರ್ಟಿಫಿಕೇಟ್(Medical certificate) ಕಾಣೋದೇ ಇಲ್ಲ. ಅಲ್ಲದೆ ಆಸ್ಪತ್ರೆ ನಡೆಸಲು ಲೈಸೆನ್ಸ್ ಕೂಡ ಇಲ್ಲ.

ಒಬ್ಬ ಆಯುರ್ವೇದಿಕ್ ಡಾಕ್ಟರ್ ಆಯುರ್ವೇದ ಬಿಟ್ಟು ಬೇರೆ ಎಲ್ಲಾ ಔಷಧಿ ಕೊಡ್ತಿದ್ದಾನೆ. ಸರ್ಟಿಫಿಕೇಟ್ ಕೇಳಿದ್ರೆ ಹೇಗೆ ಜಗಳಕ್ಕೆ ಬರ್ತಾನೆ ನೋಡಿ.

ವಿಜಯಟೈಮ್ಸ್ ದಾಳಿಗೆ ಡಾಕ್ಟರ್ ತ್ತತರ:
ಸಂತೋಷ್ ಕೋಳಾಲದ ಜನರ ಆರೋಗ್ಯದ ಜೊತೆ ಆಡುತ್ತಿರುವ ಚೆಲ್ಲಾಟಕ್ಕೆ ಬ್ರೇಕ್ ಹಾಕಲೇ ಬೇಕು ಅಂತ ನಿರ್ಧರಿಸಿ ನಾವು ಡಿಎಚ್ಓ(DHO), ಟಿಎಚ್ಓ(THO) ಅವರನ್ನು ಸಂಪರ್ಕಿಸಿ ಸಹಾಯ ಕೋರಿದೆವು.

ಆದ್ರೆ ಆರಂಭದಲ್ಲಿ ನಮ್ಮ ಮನವಿಗೆ ಅಸಡ್ಡೆಯ ಉತ್ತರ ಕೊಟ್ರು. ಡಿಹೆಚ್‌ಓ ಅಂತು ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸಿದ್ರು.

ಇಂಥಾ ನಾಲಾಯಕ್‌ ಡಿಹೆಚ್‌ಓಗಳು ಇರೋದ್ರಿಂದಲೇ ರಾಜ್ಯದಲ್ಲಿ 40ಸಾವಿರಕ್ಕೂ ಹೆಚ್ಚು ನಕಲಿ ವೈದ್ಯರು ಹುಟ್ಟಿಕೊಂಡಿದ್ದು.

ಅಷ್ಟೇ ಅಲ್ಲ ಈ ಡಿಹೆಚ್‌ಓ ಕತ್ತೆ ಕಾಯುತ್ತಿರುವುದರಿಂದಲೇ ಕೋಳಾಲ ಸರ್ಕಾರಿ ಆಸ್ಪತ್ರೆ ದನದ ಕೊಟ್ಟಿಗೆಯಾಗಿದ್ದು.

ಅಲ್ಲಿ ಕರ್ತವ್ಯ ನಿರ್ವಹಿಸಬೇಕಾದ ವೈದ್ಯರು ಕಾಣೆಯಾಗಿರೋದು. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಇಂಥಾ ಯಮಧೂತ ವೈದ್ಯರು ಹುಟ್ಟಿಕೊಂಡಿದ್ದು.


ವಿಜಯಟೈಮ್ಸ್ ತಂಡದ ಬಹಳ ಒತ್ತಾಯದ ಬಳಿಕ ಟಿ ಎಚ್ ಓ ಕ್ಲಿನಿಕ್ಗೆ ಭೇಟಿ ಕೊಟ್ರು. ಆದ್ರೆ ಅವರು ಕಳ್ಳರಂತೆ ನಕಲಿ ವೈದ್ಯನ ವಿರುದ್ಧ ಕ್ರಮಕೈಗೊಳ್ಳಲು ಹಿಂದೇಟು ಹಾಕಿದ್ದರು.

ಈ ಕ್ಲಿನಿಕ್ ಮೇಲೆ ಮೂರು ಬಾರಿ ಆರೋಗ್ಯ ಅಧಿಕಾರಿಗಳು ದಾಳಿ ಮಾಡಿದರು ಇನ್ನೂ ಸಹ ಈ ಕ್ಲಿನಿಕ್ ಮುಚ್ಚಲು ನಮ್ಮ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ.

ಇದು ಲಂಚದ ಮಾಯೆಯೋ ಅಥವಾ ಭಯವೋ ಗೊತ್ತಾಗುತ್ತಿಲ್ಲ.
ಸಂತೋಷ್ ಅನ್ನೋ ಯಮರೂಪಿ ನಕಲಿ ವೈದ್ಯನ ಅಸಲಿ ರೂಪವನ್ನು ವಿಜಯಟೈಮ್ಸ್ ಬಯಲು ಮಾಡಿದೆ. ಈಗಲಾದ್ರೂ ಜನ ಎಚ್ಚೆತ್ತುಕೊಳ್ಳಿ.

ಇಂಥಾ ನಕಲಿ ವೈದ್ಯರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಇನ್ನಾದರೂ ಆರೋಗ್ಯ ಅಧಿಕಾರಿಗಳು ಎಂಜಲು ಕಾಸಿನ ಆಸೆ ಬಿಟ್ಟು ಜನರ ಆರೋಗ್ಯದ ಕಡೆ ಒಂದಿಷ್ಟು ಗಮನ ಹರಿಸಲಿ, ಈ ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಅನ್ನೋದು ವಿಜಯಟೈಮ್ಸ್ ಆಶಯ.

Exit mobile version