Whats app new Update : ಸೇವ್ ಮಾಡದೇನೆ ಅಪರಿಚಿತರ ನಂಬರ್​ಗೆ ಮೆಸೇಜ್ ಮಾಡಬಹುದು, ಹೇಗೆ ಗೊತ್ತಾ?

ದಿನಕ್ಕೊಂದು ನೂತನ ಫೀಚರ್ಗಳನ್ನು (Features) ಘೋಷಣೆ ಮಾಡುತ್ತಿದೆ ಮೆಟಾ (Whatsapp new features information) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ (Messeging Application)

ವಾಟ್ಸ್ಆ್ಯಪ್ (WhatsApp). ಈ ಆ್ಯಪ್ ಬಳಕೆದಾರರ ನೆಚ್ಚಿನ ಆ್ಯಪ್ ಆಗಿ ಗುರುತಿಸಿಕೊಂಡಿದೆ ಸದ್ಯ ತನ್ನ ಆಂಡ್ರಾಯ್ಡ್ (Android) ಮತ್ತು ಐಒಎಸ್(IOS) ಬಳಕೆದಾರರಿಗೆ ಇದೀಗ ಹೊಸ ಆಯ್ಕೆಯೊಂದನ್ನು

ನೀಡಿದೆ. ಈ ಹಿಂದೆ ವಾಟ್ಸಾಪ್ ನಲ್ಲಿ ಬಳಕೆದಾರರು ಆನೌನ್(Unknown) ನಂಬರ್​ಗೆ ಮೆಸೇಜ್ ಮಾಡಬೇಕು ಎಂದಾದಲ್ಲಿ ಕಾಂಟೆಕ್ಟ್ ಲಿಸ್ಟ್​ನಲ್ಲಿ(Contact List) ಆ ಮೊಬೈಲ್ ಸಂಖ್ಯೆಯನ್ನು ಸೇವ್

ಮಾಡಬೇಕಿತ್ತು. ಈ ಸಮಸ್ಯೆಯನ್ನು ಮನಗಂಡು ವಾಟ್ಸ್ಆ್ಯಪ್ ಇದೀಗ ನೂತನ ಫೀಚರ್ ಅನ್ನು (Whatsapp new features information) ಬಿಡುಗಡೆ ಮಾಡಿದೆ.

ಇನ್ನುಂದೆ ವಾಟ್ಸ್​ಆ್ಯಪ್​ನ ಆನೌನ್ ನಂಬರ್​ಗೆ ಆಂಡ್ರಾಯ್ಡ್ ಮತ್ತು ಐಎಸ್ ಬಳಕೆದಾರರು ಮೆಸೇಜ್ (Message) ಮಾಡಬೇಕು ಎಂದಾದಲ್ಲಿ ಮೊಬೈಲ್ ಸಂಖ್ಯೆಯನ್ನು (Mobile Number) ಸೇವ್ ಮಾಡಿಕೊಳ್ಳಬೇಕು

ಎಂದಿಲ್ಲ. ಬದಲಾಗಿ ಇನ್ನು ಮುಂದೆ ನೇರವಾಗಿ ನಂಬರ್ ಸೇವ್ ಮಾಡದೇನೆ ಮೆಸೇಜ್ ಮಾಡುವಂತಹ ಆಯ್ಕೆ ನೀಡಲಾಗಿದೆ. ಇದಕ್ಕಾಗಿ ಮೊದಲು ನೀವು ವಾಟ್ಸ್ಆ್ಯಪ್ ತೆರೆದು ಅದರಲ್ಲಿರುವ ‘ಸ್ಟಾರ್ಟ್ ನ್ಯೂ ಚಾಟ್’

(Start New Chat) ಎಂಬ ಆಯ್ಕೆಯ ಮೇಲೆ ಟ್ಯಾಪ್ (Tap) ಮಾಡಬೇಕು. ನಂತರ ಇಲ್ಲಿ ನಿಮಗೆ ಸರ್ಚ್ ಬಾರ್ (Search Bar) ಕಾಣಿಸುತ್ತದೆ ಇದರಲ್ಲಿ ನೀವು ಮೆಸ್ಸೇಜ್ ಮಾಡಬೇಕೆಂದಿರುವ ಅನೌನ್ ನಂಬರ್ ಅನ್ನು

ಟೈಪ್ ಮಾಡಿದ ನಂತರ ಆ ಕಾಂಟೆಕ್ಟ್ ಅನ್ನು ಹುಡುಕಿ ನಿಮಗೆ ಮೆಸೇಜ್ ಕಳುಹಿಸಲು ಆಯ್ಕೆ ಕೇಳುತ್ತದೆ.

