ರಾಜ್ಯದಲ್ಲಿ ಶೇ.69.23 ಮತದಾನ: ಯಾವ ಕ್ಷೇತ್ರದಲ್ಲಿ ಎಷ್ಟು ವೋಟಿಂಗ್? ಇಲ್ಲಿದೆ ಡಿಟೇಲ್ಸ್.

Bengaluru: ಲೋಕಸಭಾ ಚುನಾವಣೆಯ (Loksabha Election) 2ನೇ ಹಂತದ ಹಾಗೂ ರಾಜ್ಯದ (Voting Details of Karnataka) 14 ಕ್ಷೇತ್ರಗಳಿಗೆ ಶುಕ್ರವಾರ ಮೊದಲ ಹಂತದ ಮತದಾನ

ನಡೆದಿದೆ. ರಾಜ್ಯದಲ್ಲಿ ಒಟ್ಟು ಶೇ.69.23ರಷ್ಟು ಮತದಾನ ನಡೆದಿದೆ ಎಂದು ರಾಜ್ಯ ಚುನಾವಣಾ ಆಯೋಗ (Election Commission) ಮಾಹಿತಿ ನೀಡಿದೆ.

ರಾಜ್ಯ ಚುನಾವಣಾ ಆಯೋಗ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ ನಡೆದಿದೆ. ಆದರೆ ಬೆಂಗಳೂರು (Bengaluru) ಮಹಾನಗರ

ವ್ಯಾಪ್ತಿಯ ಬೆಂಗಳೂರು ದಕ್ಷಿಣ (Bengaluru South), ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ಈ ಹಿಂದಿನಂತೆ ಕಡಿಮೆ ಮತದಾನ ದಾಖಲಾಗಿದೆ. ಬೆಂಗಳೂರು

ವಾಸಿಗಳು ಮತದಾನಕ್ಕೆ (Voting Details of Karnataka) ಹೆಚ್ಚಿನ ಆಸಕ್ತಿ ತೋರಿಲ್ಲ.

ಯಾವ ಲೋಕಸಭಾ ಕ್ಷೇತ್ರದಲ್ಲಿ ಎಷ್ಟು ಮತದಾನ ನಡೆದಿದೆ..?

  1. ಉಡುಪಿ-ಚಿಕ್ಕಮಗಳೂರು 76.06%
  2. ಹಾಸನ 77.51%
  3. ದಕ್ಷಿಣ ಕನ್ನಡ 77.43%
  4. ಚಿತ್ರದುರ್ಗ 73.11%
  5. ತುಮಕೂರು 77.70%
  6. ಮಂಡ್ಯ 81.48%
  7. ಮೈಸೂರು 70.45%
  8. ಚಾಮರಾಜನಗರ 76.59%
  9. ಬೆಂಗಳೂರು ಗ್ರಾಮಾಂತರ 67.29%
  10. ಬೆಂಗಳೂರು ಉತ್ತರ 54.42%
  11. ಬೆಂಗಳೂರು ಕೇಂದ್ರ 52.81%
  12. ಬೆಂಗಳೂರು ದಕ್ಷಿಣ 53.15%
  13. ಚಿಕ್ಕಬಳ್ಳಾಪುರ 76.82%
  14. ಕೋಲಾರ 78.07%

ಇದನ್ನು ಓದಿ: ಭಾರತ ಸೂಪರ್ ಪವರ್ ಆಗುವ ಕನಸು ಕಾಣುತ್ತಿದೆ, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕ್ ಅಸೆಂಬ್ಲಿಯಲ್ಲಿ ಭಾರೀ ಚರ್ಚ

Exit mobile version