ಕೀಬೋರ್ಡ್ ನಲ್ಲಿ ಅಕ್ಷರಗಳು ಯಾಕೆ ಕ್ರಮಬದ್ಧವಾಗಿರುವುದಿಲ್ಲ? ; ಇಲ್ಲಿದೆ ಓದಿ ಅಚ್ಚರಿಯ ಸಂಗತಿ

Qwerty

ನಾವೀಗ ಇರುವುದು ಕಂಪ್ಯೂಟರ್(Computer) ಯುಗದಲ್ಲಿ. ಈಗಂತೂ ಪ್ರತಿಯೊಬ್ಬರ ಬಳಿಯೂ ಇರುವ ಕಂಪ್ಯೂಟರ್, ಹಲವಾರು ವಿನ್ಯಾಸಗಳಲ್ಲಿ ಲಭ್ಯವಿದೆ.

ಇಂಟರ್ನೆಟ್ ಇದ್ದರೆ ಸಾಕು ಜಗತ್ತಿನ ಎಲ್ಲ ಮಾಹಿತಿ ನಮ್ಮ ಬೆರಳ ತುದಿಯಲ್ಲಿರುತ್ತದೆ. ಯಾವುದೇ ಮಾಹಿತಿ ಇರಲಿ ಅದನ್ನು ತಕ್ಷಣದಲ್ಲಿ ಒದಗಿಸುತ್ತದೆ ಕಂಪ್ಯೂಟರ್.

ಆದರೆ ಕಂಪ್ಯೂಟರ್ ಕೆಲಸ ಮಾಡಲು ದತ್ತಾಂಶಗಳು ಬೇಕಾಗುತ್ತದೆ, ಈ ದತ್ತಾಂಶದ (QWERTY format in keyboard) ಆಧಾರದ ಮೇಲೆ ಗಣಿತದ ಕೆಲಸಗಳನ್ನು ತಾನೇ ತಾನಾಗಿ ನಿರ್ವಹಿಸುತ್ತದೆ ಕಂಪ್ಯೂಟರ್.

ದತ್ತಾಂಶಗಳನ್ನು ಕೀಬೋರ್ಡ್(QWERTY format in keyboard) ಸಹಾಯದಿಂದ ಕಂಪ್ಯೂಟರ್ ಗೆ ನೀಡಲಾಗುತ್ತದೆ, ಹಾಗಾಗಿ ಕಂಪ್ಯೂಟರ್ ಆಪರೇಟ್ ಮಾಡುವಲ್ಲಿ ಕೀಬೋರ್ಡ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ನಮಗೆ ಬೇಕಾದ ಮಾಹಿತಿಯನ್ನು ಬರೆಯಲು ಸಹಾಯ ಮಾಡುವುದೇ ಕೀಲಿಮಣೆ ಅಥವಾ ಕೀಬೋರ್ಡ್. 
https://vijayatimes.com/chethan-tweets-over-cm-bommai/

ಈ ಕೀಬೋರ್ಡ್ ವಿನ್ಯಾಸವೇನೋ ಸರಿ, ಆದರೆ ಅದರಲ್ಲಿ ಅಕ್ಷರಗಳು ಹಾಗೂ ನಂಬರ್ ಗಳು ಕ್ರಮಬದ್ಧವಾಗಿ ಜೋಡಣೆಯಾಗಿರುವುದಿಲ್ಲ. ಚಿಹ್ನೆಗಳು ಅಷ್ಟೇ. ಇದರಿಂದಾಗಿ ಮೊದ ಮೊದಲು ಕಂಪ್ಯೂಟರ್ ಆಪರೇಟ್ ಮಾಡುವಾಗ ಎಲ್ಲರಿಗೂ ಟೈಪಿಂಗ್ ಸಮಸ್ಯೆ ಎದುರಾಗುತ್ತದೆ. ಕೀಲಿಮಣೆಯಲ್ಲಿ ಅಕ್ಷರಗಳನ್ನು ಹುಡುಕುತ್ತ ಕೂರಬೇಕಾಗುತ್ತದೆ.

