ಈ ದೇಶದಲ್ಲಿ ಮತದಾನ ಕಡ್ಡಾಯ, ತಪ್ಪಿದ್ರೆ ದಂಡ ಹಾಗೂ ಜೈಲುವಾಸ ಖಚಿತ!

Egypt : ಪ್ರಜಾಪ್ರಭುತ್ವ(Democracy) ಎಂದರೆ ಜನರಿಂದ, ಜನರಿಗೋಸ್ಕರ, ಜನರೇ ನಡೆಸುವ ಒಂದು ಅದ್ಭುತವಾದ ವ್ಯವಸ್ಥೆ. ಆದರೆ ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖವಾದ ಅಂಗವಾಗಿರುವ ಚುನಾವಣೆಯಲ್ಲಿ ಮತದಾನ(Voting Is Compulsory) ಮಾಡಲು ಜನರೇ ನಿರಾಸಕ್ತಿ ತೋರಿದರೆ ಅದನ್ನು ಏನೆಂದು ಅರ್ಥೈಸಿಕೊಳ್ಳಬೇಕೋ ತಿಳಿಯುವುದಿಲ್ಲ.

ಜನರು ತಮ್ಮ ಬದುಕಿನಲ್ಲಿ ಬೇಕಾದ ದೈನಂದಿನ ವಸ್ತುಗಳನ್ನು ಆರಿಸಿಕೊಳ್ಳುವಲ್ಲಿ ಸಹಜವಾಗಿ ಆಸಕ್ತಿ ತೋರುವಂತೆ, ಬೇಕಾದ ಸರ್ಕಾರವನ್ನು ಆರಿಸಿಕೊಳ್ಳಲು ಆಸಕ್ತಿ ತೋರುವುದಿಲ್ಲ.

ಪ್ರಜೆಗಳೇ ಪ್ರಭುವಾಗಿರುವ ಪ್ರಜಾಪ್ರಭುತ್ವದಲ್ಲಿ (Voting Is Compulsory)ಆಸಕ್ತಿ ತೋರಿಸಿ, ಮತದಾನ ಮಾಡಿ ಎಂದು ಜನರನ್ನು ಒತ್ತಾಯಿಸಬೇಕೇ ಬೇಡವೇ ಎನ್ನುವುದು ಕೂಡ ಜಗತ್ತಿನ ಪ್ರಜಾಸತ್ತಾತ್ಮಕ ರಾಜಕಾರಣದ ಒಂದು ಜ್ವಲಂತ ಚರ್ಚೆಯಾಗಿಯೇ ಉಳಿದಿದೆ.


ಆಸ್ಟ್ರೇಲಿಯ, ಬೆಲ್ಜಿಯಂ, ಬೊಲಿವಿಯ, ಇಟಲಿ, ಸಿಂಗಾಪುರ ಮುಂತಾದ ಅನೇಕ ದೇಶಗಳಲ್ಲಿ ಅರ್ಹ ಪ್ರಜೆಗಳು ಮತದಾನ ಮಾಡುವುದನ್ನು ಕಡ್ಡಾಯ ಕಾನೂನನ್ನಾಗಿಸಲಾಗಿದೆ.

ಇನ್ನು ಕೆಲವು ದೇಶಗಳಲ್ಲಿ ಅದನ್ನು ಹೋಲುವ ಬೇರೆ ಕ್ರಮಗಳು ಜಾರಿಯಲ್ಲಿವೆ. ಮತದಾನ ಮಾಡುವುದು ನಮ್ಮ ಹಕ್ಕೂ ಹೌದು, ಕರ್ತವ್ಯವೂ ಹೌದು ಎನ್ನುವುದು ಆ ದೇಶಗಳ ವಾದ.

ಇದನ್ನೂ ಓದಿ : https://vijayatimes.com/ayurvedic-tips-for-skin/

ಮತ ಹಾಕದ ಜನರಿಗೆ ಕೆಲವು ದೇಶಗಳಲ್ಲಿ ಸಣ್ಣಪುಟ್ಟ ದಂಡ ಅಥವಾ ಶಿಕ್ಷೆಯೂ ಇದೆ. ಆಸ್ಟ್ರೇಲಿಯದಲ್ಲಿ ಮತದಾನ ಕಡ್ಡಾಯಕ್ಕೆ ಮೊದಲು, ಮತದಾನದ ಪ್ರಮಾಣ ಕೇವಲ 28% ಅಷ್ಟೇ ಇತ್ತು ಎನ್ನುವುದು ಆಶ್ಚರ್ಯ ಮೂಡಿಸುತ್ತದೆ.

ಇನ್ನು, ಮತದಾನ ಕಡ್ಡಾಯ ಕ್ರಮಕ್ಕೆ ಆ ದೇಶಗಳಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ಸಮರ್ಥನೆಗಳುಂಟು.

ಅವುಗಳ ಪೈಕಿ, ಪ್ರಜಾಪ್ರಭುತ್ವದಲ್ಲಿ ನೈಜ ಪ್ರಾತಿನಿಧ್ಯ ಮತ್ತು ನೈಜ ಜನಾದೇಶ ಇರಬೇಕು, ಇರದಿದ್ದರೆ ಕಾನೂನಿನ ಮುಖಾಂತರವಾದರೂ ಅದನ್ನು ತರಬೇಕು ಎನ್ನುವ ಸಮರ್ಥನೆಯೇ ಬಹಳ ಮುಖ್ಯವಾಗಿದೆ.

ಎಷ್ಟೇ ಹೇಳಿದರೂ, ಮತದಾನಕ್ಕೆ ಜನರ ನಿರಾಸಕ್ತಿ ಒಂದು ಜಾಗತಿಕ ಲಕ್ಷಣವಾಗಿಯೇ ಪರಿಣಮಿಸಿರುವುದು ವಿಪರ್ಯಾಸ.

ರಾಜಕೀಯ ಪಕ್ಷಗಳ ಭ್ರಷ್ಟಾಚಾರದ(Corruption) ಹಗರಣಗಳು, ಭಾರೀ ಉದ್ಯಮಗಳ ಓಲೈಕೆ ಮತ್ತು ಮುಂದಿನ ಚುನಾವಣೆಗೆ ಹಣ ಸಂಗ್ರಹ,

ಈ ಮೂರು ಕಾರಣಗಳು ನಮ್ಮನ್ನು ಮತಗಟ್ಟೆಯಿಂದ ಮಾರು ದೂರ ನಿಲ್ಲಿಸುತ್ತವೆ ಎಂಬ ಅಭಿಪ್ರಾಯ ಕೆಲವು ನಾಗರೀಕರದ್ದು.


ಆದರೆ ಮತದಾನದ ವಿಷಯದಲ್ಲಿ ಈಜಿಪ್ಟ್(Egypt) ಒಂದು ಹೆಜ್ಜೆ ಮುಂದೆ ಹೋಗಿ, ಕಡ್ಡಾಯ ಕಾನೂನನ್ನು ಈಗಾಗಲೇ ಜಾರಿಗೆ ತಂದಿದೆ.

ವಯಸ್ಕರು ಕಡ್ಡಾಯವಾಗಿ ವೋಟ್ ಮಾಡಲೇಬೇಕು, ತಪ್ಪಿದರೆ ಅವರಿಗೆ ದಂಡ ವಿಧಿಸಲಾಗುತ್ತದೆ ಹಾಗೂ ಜೈಲಿಗೆ ಸಹ ಹಾಕಲಾಗುತ್ತದೆ.

https://vijayatimes.com/siddaramaiah-slams-bc-nagesh/

ಆದರೆ ಇಲ್ಲಿ ಮೂಡುವ ಪ್ರಶ್ನೆ ಎಂದರೆ, ಮತದಾನ ಕಡ್ಡಾಯ ಮಾಡಿ ತಪ್ಪಿದವರಿಗೆ ಶಿಕ್ಷೆ ವಿಧಿಸಿದರೆ ಕೋಟ್ಯಂತರ ಜನ ಹಿಡಿಸುವ ಸೆರೆಮನೆಗಳೆಲ್ಲಿವೆ ಎಂಬ ಕೆಲವರ ಆತಂಕಕ್ಕೆ ಆಧಾರವಿಲ್ಲ.

ಒಂದೊಮ್ಮೆ ಮತದಾನ ಕಡ್ಡಾಯ ಕರ್ತವ್ಯ ಎಂದಾಗಿ, ಮತದಾರ ಮತಗಟ್ಟೆಗೆ ಬಂದೇ ಬರಬೇಕಾದರೂ ಯಾರಿಗೂ ಮತ ಹಾಕದಿರುವ ಹಕ್ಕು ಕೂಡ ಮತಯಂತ್ರದಲ್ಲಿದೆ ಎನ್ನುವುದು ಗಮನಾರ್ಹ.

Exit mobile version