ನ್ಯೂಯಾರ್ಕ್ ಟೈಮ್ಸ್ ಒಂದು ‘ಸುಪಾರಿ ಮೀಡಿಯಾ’ ಎಂದ ಕೇಂದ್ರ ಸಚಿವ ವಿ.ಕೆ. ಸಿಂಗ್ !

ಕೇಂದ್ರ ಸಚಿವ ವಿಕೆ. ಸಿಂಗ್ ಅವರು ಪ್ರಸ್ತುತ ಸುದ್ದಿಯಲ್ಲಿರುವ ಪ್ರಖ್ಯಾತ ಪತ್ರಿಕೋದ್ಯಮ ನ್ಯೂಯಾರ್ಕ್ ಟೈಮ್ಸ್ ಅನ್ನು ಸುಪಾರಿ ಮೀಡಿಯಾ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿ ಮಾಡಿದ್ದಾರೆ. ಸದ್ಯ ಈ ವಿಚಾರ ಕುರಿತು ಭಾರಿ ವಿವಾದಗಳು ಹುಟ್ಟಿಕೊಂಡಿದ್ದು, ಭಾರತೀಯ ಪತ್ರಕರ್ತರನ್ನು ‘ಪ್ರೆಸ್ಟಿಟ್ಯೂಟ್’ ಎಂದು ಕರೆದು ಭಾರೀ ವಿವಾದ ಸೃಷ್ಟಿಸಿರುವ ಕೇಂದ್ರ ಸಚಿವ ವಿಕೆ ಸಿಂಗ್, ಈ ಹಿಂದೆ ಪೆಗಾಸಿಸ್ ಕುರಿತು ವರದಿ ಮಾಡಿದ್ದ ನ್ಯೂಯಾರ್ಕ್ ಟೈಮ್ಸ್ ಅನ್ನು ನೇರ ಹೊಣೆ ಮಾಡುವ ಮುಖೇನ ‘ಸುಪಾರಿ ಮೀಡಿಯಾ’ ಎಂದಿದ್ದಾರೆ.

ಈ ಹಿಂದೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ 2017 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ ಭೇಟಿ ನೀಡಿ ಪೆಗಾಸಿಸ್ ಸ್ಕೈವರ್ ಖರೀದಿಯನ್ನು ಒಳಗೊಂಡ ರಕ್ಷಣಾ ಒಪ್ಪಂದಕ್ಕೆ ಯಾವ ಕ್ರಮೇಣದಲ್ಲಿ ಸಹಿ ಹಾಕಿದರು, ಹೇಗೆಲ್ಲ ನಡೀತು ಎಂಬುದನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಈ ಸುದ್ದಿ ಬಹಿರಂಗವಾದ ಬೆನ್ನಲ್ಲೇ ಕೇಂದ್ರ ಸಚಿವರು ಈ ಹೇಳಿಕೆ ನೀಡಿದ್ದಾರೆ. ವಿಕೆ ಸಿಂಗ್ ಅವರು ಟ್ವಿಟ್ಟರ್ ನಲ್ಲಿ ಪೆಗಾಸಿಸ್ ಕುರಿತಾದ ಸುದ್ದಿ ಕಂಡ ಕೂಡಲೇ ಪ್ರತಿಕ್ರಿಯೆ ನೀಡಿದ್ದು, ನಿಮ್ಮನ್ನು NYT ಎಂದು ನಾವು ನಂಬಬಹುದಾ? ಇವರನ್ನು ಸುಪಾರಿ ಮೀಡಿಯಾ ಎಂದು ಕರೆಯಬಹುದು ಎಂದು ಟ್ವೀಟ್ ಮಾಡುವ ಮೂಲಕ ಕಿಡಿ ಹಚ್ಚಿದ್ದಾರೆ.

ಈ ಹಿಂದೆ 2017 ರಲ್ಲಿ ಪೆಗಾಸಿಸ್ ಸಾಫ್ಟ್ವೇರ್ ಸಬ್ ಸ್ಕ್ರಿಪ್ಷನ್ ಮಾಡಿಕೊಂಡಿತ್ತು ಎಂಬ ಸುದ್ದಿ ವರದಿ ಮಾಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರದ ಮೂಲಗಳು ಸುಪ್ರಿಂ ಕೋರ್ಟ್ ತನಿಖಾ ಸಮಿತಿಯು ಪೆಗಸಸ್ ಕುರಿತು ಸುಧೀರ್ಘವಾಗಿ ಗಮನಹರಿಸಿದೆ. ಸರ್ಕಾರ ಹೇಳಿರುವ ಪ್ರಕಾರ ಸಮಿತಿಯ ವರದಿಗೆ ಕಾಯುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

Exit mobile version