ಐಪಿಎಲ್​ನಲ್ಲಿನ ವಿರಾಟ್ ಕೊಹ್ಲಿ 6ನೇ ಶತಕ. ಕಿಂಗ್ ಕೊಹ್ಲಿಯ ಸಿಡಿಲಬ್ಬರದ ಸೆಂಚುರಿಗೆ ಹಳೆಯ ದಾಖಲೆಗಳು ಧೂಳೀಪಟ

IPL 2023 : ನಿನ್ನೆ ನಡೆದ ಐಪಿಎಲ್‌ನ 65ನೇ ಪಂದ್ಯದಲ್ಲಿ ಪಂದ್ಯವು ಅತ್ಯಂತ ರೋಚಕವಾಗಿತ್ತು. ವಿರಾಟ್ ಕೊಹ್ಲಿಯ (Virat Kohli records in IPL) ಸೆಂಚುರಿಯ ಸಿಡಿಲಬ್ಬರ ನಿನ್ನೆ ಪ್ರೇಕ್ಷಕರ ಸಂತಸಕ್ಕೆ ಕಾರಣವಾಗಿತ್ತು.

ಪಂದ್ಯವು ಆರ್ ಸಿ ಬಿ (RCB) ಮತ್ತು ಸನ್ ರೈಸೆರ್ಸ್ ಹೈದೆರಾಬಾದ್ (Sun Risers Hyderabad) ನಡುವೆ ನಿನ್ನೆ ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ (Rajiv Gandhi Stadium) ನಡೆದಿತ್ತು.

ಎಸ್ ಆರ್‌ಹೆಚ್ ( ಸನ್ ರೈಸೆರ್ಸ್ ಹೈದೆರಾಬಾದ್ ) ತಂಡವು ಮೊದಲು ಬ್ಯಾಟಿಂಗ್ ಮಾಡಿತ್ತು ನಂತರ ತಂಡವು 186 ರನ್‌ಗಳಿಸಿತ್ತು. ಆದರೆ ಈ ಕಠಿಣ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಜೋಡಿ ಪವರ್‌ಪ್ಲೇನಲ್ಲಿ 64 ರನ್ ಬಾರಿಸಿದರು ಅಲ್ಲದೆ 12ನೇ ಓವರ್ ವೇಳೆಗೆ ತಂಡದ ಮೊತ್ತವನ್ನು ಒಟ್ಟು 100ರ ಗಡಿದಾಟಿಸಿದರು. 35 ಎಸೆತಗಳಲ್ಲಿ ಇಬ್ಬರೂ ಕೂಡ ಅರ್ಧಶತಕ ಪೂರೈಸಿದರು.

ವಿರಾಟ್ ಕೊಹ್ಲಿ ಅರ್ಧಶತಕದ ಬಳಿಕ ಮೈದಾನವಿಡೀ ಸಿಡಿಲಬ್ಬರ ಶುರುವಾಯಿತು. ಎಸ್‌ಆರ್‌ಹೆಚ್ (SRH) ತಂಡದ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿ ಸಿಕ್ಸ್ -ಫೋರ್‌ಗಳನ್ನು ಮೈದಾನದ ಮೂಲೆ ಮೂಲೆಯಲ್ಲೂ ಸಿಡಿಸಿದರು.

ಈ ಬಾರಿಯ ಶತಕದೊಂದಿಗೆ ಕಿಂಗ್ ಕೊಹ್ಲಿ ಐಪಿಎಲ್‌ನಲ್ಲಿ ನಡೆದ ಹಲವು ದಾಖಲೆಯನ್ನು (Virat Kohli records in IPL) ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ : https://vijayatimes.com/delete-gmail-youtube-accounts/


ತಂಡವು ಒಟ್ಟು 94 ರನ್‌ಗಳಿಸಿದ್ದ ಸಮಯದಲ್ಲಿ ಭುವನೇಶ್ವರ್ ಕುಮಾರ್ (Bhuvneshwar Kumar) ಬೌಲಿಂಗ್ ನಲ್ಲಿ ಕಿಂಗ್ ಕೊಹ್ಲಿ ಕೇವಲ 62 ಎಸೆತಗಳಲ್ಲಿ ಸಿಕ್ಸ್ ಸಿಡಿಸುವ ಮೂಲಕ ಶತಕ ಪೂರೈಸಿದರು.

ಐಪಿಎಲ್‌ನ ಇತಿಹಾಸದಲ್ಲಿಯೇ ಇದು ವಿರಾಟ್ ಕೊಹ್ಲಿ 6ನೇ ಶತಕ. ಇಲ್ಲಿಯವರೆಗಿನ ಐಪಿಎಲ್ ಇತಿಹಾಸದಲ್ಲೇ ಕಿಂಗ್ ಕೊಹ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಕ್ರಿಸ್ ಗೇಲ್ (Chris Gayle) ಇಲ್ಲಿಯವರೆಗೆ ಒಟ್ಟು 6 ಶತಕ ಬಾರಿಸಿದ್ದರೂ ಸದ್ಯ ಕಿಂಗ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ಲದೆ ಇಲ್ಲಿಯವರೆಗಿನ ಐಪಿಎಲ್ ಇತಿಹಾಸದಲ್ಲೇ ಕಿಂಗ್ ಕೊಹ್ಲಿ ಅತೀ ಹೆಚ್ಚು ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : https://vijayatimes.com/rajinikanth-retired-from-acting/

ಅಷ್ಟೇ ಅಲ್ಲದೆ 7500 ರನ್ ಪೂರೈಸುವ ಮೂಲಕ ಶತಕವನ್ನು ಕೂಡ ಬಾರಿಸಿದ್ದಾರೆ. 7 ಸಾವಿರದ ಐನೂರು ರನ್ ಐಪಿಎಲ್ ಇತಿಹಾಸದಲ್ಲೇ ಕಲೆಹಾಕಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಜೋಡಿಯು ಒಂದೇ ಸೀಸನ್‌ನಲ್ಲಿ ಆರ್‌ಸಿಬಿ ಪರ ಅರ್ಧಶತಕದ ಜೊತೆಯಾಟವಾಡಿದ ಆರಂಭಿಕ ಜೋಡಿ ಎಂಬ ದಾಖಲೆಯಾಗಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಕಿಂಗ್ ಕೊಹ್ಲಿ ಹಾಗೂ ಡೇಂಜರಸ್ ಡುಪ್ಲೆಸಿಸ್ ಮೊದಲ ವಿಕೆಟ್‌ಗೆ 7 ಬಾರಿ 50+ ರನ್‌ಗಳ ಜೊತೆಯಾಟವಾಡಿದ್ದಾರೆ.

ಅಷ್ಟೇ ಅಲ್ಲದೆ ಈ ಜೋಡಿಯು ಆರ್‌ಸಿಬಿ ಪರ ಅತ್ಯಧಿಕ ಬಾರಿ ಶತಕದ ಜೊತೆಯಾಟವಾಡಿ ತನ್ನದೇ ದಾಖಲೆಯನ್ನು ಸರಿಗಟ್ಟುವ ಮೂಲಕ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ.
Exit mobile version