ಯಾರಾಗಲಿದ್ದಾರೆ ಈ ಬಾರಿಯ ಆರ್.ಸಿ.ಬಿ ಕ್ಯಾಪ್ಟನ್? ; ಗ್ಲೆನ್ ಮ್ಯಾಕ್ಸವೇಲ್ ಅಥವಾ ಫ್ಯಾಫ್ ದು ಪ್ಲೆಸಿಸ್?

rcb

ಈಗಾಗಲೇ ಟಾಟಾ ಐಪಿಎಲ್ 2022ರ ಆಕ್ಷನ್ ಕೂಡ ಮುಗಿದಿದ್ದು, ಈ ಬಾರಿ ಒಟ್ಟು 10 ತಂಡಗಳು ಅಖಾಡಕ್ಕೆ ಇಳಿದು ಸ್ಪರ್ಧಿಸಲಿದೆ.

ಪ್ರತಿವರ್ಷ 8 ತಂಡಗಳು ಐಪಿಎಲ್ ಕಪ್ಗಾಗಿ ಸೆಣಸಾಡುತ್ತಿತ್ತು. ಆದರೆ ಈ ಬಾರಿಯ ಟಾಟಾ ಐಪಿಎಲ್ ನಲ್ಲಿ ಹೊಸ 2 ತಂಡಗಳು ಸೇರ್ಪಡೆಗೊಂಡಿವೆ. ಈ ಕಾರಣ ಪಂದ್ಯಗಳ ನಡುವೆ ಮತ್ತಷ್ಟು ಪೈಪೋಟಿ ಇರಲಿದೆ ಎಂಬುದು ಖಚಿತವಾಗಿದೆ. ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಯಂಟ್ಸ್ ಈ ಎರಡು ಹೊಸ ತಂಡಗಳು ಯಾವ ರೀತಿ ಕಮಾಲ್ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ಸದ್ಯ ಈ ಬಾರಿಯ ಐಪಿಎಲ್ ಸೀಸನ್ ನಲ್ಲಿ ಎಲ್ಲರ ಚಿತ್ತ ಆರ್.ಸಿ.ಬಿ ತಂಡದತ್ತ ವಾಲಿದೆ ಎಂಬುದು ಗಮನಾರ್ಹ ಅಂಶ ಎಂದೇ ಹೇಳಬಹುದು. ಆರ್.ಸಿ.ಬಿ ತಂಡದ ಬಗ್ಗೆ ಒಂದಿಷ್ಟು ಕುತೂಹಲಕಾರಿ ಮಾಹಿತಿಗಳು ಲಭಿಸಿದ್ದು, ಏನೆಲ್ಲಾ ಬದಲಾವಣೆ ಮತ್ತು ನಿರೀಕ್ಷೆಗಳು ತಂಡದ ಮೇಲಿದೆ ತಿಳಿಯೋಣ.

ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಆರ್.ಸಿ.ಬಿ ತಂಡಕ್ಕೆ ಅಪಾರ ಅಭಿಮಾನಿಗಳ ದಂಡೇ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಸದ್ಯ ಈ ವರ್ಷದಿಂದ ಆರ್.ಸಿ.ಬಿ ತಂಡಕ್ಕೆ ವಿರಾಟ್ ಕೊಹ್ಲಿ ಅವರು ನಾಯಕನಾಗಿ ಆಡುತ್ತಿಲ್ಲ ಎಂಬುದು ಆರ್.ಸಿ.ಬಿ ಅಭಿಮಾನಿಗಳಿಗೆ ಬೇಸರದ ಸಂಗತಿ ಬಿಟ್ಟರೆ ಆರ್.ಸಿ.ಬಿ ತಂಡದಲ್ಲಿ ವಿರಾಟ್ ಕೊಹ್ಲಿ ಇರುವುದು ಮನಸ್ಸಿಗೆ ನೆಮ್ಮದಿ ತಂದಿದೆ. ಪ್ರತಿವರ್ಷವೂ ಆರ್.ಸಿ.ಬಿ ತಂಡವು ಕಪ್ ಗೆಲ್ಲಬೇಕು ಎಂದು ಆಶಿಸಿ, “ಈ ಸಲ ಕಪ್ ನಮ್ದೇ” ಎಂದು ಘೋಷಣೆ ಕೂಗುವ ಮೂಲಕ ತಮ್ಮ ಪ್ರೀತಿ, ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ಇಷ್ಟು ವರ್ಷವೂ ಕೂಡ ಆರ್.ಸಿ.ಬಿ ತಂಡಕ್ಕೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಇಷ್ಟು ವರ್ಷದಲ್ಲಿ ಆರ್.ಸಿ.ಬಿ ತಂಡ ಕಪ್ ಗೆಲ್ಲಲು ವಿಫಲವಾಗಿದೆ. ಆದರೂ ಕೂಡ ಅಭಿಮಾನಿಗಳು ಎಂದಿಗೂ ತಂಡವನ್ನು ಕಡೆಗಣಿಸಿ ಮಾತನಾಡಿರುವ ನಿದರ್ಶನ ತಡಕಾಡಿದರೂ ಸಿಗೊದಿಲ್ಲ!

