Tech News: ಎಲ್ಲಾ ಸಂವಹನಗಳಿಗೆ ವಾಟ್ಸಪ್ (WhatsApp new feature update) ಒಂದು ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಬಳಕೆದಾರರಿಗೆ ಅನೇಕ ಅಪ್ಡೇಟ್ಗಳ
(Update) ಜತೆಗೆ, ಹೊಸ ಹೊಸ ಫೀಚರ್ಗಳನ್ನು(Features) ಸಹ ಪರಿಚಯಿಸುತ್ತಿದೆ. ಈ ವಾಟ್ಸಪ್ ಮೆಸೇಜ್, ವೀಡಿಯೊ, ಫೋಟೋ ಎಲ್ಲವನ್ನು ಕಳುಹಿಸಲು ಉತ್ತಮ ವೇದಿಕೆಯಾಗಿದೆ ಅಷ್ಟೇ ಅಲ್ಲದೆ ವಾಟ್ಸಪ್
ದಿನಕ್ಕೊಂದು ಬದಲಾವಣೆಗಳನ್ನು ಮಾಡುತ್ತಿದೆ. ಇದೀಗ ವಾಟ್ಸಾಪ್ನಲ್ಲಿ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಂಡಾಗ ಅದರ ಡೇಟಾ ಕಂಪ್ರೆಷನ್ನಿಂದಾಗಿ ಅವುಗಳ ಗುಣಮಟ್ಟ
ಕಡಿಮೆಯಾಗುತ್ತದೆ ಎಂದು ಅನೇಕ ಬಳಕೆದಾರರ ದೂರಿನ ಹಿನ್ನೆಲೆ ಈಗ ಹೊಸ (WhatsApp new feature update) ಅಪ್ಡೇಟ್ ಬಂದಿದೆ.

WhatsApp ಇದೀಗ ತನ್ನ ಬಳಕೆದಾರರಿಗೆ ಅಪ್ಲಿಕೇಶನ್ನಲ್ಲಿ ಹೊಸ ವೈಶಿಷ್ಟ್ಯ ಪರಿಚಯಿಸುತ್ತಿದೆ. ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಕಳುಹಿಸುವ ಸಾಮರ್ಥ್ಯವನ್ನು ಸಹ ನೀಡುತ್ತಿದೆ
ಎಂದು WABetaInfo ವರದಿ ಮಾಡಿದೆ. ವಾಟ್ಸಪ್ಪ್ ಅವುಗಳ ಮೂಲ ಆಯಾಮಗಳನ್ನು ಕಳೆದುಕೊಳ್ಳದೆ ಹೆಚ್ಚಿನ ರೆಸಲ್ಯೂಶನ್ ಫೋಟೋಗಳನ್ನು (Resolution Photo) ಮತ್ತು ಉತ್ತಮ
ಗುಣಮಟ್ಟದಲ್ಲಿ ಕಳುಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
WhatsAppನಲ್ಲಿ ಉತ್ತಮ ಗುಣಮಟ್ಟದ ವೀಡಿಯೊಗಳು ಹೇಗೆ ಕೆಲಸ ಮಾಡುತ್ತದೆ?
ಹೊಸ ಕ್ಲಿಕ್ ಬಟನ್ WhatsApp ಡ್ರಾಯಿಂಗ್ ಎಡಿಟರ್ಗೆ(Drawing Editor) ಪರಿಚಯಿಸಿದ್ದು, ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಅದೇ ರೆಸಲ್ಯೂಶನ್ನಲ್ಲಿ ಈ ಮೂಲಕ ಬಳಕೆದಾರರು ಕಳುಹಿಸಬಹುದು.
ಇದನ್ನು ಓದಿ: ಫ್ರಾನ್ಸ್ ಹಿಂಸಾಚಾರ : ಸಂಘರ್ಷಕ್ಕೆ ಕಾರಣವಾಯ್ತಾ ಮೃತನ ಧರ್ಮ..?!
