ಪೂಜ್ಯ ಪೇಜಾವರ ಶ್ರೀಗಳ ‘ಹಿಂದೂ ರಾಷ್ಟ್ರದ ಪ್ರತಿಪಾದನೆ’ (Vijayendra Tweet against Siddaramaiah) ಇನ್ನೊಬ್ಬರನ್ನು ಹೊರಗಟ್ಟುವುದಲ್ಲ, ಬಲವಂತ ಮತಾಂತರವಲ್ಲ, ಎಲ್ಲರನ್ನೂ ಒಳಗೊಂಡ
ನೈಜ ಭಾರತೀಯತೆಯನ್ನು ರಕ್ಷಿಸುವುದು ಭಾರತದ ಅಸ್ತಿತ್ವ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯನವರಿಗೆ (CM Siddaramaiah) ತಿರುಗೇಟು ನೀಡಿದ್ದಾರೆ.
ಭಾರತವನ್ನು ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆಗೆ ಟ್ವೀಟ್ (Tweet) ಮೂಲಕ ತಿರುಗೇಟು ನೀಡಿರುವ ವಿಜಯೇಂದ್ರ ಅವರು,
ಮಾನ್ಯ ಸಿದ್ದರಾಮಯ್ಯನವರೇ,“ಹಿಂದೂ ರಾಷ್ಟ್ರ ಕಲ್ಪನೆ ಈ ದೇಶದ ಕೋಟ್ಯಾಂತರ ಜನರ ಸಂಕಲ್ಪ, ಅದಕ್ಕೆ ಅವಕಾಶ ನೀಡದಿರಲು ನೀವು ಮೊಘಲರಲ್ಲ, ಮೊಘಲರೇ ಮತ್ತೆ ಹುಟ್ಟಿ ಬಂದರೂ
ಈಗದು (Vijayendra Tweet against Siddaramaiah) ಸಾಧ್ಯವಿಲ್ಲ”
ಭಾರತವೆಂದರೆ ಹಿಂದುತ್ವ, ಹಿಂದುತ್ವ ಎಂದರೆ ಬಹುತ್ವ, ವಿವಿಧತೆಯನ್ನು ತನ್ನ ಒಡಲಲ್ಲಿರಿಸಿಕೊಂಡು ಏಕತೆಯನ್ನು ಮೆರೆಯುತ್ತಿರುವುದೇ ಭಾರತೀಯತೆ. ಭಾರತೀಯ ಸಂಸ್ಕೃತಿಯನ್ನು ನಾಶಪಡಿಸಲು
ಶತ ಶತಮಾನಗಳಿಂದಲೂ ಹೊರಗಿನವರ ಆಕ್ರಮಣ ನಡೆಯುತ್ತಲೇ ಇದೆ, ಮೊಘಲರ (Mughal) ನಿರಂತರ ದಾಳಿಗೆ ತುತ್ತಾಗಿ ಅಸಂಖ್ಯಾತ ಹಿಂದೂ ದೇವಾಲಯಗಳು ಭಗ್ನಗೊಂಡಿರುವುದಕ್ಕೆ,
ನಾಮಾವಶೇಷಗೊಂಡಿರುವುದಕ್ಕೆ ಇಂದಿಗೂ ಸಾಕ್ಷಿ, ಪುರಾವೆಗಳು ನಮ್ಮ ಕಣ್ಣಿಗೆ ರಾಚುತ್ತಿವೆ ಎಂದಿದ್ದಾರೆ.
ಇನ್ನೊಂದು ಟ್ವೀಟ್ನಲ್ಲಿ, ಎಷ್ಟೇ ದುರಾಕ್ರಮಣಗಳು ನಡೆದರೂ ಬಹುತ್ವ ಸಂಸ್ಕೃತಿಯ ಹಿಂದುತ್ವದ ಭಾರತ ಗಟ್ಟಿಯಾಗಿ ಉಳಿದಿದೆ. ಸ್ವಾತಂತ್ರ್ಯ ನಂತರವೂ ಮತಬ್ಯಾಂಕ್ ರಾಜಕಾರಣಕ್ಕಾಗಿ ಹಿಂದುತ್ವವನ್ನು
ದಮನ ಮಾಡಲು ಕುಮ್ಮಕ್ಕು ನೀಡುತ್ತಿದ್ದ ಕಾಂಗ್ರೆಸ್ ಕುತಂತ್ರವನ್ನು ಬಗ್ಗು ಬಡಿಯಲೆಂದೇ ‘ಭಾರತೀಯ ಜನತಾ ಪಾರ್ಟಿ’ ಜನ್ಮತಾಳಿದ್ದು.
ಕಾಂಗ್ರೆಸ್’ (Congress) ನ ಸ್ವಾರ್ಥ ಹಾಗೂ ನಿರಂಕುಶ ಪ್ರಭುತ್ವದ ಆಡಳಿತವನ್ನು ಮೂಲೆಗಟ್ಟಿ ದೇಶದ ಜನರು ಇಂದು ಬಿಜೆಪಿಯನ್ನು (BJP) ಹೆಮ್ಮರವಾಗಿ ಬೆಳೆಸಿ ಅದರ ನೆರಳಲ್ಲಿ ಅಭಿವೃದ್ಧಿಯ ಭಾರತವನ್ನು
ಕಾಣುತ್ತಿದ್ದಾರೆ. ರಾಜಕೀಯ ಭೂಪಟದಲ್ಲಿ ‘ಅಳಿಸಿ ಹೊಗುತ್ತಿರುವ ಕಾಂಗ್ರೆಸ್ ಅಸ್ತಿತ್ವ ಮೊದಲು ಉಳಿಸಿಕೊಳ್ಳಿ’ ಆ ನಂತರ ರಾಷ್ಟ್ರದ ಕುರಿತು ನೀವು ಮಾತನಾಡುವಿರಂತೆ ಎಂದಿದ್ದಾರೆ.
ಇನ್ನು ಗದಗದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯನವರು ಭಾರತ ಹಿಂದೂರಾಷ್ಟ್ರವಲ್ಲ, ನಮ್ಮ ದೇಶದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಬೌದ್ದ, ಸಿಖ್, ಜೈನ್ (Muslim, Christian, Buddhist, Sikh, Jain)
ಸೇರಿದಂತೆ ಎಲ್ಲ ಧರ್ಮಗಳ ಜನರಿದ್ದಾರೆ. ಹೀಗಾಗಿ ಭಾರತವನ್ನು ಹಿಂದೂ ರಾಷ್ಟ್ರವಾಗಲು ನಾವು ಬಿಡುವುದಿಲ್ಲ ಎಂದು ಹೇಳಿದ್ದರು.
ಇದನ್ನು ಓದಿ: ಭ್ರಷ್ಟಾಚಾರ ಪ್ರಕರಣದಲ್ಲಿ ತಮಿಳುನಾಡು ಸಚಿವ ಕೆ ಪೊನ್ಮುಡಿ ದೋಷಿ : ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು