ವಿಸ್ಟ್ರಾನ್ ದಾಳಿ ಪ್ರಕರಣ; ದಾಳಿಕೋರರ ವಿರುದ್ಧ ಕಠಿಣ ಕ್ರಮ: ಸಿಎಂ

ಕೋಲಾರ, ಡಿ. 18: ಕಳೆದ ಶನಿವಾರ ಕೋಲಾರದ ನರಸಾಪುರ ಕೈಗಾರಿಕ ಪ್ರದೇಶದಲ್ಲಿರುವ ಐಫೋನ್ ತಯಾರಿಕೆಯ ವಿಸ್ಟ್ರಾನ್ ಕಂಪನಿಯಲ್ಲಿ ಸರಿಯಾಗಿ ವೇತನ ನೀಡಿಲ್ಲವೆಂದು ಅಲ್ಲಿನ ಕಾರ್ಮಿಕರು ಪ್ರತಿಭಟಿಸಿ ಹಿಂಸಾಚಾರ ರೂಪಕ್ಕೆ ತೆಗೆದುಕೊಂಡು ಹೋಗಿ ದಾಂಧಲೆ ನಡೆಸಿದ ವಿರುದ್ಧ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅಲ್ಲಿನ ಎಂಪಿ ಮುನಿಸ್ವಾಮಿ ಪ್ರಕರಣದ ತನಿಖೆಯನ್ನು ವಿಚಾರಿಸಿದ್ದಾರೆ.

ಅಲ್ಲದೇ ಈ ವಿಷಯ ಪ್ರಪಂಚದಾದ್ಯಂತ ವ್ಯಾಪಸಿ ಹೂಡಿಕೆದಾರರಿಗೆ ಭಯ ಮೂಡಿಸಿದೆ. ಇದರ ಜೊತೆ ಈ ಘಟನೆಯನ್ನು ಪ್ರಧಾನಿ ಮೋದಿಯವರು ಸಹ ಖಂಡಿಸಿದ್ದಾರೆ. ಈ ವಿಷಯದ ಕುರಿತು ಮಾಧ್ಯಮದವರಿಗೆ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ಈ ದಾಂಧಲೆ ನಡೆಸಿದ್ದಾರೆಯೋ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಹಾಗೂ ವಿಸ್ಟ್ರಾನ್ ಸಂಸ್ಥೆಯ ಆಡಳಿತ ವರ್ಗದವರು 46 ಕೋಟಿ ರೂ. ಗಳಷ್ಟು ನಷ್ಟವಾಗಿದೆ ಎಂದು ಪೊಲೀಸರಿಗೆ ಲಿಖಿತ ರೂಪದಲ್ಲಿ ದೂರು ದಾಖಲಿಸಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ.

Exit mobile version