ಅಷ್ಟು ಗಟ್ಟಿಯಾಗಿ ಬೇರೂರಿದೆ ಆರ್.ಸಿ.ಬಿ ತಂಡದ ಅಭಿಮಾನಿಗಳ ಆಗಾಧ ಶಕ್ತಿ! ಈ ಬಾರಿಯ ಟಾಟಾ ಐಪಿಎಲ್ ಸೀಸನ್‍ಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಆರ್.ಸಿ.ಬಿ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂದು ಕೂಗುವ ಮೂಲಕ ಪಂದ್ಯ ವೀಕ್ಷಣಗೆ ಕಾಯತೊಡಗಿದ್ದಾರೆ. ಆರ್.ಸಿ.ಬಿ ಪಂದ್ಯ ಶುರುವಾಗುವ ಮುನ್ನ ಯಾವುದೇ ಕೆಲಸಗಳಿದ್ದರೂ ವೇಗವಾಗಿ ಮುಗಿಸಿಕೊಂಡು ನಂತರ ಪಂದ್ಯ ವೀಕ್ಷಣಗೆ ಕೂರುವ ಅಭಿಮಾನಿಗಳು, ಪಂದ್ಯ ಶುರುವಾದ ಮೇಲೆ ಯಾವ ಕೆಲಸದತ್ತ ಕೂಡ ಗಮನ ಹರಿಸುವುದಿಲ್ಲ ಎಂಬುದು ಸ್ಪಷ್ಟ! ಮೊದಲು ನಮ್ಮ ತಂಡದ ಪಂದ್ಯ ಮುಖ್ಯ ಆನಂತರ ಮಿಕ್ಕಿದ್ದು ಎಂದು ಹೇಳುವಷ್ಟು ಹುಚ್ಚು ಅಭಿಮಾನಿಗಳ ಬಳಗ ಆರ್.ಸಿ.ಬಿ ತಂಡಕ್ಕಿದೆ.

ಇನ್ನೇನು ಟಾಟಾ ಐಪಿಎಲ್ ಪಂದ್ಯಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಆರ್.ಸಿ.ಬಿ ಅಭಿಮಾನಿಗಳು ಪ್ರಾರಂಭಕ್ಕೆ ಮೀನಮೇಷ ಎಣಿಸುತ್ತಿದ್ದಾರೆ. ಸದ್ಯ ಆರ್.ಸಿ.ಬಿ ತಂಡಕ್ಕೆ ಯಾರು ನಾಯಕರಾಗಲಿದ್ದಾರೆ ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ! ಇದು ಅಭಿಮಾನಿಗಳಿಗೆ ಸಾಕಷ್ಟು ಗೊಂದಲ ಸೃಷ್ಟಿಮಾಡಿದೆ ಜೊತೆಗೆ ಬಹಳ ಕಾತುರತೆ ಕಾಡುತ್ತಿರುವ ಸಂಗತಿಯಾಗಿದೆ. ಆರ್.ಸಿ.ಬಿ ತಂಡಕ್ಕೆ ನಾಯಕನನ್ನು ಆಯ್ಕೆ ಮಾಡಲು ಅಭಿಮಾನಿಗಳಿಗೆ ಎರಡು ಆಯ್ಕೆಗಳು ಮುಂದಿವೆ. ಒಬ್ಬರು ಚೆನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಕರ್ಷಕ ಓಪನಿಂಗ್ ಬ್ಯಾಟ್ಸ್‍ಮನ್ ಆಗಿದ್ದ ಫ್ಯಾಫ್ ಡು ಪ್ಲೆಸಿಸ್, ಮತ್ತೊಬ್ಬರು ಆರ್.ಸಿ.ಬಿ ತಂಡದ ಆಲ್ ರೌಂಡರ್ ಆಗಿ ಅಬ್ಬರಿಸುವ ಗ್ಲೆನ್ ಮ್ಯಾಕ್ಸವೆಲ್.

Image credits : RCBFANS.offical
ಈ ಇಬ್ಬರ ನಡುವೆ ನಾಯಕನ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಹುಟ್ಟಿಕೊಂಡಿದೆ. ಒಂದಿಷ್ಟು ಆರ್.ಸಿ.ಬಿ ಅಭಿಮಾನಿಗಳು ದು ಪ್ಲೆಸಿಸ್ ನಾಯಕರಾದರೆ ಒಳ್ಳೆಯದು ಎಂದು ಹೇಳಿದರೆ, ಮತ್ತೊಂದಿಷ್ಟು ಅಭಿಮಾನಿಗಳು ಗ್ಲೆನ್ ಮ್ಯಾಕ್ಸ್‌‌ವೆಲ್ ಬೆಂಗಳೂರಿನ ತಂಡಕ್ಕೆ ಶ್ರಮಿಸಿದ್ದಾರೆ. ಅವರೇ ಕ್ಯಾಪ್ಟನ್ ಆಗುವುದು ಒಳಿತು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಇಬ್ಬರ ಪೈಕಿ ಯಾರು ಆರ್.ಸಿ.ಬಿ ತಂಡಕ್ಕೆ ಕ್ಯಾಪ್ಟನ್ ಆಗಬೇಕು ಎಂಬುದನ್ನು ಕಮೆಂಟ್ ಮೂಲಕ ತಿಳಿಸಿ!
Exit mobile version