ಇದನ್ನೂ ಓದಿ : ಲಾಲ್ ಬಾಗ್ Flower Show : ಹೂವರಳಿ ವಿಧಾನಸೌಧವಾದ್ರೆ ಹೇಗಿರುತ್ತೆ? ಬನ್ನಿ ನೋಡಿ ಲಾಲ್‌ಬಾಗ್‌ನಲ್ಲಿ

ಈ ಆಯ್ಕೆಯು ಇದೀಗ ಹೆಚ್ಚಿನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಿದೆ. ನಿಮಗೆ ಈ ಹೊಸ ಫೀಚರ್ ಸಿಗುತ್ತಿಲ್ಲ ಎಂದಾದರೆ ಪ್ಲೇ ಸ್ಟೋರ್ (Play Store) ಅಥವಾ ಆ್ಯಪ್ ಸ್ಟೋರ್​ಗೆ (APP Store)

ಹೋಗಿ ವಾಟ್ಸ್ಆ್ಯಪ್ ನೂತನ ಆವೃತ್ತಿಯನ್ನು ಮೊದಲು ಅಪ್ಡೇಟ್ (Update) ಮಾಡಿಕೊಳ್ಳಿ. ವಾಟ್ಸ್ಆ್ಯಪ್ ವೈಶಿಷ್ಟ್ಯದ ಕುರಿತು ಎಲ್ಲ ಮಾಹಿತಿಗಳನ್ನು ಹಂಚಿಕೊಳ್ಳುವ WaBetaInfo ಈ ಬಗ್ಗೆ ಮಾಹಿತಿ ನೀಡಿದೆ.

ನಿಮ್ಮ ಮೊಬೈಲ್ ನಂಬರ್ ಅನ್ನು ಹೈಡ್ ಸಹ ಮಾಡಬಹುದು

ಫೋನ್ ನಂಬರ್ ಪ್ರೈವಸಿ ಫೀಚರ್ ಕಮ್ಯೂನಿಟಿ ಅನೌನ್ಸ್ಮೆಂಟ್ (Phone Number Privacy Feature Community Announcement) ಅನ್ನು ವಾಟ್ಸ್ಆ್ಯಪ್ ಸದ್ಯದಲ್ಲೇ ಗ್ರೂಪ್​ನಲ್ಲಿ ಕೊಡಲಿದೆ.

ಹೆಸರೇ ಸೂಚಿಸುವಂತೆ, ಕಮ್ಯೂನಿಟಿ ಅನೌನ್ಸ್ಮೆಂಟ್ ಗ್ರೂಪ್​ನಲ್ಲಿ (Group) ಬಳಕೆದಾರರು ತಮ್ಮ ಮೊಬೈಲ್ ನಂಬರ್ ಅನ್ನು ಮರೆಮಾಡುವ ಮೂಲಕ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಈ ವೈಶಿಷ್ಟ್ಯವು ಸಹಾಯ

ಮಾಡುತ್ತದೆ. ಈ ಫೀಚರ್ ಮೂಲಕ, ನಿಮ್ಮ ಫೋನ್ ಸಂಖ್ಯೆಯು ಗ್ರೂಪ್ ಅಡ್ಮಿನ್ (Admin) ಮತ್ತು ಯಾರು ನಿಮ್ಮ ನಂಬರ್ ಅನ್ನು ಸೇವ್ ಮಾಡಿಟ್ಟುಕೊಂಡಿರುತ್ತಾರೋ ಅವರಿಗೆ ಮಾತ್ರ ಗೋಚರಿಸುತ್ತದೆ.

ತಮ್ಮ ಮೊಬೈಲ್ ಸಂಖ್ಯೆಗಳನ್ನು ಗ್ರೂಪ್​ನಲ್ಲಿ ಇರುವ ಇತರೆ ಸದಸ್ಯರಿಂದ ಮರೆಮಾಡಲು ಇದು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಆದರೂ , ಗ್ರೂಪ್ಅಡ್ಮಿನ್​ಗಳಿಗೆ ನಿಮ್ಮ ಫೋನ್ ಸಂಖ್ಯೆ ಯಾವಾಗಲೂ ಗೋಚರಿಸುತ್ತದೆ.

ಜೊತೆಗೆ ಗ್ರೂಪ್​ನಲ್ಲಿ ಮಾತ್ರ ಈ ಆಯ್ಕೆ ಕಾರ್ಯನಿರ್ವಹಿಸುತ್ತದೆ. ಇದು ಸದ್ಯದಲ್ಲೇ ಎಲ್ಲ ಆಂಡ್ರಾಯ್ಡ್ ಮತ್ತು ಐಇಎಸ್ ಬಳಕೆದಾರರಿಗೆ ಈ ಹೊಸ ಫೀಚರ್ ಅಪ್ಡೇಟ್ ಮಾಡುವ ಮೂಲಕ ಸಿಗಲಿದೆ ಎಂದು ವರದಿ ಆಗಿದೆ.

ರಶ್ಮಿತಾ ಅನೀಶ್

Exit mobile version