ಆದರೆ ವಾಟ್ಸಪ್ ಕೆಲವು ಬದಲಾವಣೆಗಳನ್ನು ಮಾಡಿದೆ. ಇದಕ್ಕೆ ಬೇರೆ ಬೇರೆ ಎಡಿಟ್ ಆಪ್ಷನ್ ಸಹ ನೀಡಿದೆ. ಈಗಾಗಲೇ ನೀವು ಬೇರೆ ಬೇರೆ ಪ್ಲಾಟ್ಫಾರ್ಮ್ನಲ್ಲಿ ಹಂಚಿಕೊಂಡ ವೀಡಿಯೊಗಳನ್ನು ಸಹ ಅದಕ್ಕಿಂತ ಉತ್ತಮ
ಕ್ವಾಲಿಟಿಯಲ್ಲಿ ವೀಡಿಯೊವನ್ನುಕಳುಹಿಸುವಂತೆ ವಾಟ್ಸಪ್ ಈ ಹೊಸ ಫೀಚರ್ ನೀಡುತ್ತದೆ. ವಾಟ್ಸಪ್ಪ್ ನಲ್ಲಿರುವ “ಸ್ಟ್ಯಾಂಡರ್ಡ್ ಕ್ವಾಲಿಟಿ”(Standard Quality) ಸೆಟ್ಟಿಂಗ್ನ್ನು ಬಳಸಲು ಡೀಫಾಲ್ಟ್ ಆಗಿರುತ್ತದೆ
ಮತ್ತು ಪ್ರತಿ ಬಾರಿ ವೀಡಿಯೊವನ್ನು ಹಂಚಿಕೊಳ್ಳುವಾಗ ಬಳಕೆದಾರರು ಉತ್ತಮ ಗುಣಮಟ್ಟದ ಆಪ್ಷನ್ ಗಳನ್ನು ಬಳಸಿಕೊಳ್ಳಬಹುದು.

ಇದು ಈಗಾಗಲೇ ಈ ಸೆಟ್ಟಿಂಗ್ಸ್ ನಿಮ್ಮ ಮೊಬೈಲ್ ನಲ್ಲಿ ಕೂಡ ಬಂದಿದೆ ಎಂದು ತಿಳಿದುಕೊಳ್ಳಲು ಒಮ್ಮೆ ಯಾರಿಗಾದರೂ ದೊಡ್ಡದಾದ, ಉತ್ತಮ ಗುಣಮಟ್ಟದ ವೀಡಿಯೊ ಫೈಲ್ ಅನ್ನು ಕಳುಹಿಸಿ ನೋಡಿ.
ಒಂದು ವೇಳೆ ಇದು ಉತ್ತಮ ಕ್ವಾಲಿಟಿ ಯಲ್ಲಿ ಆಗಿದೆ ಎಂದರೆ ಈ ವೈಶಿಷ್ಟ್ಯ ಸಕ್ರಿಯಗೊಳಿಸಲಾಗಿದೆ ಎಂದು . ಉತ್ತಮ ಗುಣಮಟ್ಟದ ಆಯ್ಕೆಯನ್ನು ಬಳಕೆದಾರರು ಬಳಸಿಕೊಂಡು ವೀಡಿಯೊವನ್ನು
ಹಂಚಿಕೊಂಡಾಗ, ಅದನ್ನು ಉತ್ತಮ ಗುಣಮಟ್ಟದ ವೀಡಿಯೊ ಎಂದು ಗುರುತಿಸಲಾಗುತ್ತದೆ ಎಂದು WABetaInfo ಹೇಳಿದೆ.
ಇದು ಯಾವಾಗ ಹೊರಬರುತ್ತಿದೆ
ಸದ್ಯಕ್ಕೆಉತ್ತಮ ಗುಣಮಟ್ಟದ ವೀಡಿಯೊಗಳನ್ನು ಕಳುಹಿಸುವ ಸಾಮರ್ಥ್ಯವನ್ನು Google Play Store ನಿಂದ WhatsApp ಬೀಟಾದ Android ಆವೃತ್ತಿ 2.23.14.10 ಅನ್ನು ನವೀಕರಿಸಿದ ಕೆಲವು ಬೀಟಾ
ಪರೀಕ್ಷಕರಿಗೆ ಈಗ WhatsApp ಪ್ರಸ್ತುತಪಡಿಸುತ್ತಿದೆ. ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಈ ವೈಶಿಷ್ಟ್ಯವು ಲಭ್ಯವಾಗುತ್ತದೆ ಎಂದು ಹೇಳಿದೆ.
ರಶ್ಮಿತಾ ಅನೀಶ್