Bengaluru, ಆ.03: ಮುಂಬರುವ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ (Lalbagh Flower Show tomarrow) ನಿಮಿತ್ತ ನಾಳೆಯಿಂದ ಬೆಂಗಳೂರಿನ ಸಸ್ಯಕಾಶಿ ಲಾಲ್ ಬಾಗ್ (Lalbagh) ನಲ್ಲಿ
214ನೇ ಫ್ಲವರ್ ಶೋ(Flower Show) ಆರಂಭವಾಗಲಿದೆ. ನಾಳೆ ಸಂಜೆ 6 ಗಂಟೆಗೆ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ (Siddaramaiah) ಉದ್ಘಾಟಿಸಲಿದ್ದಾರೆ. ಆಗಸ್ಟ್ 4 ರಿಂದ
ಆಗಸ್ಟ್ 15 ರವರೆಗೆ ಈ ಪುಷ್ಪ ಪ್ರದರ್ಶನ ನಡೆಯಲಿದೆ. ಜನಜಂಗುಳಿಯಿಂದ ಉಂಟಾಗುವ ಸಮಸ್ಯೆಗಳಿಗೆ ಕಡಿವಾಣ ಹಾಕಲು ತೋಟಗಾರಿಕಾ ಇಲಾಖೆ ಬಿಗಿ ಬಂದೋ ಬಸ್ತ್ ಮಾಡಲು ನಿರ್ಧರಿಸಿದೆ.

76ನೇ ಸ್ವತಂತ್ರ ದಿನಾಚರಣೆಯ ಹಿನ್ನೆಲೆಯಲ್ಲಿ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ 214ನೇ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದ್ದು , ವಿಧಾನಸೌಧ (Vidhana Saudha) ಹಾಗೂ ಮಾಜಿ ಮುಖ್ಯಮಂತ್ರಿ
ಕೆಂಗಲ್ ಹನುಮಂತಯ್ಯನವರ (Kengal Hanumanthaiah) ತತ್ವಾದರ್ಶದಲ್ಲಿ ಈ ಬಾರಿಯ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಜತೆಗೆ 20 ಕೋಟಿ ರೂಪಾಯಿ ಇದಕ್ಕೆ ವೆಚ್ಚ ಮಾಡಲಾಗಿದ್ದು, 69 ಬಗೆಯ
ಹೂವುಗಳು ಪುಷ್ಪ ಪ್ರದರ್ಶನಕ್ಕೆ ಮುದ ನೀಡಲಿವೆ. ಈ ವರ್ಷ 10 ರಿಂದ ಮತ್ತು 12 ಲಕ್ಷ ಜನರು ಬರಬಹುದು ಎಂದು ಅಂದಾಜಿಸಲಾಗಿದೆ. ಫಲಪುಷ್ಪ ಪ್ರದರ್ಶನದಲ್ಲಿ ಹಲವಾರು ಕಲೆಗಳ ಸಾರುವ
ಕರಕುಶಲ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದ್ದು, ಪುಷ್ಪ ಪ್ರದರ್ಶನ ಒಟ್ಟು 10 ದಿನಗಳ (Lalbagh Flower Show tomarrow) ಕಾಲ ನಡೆಯಲಿದೆ.