ಒಂದೊಂದು ಪದ ಟೈಪ್ ಮಾಡಲು ಅಕ್ಷರ ಹುಡುಕಿ ಹುಡುಕಿ ಸಾಕಾಗಿ, ಕೀಬೋರ್ಡ್ ಮೇಕರ್ ನನ್ನು ಬೈದುಕೊಂಡಿರಬಹುದು. ಆದರೆ ಎಲ್ಲಾ ಅಕ್ಷರಗಳನ್ನು ಕ್ರಮಬದ್ಧವಾಗಿ ಯಾಕೆ ಜೋಡಿಸಿಲ್ಲ ಎಂದು ಯೋಚಿಸಿದ್ದೀರಾ? ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಕೀಬೋರ್ಡ್ ಇತಿಹಾಸವು ಟೈಪ್ ರೈಟರ್ ಗೆ ಸಂಬಂಧಿಸಿದೆ. ಎಂದರೆ, ಕಂಪ್ಯೂಟರ್ ಅಥವಾ ಕೀಬೋರ್ಡ್ ಬರುವ ಮೊದಲೇ QWERTY ಫಾರ್ಮ್ಯಾಟ್ ಚಾಲನೆಯಲ್ಲಿತ್ತು. 1868 ರಲ್ಲಿ, ಟೈಪ್ ರೈಟರ್ ಅನ್ನು ಕಂಡುಹಿಡಿದ ಕ್ರಿಸ್ಟೋಫರ್ ಲ್ಯಾಥಮ್ ಶೋಲ್ಸ್ ಅವರು ಮೊದಲು ಎಬಿಸಿಡಿಇ ಫಾರ್ಮ್ಯಾಟ್ ನಲ್ಲಿಯೇ ಕೀಬೋರ್ಡ್ ಅನ್ನು ತಯಾರಿಸಿದ್ದರು.

ಆದರೆ ಅವರು ನಿರೀಕ್ಷಿಸಿದ ವೇಗ ಮತ್ತು ಅನುಕೂಲಕರವಾಗಿ ಟೈಪಿಂಗ್ ನಡೆಯುತ್ತಿಲ್ಲ ಎಂಬುದು ಸ್ವಲ್ಪ ಸಮಯದಲ್ಲೇ ಅವರಿಗೆ ಅರಿವಾಗಿತ್ತು. ಎಬಿಸಿಡಿ ಫಾರ್ಮ್ಯಾಟ್ ನಲ್ಲಿರುವ ಕೀಬೋರ್ಡ್‌ನಿಂದಾಗಿ ಬರೆಯಲು ಕಷ್ಟವಾಗುತ್ತಿತ್ತು , ಇದಕ್ಕೆ ಮುಖ್ಯ ಕಾರಣವೆಂದರೆ ಅದರ ಗುಂಡಿಗಳು ಒಂದಕ್ಕೊಂದು ಹತ್ತಿರದಲ್ಲಿರುವುದು. ಜೊತೆಗೆ ಕೀಬೋರ್ಡ್ ಕೀಗಳ ಬಗ್ಗೆ ಇನ್ನೂ ಅನೇಕ ಸಮಸ್ಯೆಗಳು ಎದುರಾಗುತ್ತಿದ್ದವು. ನಂತರ ಈ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಸ್ವರೂಪದ ಕೀಬೋರ್ಡ್ ಸಿದ್ಧಪಡಿಸಲಾಯಿತು.


ಇದರ ಜೊತೆಗೆ, ಇಂಗ್ಲಿಷ್‌ನಲ್ಲಿ ಕೆಲವು ಅಕ್ಷರಗಳು ಹೆಚ್ಚು ಬಳಸಲ್ಪಡುತ್ತವೆ ಉದಾಹರಣೆಗೆ A,E, I, S, M,T ಮತ್ತು ಕೆಲವು ಪದಗಳು ವಿರಳವಾಗಿ ಬಳಸಲ್ಪಡುತ್ತವೆ. ಉದಾಹರಣೆಗೆ Z, X, ಇತ್ಯಾದಿ. ಹೆಚ್ಚಾಗಿ ಬಳಸುವ ಅಕ್ಷರಗಳಿಗೆ, ಬೆರಳುಗಳನ್ನು ಕೀಬೋರ್ಡ್‌ನಾದ್ಯಂತ ಚಲಿಸಬೇಕಾಗಿತ್ತು ಮತ್ತು ಇದರಿಂದ ಟೈಪಿಂಗ್ ನಿಧಾನವಾಯಿತು. ಆದ್ದರಿಂದ ಅನೇಕ ವಿಫಲ ಪ್ರಯೋಗಗಳ ನಂತರ 1870ರ ದಶಕದಲ್ಲಿ QWERTY ಸ್ವರೂಪದ ಕೀಬೋರ್ಡ್ ಚಾಲನೆಗೆ ಬಂದಿತು.

ಈ ಪ್ರಯೋಗಗಳ ನಡುವೆ ಮತ್ತೊಂದು ಕೀ ಬೋರ್ಡ್ ಸ್ವರೂಪವಾದ ಡ್ವೊರಾಕ್ ಮಾದರಿ ಬಂದಿತ್ತು. ಆದರೆ ಹಲವಾರು ಕಾರಣಗಳಿಂದ ಅದು ವಿಫಲವಾಯಿತು. ಜನರು QWERTY ಕೀಬೋರ್ಡ್ ಮಾದರಿಯನ್ನು ಹೆಚ್ಚು ಬಳಸಲಾರಂಬಿಸಿದರು, ಆದ್ದರಿಂದ ಕೀಬೋರ್ಡ್ QWERTY ಮಾದರಿ ಬಳಕೆ ಜನಪ್ರಿಯವಾಯಿತು.
Exit mobile version