ಆಸ್ಟ್ರಾಜೆನಿಕಾ ಅಡ್ಡಪರಿಣಾಮದ ಬಗ್ಗೆ ಸ್ಪಷ್ಟನೆ: ಲಸಿಕೆ ಬಳಕೆ ಮಾಡಬಹುದು ಎಂದ ಡಬ್ಲ್ಯುಎಚ್ಒ

ಲಂಡನ್, ಮಾ. 18: ಕೊರೊನಾ ವಿರುದ್ಧ ಆಕ್ಸ್​ಫರ್ಡ್ ಆಸ್ಟ್ರಾಜೆನೆಕಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ತನ್ನ ಬೆಂಬಲವನ್ನು ಸೂಚಿಸಿದ್ದು, ಈ ಲಸಿಕೆಯ ಬಳಕೆ ಮಾಡಬಹುದು ಎಂದು ಅನುಮೋದನೆ ನೀಡಿದೆ. ಈ ಲಸಿಕೆ ಪಡೆದ ಸುಮಾರು ಕೆಲವರಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಉಂಟಾಗುವುದರ ಜೊತೆಗೆ, ಎರಡು ಸಾವು ಸಂಭವಿಸಿದ ಕಾರಣ ಫ್ರಾನ್ಸ್, ಜರ್ಮನಿ, ಇಟಲಿ ಸಹಿತ ಆರಕ್ಕೂ ಹೆಚ್ಚು ಯುರೋಪಿಯನ್ ದೇಶಗಳು ಆಕ್ಸ್​ಫರ್ಡ್ ಆಸ್ಟ್ರಾಜೆನೆಕಾ ಲಸಿಕೆ ಬಳಕೆಯನ್ನು ನಿಲ್ಲಿಸಿದ್ದವು.

ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತನ್ನ ಪ್ರತಿಕ್ರಿಯೆ ತಿಳಿಸಿದ್ದು, ಆಸ್ಟ್ರಾಜೆನೆಕಾ ಲಸಿಕೆಯ ಲಾಭಗಳು ಅಥವಾ ಧನಾತ್ಮಕ ಅಂಶಗಳು ಅದರ ಅಪಾಯದ ಪ್ರಮಾಣವನ್ನು ಮೀರಿಸುತ್ತವೆ. ಆದ್ದರಿಂದ ಈ ಲಸಿಕೆಯ ಬಳಕೆಯನ್ನು ಮುದುವರಿಸಲು ಸೂಚಿಸಿದೆ.

ಕೊವಿಡ್-19 ವಿರುದ್ಧದ ಲಸಿಕೆಯು ಇತರೆ ಕಾರಣಗಳಿಂದ ಉಂಟಾಗುವ ಸಾವು ಅಥವಾ ಅನಾರೋಗ್ಯವನ್ನು ತಡೆಗಟ್ಟುವುದಿಲ್ಲ. ರಕ್ತ ಹೆಪ್ಪುಗಟ್ಟಿದಂಥ ಘಟನೆಗಳು ನಿಯಮಿತವಾಗಿ ಉಂಟಾಗುತ್ತಿತ್ತು. ದೊಡ್ಡ ಮಟ್ಟದ ಲಸಿಕೆ ವಿತರಣಾ ಅಭಿಯಾನದ ಸಂದರ್ಭ ಕೆಲವು ಪ್ರತಿಕೂಲ ಘಟನೆಗಳು ನಡೆಯುವುದು, ಅವುಗಳ ವಿರುದ್ಧ ಪರಿಣಾಮಕಾರಿಯಾಗಿ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳುವುದು ಅನಿವಾರ್ಯ. ಇಂಥಾ ಘಟನೆಗಳು ಲಸಿಕೆಗೆ ಸಂಬಂಧಪಟ್ಟವು ಎಂದು ಅರ್ಥವಲ್ಲ. ಆದರೆ, ಅವುಗಳನ್ನು ತನಿಖೆ ನಡೆಸುವುದು ಒಳ್ಳೆಯ ನಡೆಯೇ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪತ್ರದಲ್ಲಿ ಉಲ್ಲೇಖಿಸಿದೆ.

Exit mobile version