ಒಟ್ಟು 200 ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ
ಶಾಲಾ ಮಕ್ಕಳಿಗೆ ಫಲಪುಷ್ಪ ಪ್ರದರ್ಶನ ಉಚಿತವಾಗಿರಲಿದ್ದು, ಶಾಲಾ ಮಕ್ಕಳಿಗೆ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿದೆ. ಟ್ರಾಫಿಕ್ (Traffic) ಸಮಸ್ಯೆ ತಪ್ಪಿಸಲು ಸಾರ್ವಜನಿಕರಿಗೆ ವಾಹನ ನಿಲುಗಡೆಗೆ
ವ್ಯವಸ್ಥೆ ಮಾಡಲಾಗಿದೆ. ಮೆಟ್ರೋ (Metro) ಹಾಗೂ ಬಿಎಂಟಿಸಿ (BMTC) ಬಸ್ಸುಗಳಿಂದಲೇ ಆದಷ್ಟು ಜನರು ಬಂದರೆ ಟ್ರಾಫಿಕ್ ಕಡಿಮೆಯಾಗಲಿದೆ ಎಂದು ತೋಟಗಾರಿಕೆ ಇಲಾಖೆ ಮನವಿ ಮಾಡಿದೆ.
ಒಟ್ಟು ನಾಲ್ಕೂ ಗೇಟ್ ಗಳಲ್ಲಿ ಜನರಿಗೆ ಅನುಕೂಲವಾಗುವ ನಿಟ್ಟಿನಿಂದ ಜನರಿಗೆ ಎಂಟ್ರಿಗೆ ಅವಕಾಶ ನೀಡಲಾಗಿದೆ. ಈ ಫ್ಲವರ್ ಶೋ ನೋಡಲು ಬರುವವರಿಗೆ ಎಂಟ್ರಿ ಫೀಜ್ (Entry Fees) ಮಕ್ಕಳಿಗೆ
30 ರುಪಾಯಿ ನಿಗದಿ ಮಾಡಿದ್ದು, ದೊಡ್ಡವರಿಗೆ 70 ರೂ ಹಾಗೂ ಒಟ್ಟು 200 ಸಿಸಿ ಟಿವಿ ಕ್ಯಾಮರಾಗಳನ್ನ (CCTV Camera) ಅಳವಡಿಕೆ ಮಾಡಲಾಗಿದೆ.
ಇದನ್ನೂ ಓದಿ : ಪ್ರತಿ ಅಕ್ರಮ ಫ್ಲೆಕ್ಸ್, ಬ್ಯಾನರ್ಗೆ ₹ 50,000 ದಂಡ- ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಕಡಕ್ ಎಚ್ಚರಿಕೆ
ಈ ಪ್ಲವರ್ ಶೋ ಒಟ್ಟು 10 ದಿನಗಳ ಕಾಲ ನಡೆಯಲಿದ್ದು ಪ್ರತಿದಿನ 30 ಜನ ಪೋಲಿಸರು ಹಾಗೂ 200 ಜನ ತೋಟಗಾರಿಕಾ ಸಿಬ್ಬಂದಿಯನ್ನ ನೇಮಿಸಲಾಗಿದೆ.ಇನ್ನು ಹೆಲ್ತ್ ಕೇರ್ ಸೆಂಟರ್(Health
Care Centre), ಎರಡು ಅಂಬುಲೆನ್ಸ್ (Ambulance), ಮಹಿಳೆಯರ ಶಿಬಿರಗಳನ್ನ ಯಾರಿಗೂ ಏನೂ ಸಮಸ್ಯೆಯಾಗದಂತೆ ಸಹ ಮಾಡಲಾಗಿದೆ.ಅಲ್ಲದೆ ಜನರಿಗೆ ಲಾಲ್ ಬಾಗ್ ನಲ್ಲಿರುವ ನಾಯಿಗಳಿಂದ
ಏನೂ ಸಮಸ್ಯೆಯಾಗಬರಾದು ಎನ್ನುವ ಕಾರಣಕ್ಕೆ ನಾಯಿಗಳಿಗೆ ವ್ಯಾಕ್ಸಿನ್ (Vaccine) ಸಹ ಮಾಡಿಸಲಾಗಿದೆ.

ಈ ಬಾರಿ ಸ್ವದೇಶಿ ಹೂಗಳಿಗೆ ಹೆಚ್ಚಿನ ಪ್ರಮುಖ್ಯತೆಯನ್ನು ಈ ಪ್ರದರ್ಶನದಲ್ಲಿ ನೀಡಲಾಗುತ್ತಿದ್ದು, ಈಗಾಗಲೇ ಲಾಲ್ ಬಾಗ್ ನಾ ನರ್ಸರಿಯಲ್ಲಿ 7 ಲಕ್ಷದಷ್ಟು ಹೂಗಳನ್ನ ಬೆಳೆಸಲಾಗಿದೆ. ಅಂದಾಜು
13 ರಿಂದ 15 ಲಕ್ಷದಷ್ಟು ಹೂಗಳು ಫ್ಲವರ್ ಶೋ ಗೆ ಬೇಕಾಗುವ ಸಾಧ್ಯತೆ ಇದ್ದು, ನಮ್ಮ ರಾಜ್ಯ ಸೇರಿದಂತೆ ತಮಿಳುನಾಡು (Tamil Nadu), ಆಂಧ್ರ ಪ್ರದೇಶ (Andhra Pradesh), ಊಟಿ
(OOTY), ನಂದಿಗಿರಿಧಾಮ, ಕೆಮ್ಮಣ್ಣುಗುಂಡಿ ಗಿರಿಧಾಮಗಳಿಂದ ಇನ್ನು ಉಳಿದ 8 ಲಕ್ಷದಷ್ಟು ಹೂಗಳನ್ನ ಹೂಗಳನ್ನ ತರಿಸಿಕೊಳ್ಳಲಾಗಿದೆ.
ರಶ್ಮಿತಾ ಅನೀಶ್