ಹೊಸ ಐಟಿ ನಿಯಮದ ಬಗ್ಗೆ ವಾಟ್ಸಪ್‌ ಬಳಕೆದಾರರು ಹೆದರಬೇಕಿಲ್ಲ: ಸಚಿವ ರವಿಶಂಕರ್‌ ಪ್ರಸಾದ್‌

ಹೊಸದಿಲ್ಲಿ, ಮೇ. 27: ಭಾರತ ಸರ್ಕಾರ ಜಾರಿಗೆ ತಂದಿರುವ ಹೊಸ ಐಟಿ ನಿಯಮದಿಂದಾಗಿ ವಾಟ್ಸ್‌ಆಪ್‌ ಬಳಕೆದಾರರಿಗೆ ಯಾವುದೇ ತೊಂದರೆ ಇಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ.

ಹೊಸ ಐಟಿ ನಿಯಮದಿಂದಾಗಿ ವಾಟ್ಸ್‌ಆಪ್‌ ಬಳಕೆದಾರರ ಗೌಪ್ಯತೆಗೆ ತೊಂದರೆಯಾಗುತ್ತದೆ ಎಂದು ಆರೋಪಿಸಿ ಸಂಸ್ಥೆಯು ದಿಲ್ಲಿ ಹೈಕೋರ್ಟ್‌ ಮೊರೆ ಹೋಗಿತ್ತು.ವಾಟ್ಸಪ್‌ ಬಳಕೆದಾರರ ಚಾಟ್‌ ನಡುವೆ ಎಂಡ್‌ ಟು ಎಂಡ್‌ ಎನ್ಕ್ರಿಪ್ಷನ್‌ ಹೊಂದಿದ್ದು ಹೊಸ ಐಟಿ ನಿಯಮದಿಂದ ಅದನ್ನು ತೆಗೆಯಬೇಕಾಗುತ್ತದೆ ಎಂದು ವಾಟ್ಸ್ಆಪ್‌ ಹೇಳಿತ್ತು.

ಹೊಸ ಐಟಿ ನಿಯಮದ ಪ್ರಕಾರ ಸರ್ಕಾರವು ತಾನು ಹೇಳುವ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳನ್ನು 36 ಗಂಟೆಯೊಳಗೆ ಅಳಿಸಬೇಕಾಗುತ್ತದೆ. ವಾಟ್ಸ್‌ಆಪ್‌ ಸಂದೇಶದ ಮೂಲ ಯಾವುದು ಎಂಬುದನ್ನು ಸರ್ಕಾರಕ್ಕೆ ಮಾಹಿತಿ ನೀಡಬೇಕಾಗುತ್ತದೆ.

Exit mobile version